ಬಿಜೆಪಿ ಮಣಿಸಲು ಮಾಜಿ ನಕ್ಸಲರಿಗೆ ಮಮತಾ ಮೊರೆ

Published : May 11, 2019, 09:45 AM IST
ಬಿಜೆಪಿ ಮಣಿಸಲು ಮಾಜಿ ನಕ್ಸಲರಿಗೆ ಮಮತಾ ಮೊರೆ

ಸಾರಾಂಶ

ಪಶ್ಚಿಮ ಬಂಗಾಳದಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲೇಬೇಕು ಎಂಬ ಹಟ| ಬಿಜೆಪಿ ಮಣಿಸಲು ಮಾಜಿ ನಕ್ಸಲರಿಗೆ ಮಮತಾ ಮೊರೆ| 

ಮಿಡ್ನಾಪುರ+[ಮೇ.11]: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಸಾಧ್ಯವಾದಷ್ಟುಹೆಚ್ಚಿನ ಸ್ಥಾನಗಳನ್ನು ಗೆಲ್ಲಲೇಬೇಕು ಎಂಬ ಹಟಕ್ಕೆ ಬಿದ್ದಿರುವ ಬಿಜೆಪಿಯನ್ನು ಕಟ್ಟಿಹಾಕಲು ಮಾಜಿ ನಕ್ಸಲರನ್ನು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಬಳಸಿಕೊಳ್ಳುತ್ತಿದೆ.

ಪೊಲೀಸ್‌ ದೌರ್ಜನ್ಯ ವಿರೋಧಿ ಸಾರ್ವಜನಿಕ ಸಮಿತಿ ಎಂಬ ಮಾವೋವಾದಿ ನಕ್ಸಲರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದವರು ಹಾಗೂ ಮಾವೋವಾದಿಗಳ ವಿರುದ್ಧ ಹೋರಾಟ ಮಾಡಿಕೊಂಡು ಬಂದಿರುವವರನ್ನು ಒಗ್ಗೂಡಿಸಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ.

ಮಾವೋವಾದಿಗಳ ಬಲಿಷ್ಠ ನೆಲೆಯಾಗಿರುವ ಝಾರ್‌ಗ್ರಾಮ, ಮೇದಿನಿಪುರ, ಬಂಕುರ ಹಾಗೂ ಪುರುಲಿಯಾ ಜಿಲ್ಲೆಗಳಲ್ಲಿ ತೃಣಮೂಲ ಕಾಂಗ್ರೆಸ್‌ ಈ ತಂತ್ರಗಾರಿಕೆ ನಡೆಸಿದೆ. ಪಶ್ಚಿಮ ಮಿಡ್ನಾಪುರ ಹಾಗೂ ಝಾರ್‌ಗ್ರಾಮಗಳಲ್ಲಿ 200 ಮಂದಿಯನ್ನೊಳಗೊಂಡ ಇಂತಹ ಪಡೆ ತೃಣಮೂಲ ವಿರುದ್ಧ ಪ್ರಚಾರ ನಡೆಸುತ್ತಿದೆ. ಬಿಜೆಪಿ ಎಂಬುದು ಕಾರ್ಯಕರ್ತರ ಆಧರಿತ ಪಕ್ಷ. ಅವರ ಸಿದ್ಧಾಂತ ಧರ್ಮಾಧಾರಿತವಾದುದು. ಮಾಜಿ ಮಾವೋವಾದಿಗಳಿಗೆ ತಳಮಟ್ಟದ ಪರಿಸ್ಥಿತಿ ಗೊತ್ತಿದೆ. ಜನರನ್ನು ತಲುಪಲು ಅವರನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ಪಶ್ಚಿಮ ಮಿಡ್ನಾಪುರ ತೃಣಮೂಲ ಜಿಲ್ಲಾಧ್ಯಕ್ಷ ಅಜಿತ್‌ ಮೈಟಿ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!