ಪ್ರಧಾನಿ ಹುದ್ದೆ ಕುರಿತು ಕೊನೆಗೂ ಮೌನ ಮುರಿದ ಗಡ್ಕರಿ!

Published : May 11, 2019, 09:24 AM IST
ಪ್ರಧಾನಿ ಹುದ್ದೆ ಕುರಿತು ಕೊನೆಗೂ ಮೌನ ಮುರಿದ ಗಡ್ಕರಿ!

ಸಾರಾಂಶ

ಪ್ರಧಾನಿ ಹುದ್ದೆಗೆ ನಾನು ಡಾರ್ಕ್ ಹಾರ್ಸ್‌ ಅಲ್ಲ| ಪ್ರಧಾನಿ ಸ್ಥಾನದ ಕುರಿತು ಗಡ್ಕರಿ ಮಾತು!

ನವದೆಹಲಿ[ಮೇ.11]: ಈ ಬಾರಿ ಅತಂತ್ರ ಲೋಕಸಭೆ ಸೃಷ್ಟಿಯಾದರೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಪ್ರಧಾನಿ ಸ್ಥಾನಕ್ಕೆ ‘ಡಾರ್ಕ್ ಹಾರ್ಸ್‌’ (ಅನಿರೀಕ್ಷಿತ ಆಯ್ಕೆ) ಆಗಬಹುದು ಎಂಬ ವರದಿಗಳನ್ನು ಸ್ವತಃ ಗಡ್ಕರಿ ಅವರೇ ತಳ್ಳಿ ಹಾಕಿದ್ದಾರೆ.

ಪ್ರಧಾನಿ ಸ್ಥಾನಕ್ಕೆ ನಾನು ಡಾರ್ಕ್ ಹಾರ್ಸ್‌ ಅಲ್ಲ. ತಮಗೆ ಪ್ರಧಾನಿಯಾಗುವ ಉದ್ದೇಶ, ಬಯಕೆ ಅಥವಾ ಕನಸು ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಟೀವಿ ವಾಹಿನಿಯೊಂದರ ಜತೆ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಎನ್‌ಡಿಎ ಬಹುಮತ ಗಳಿಸುತ್ತದೆ. ನರೇಂದ್ರ ಮೋದಿ ನಾಯಕತ್ವದಲ್ಲಿ ಸರ್ಕಾರ ರಚನೆ ಮಾಡುತ್ತದೆ ಎಂದಿದ್ದಾರೆ.

ನಾವು ಎನ್‌ಡಿಎ ಸರ್ಕಾರ ರಚನೆ ಮಾಡುತ್ತೇವೆ. ಬಿಜೆಪಿ ಸರ್ಕಾರವನ್ನಲ್ಲ. ನಾವು ಬಹುಮತ ಗಳಿಸಿದರೂ, ಅದನ್ನು ಎನ್‌ಡಿಎ ಸರ್ಕಾರ ಅಂತಲೇ ಕರೆಯುತ್ತೇವೆ ಎಂದಿದ್ದಾರೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!