ಯಾರ ಪರ ಪ್ರಚಾರ ಮಾಡ್ತಾರೆ 'ತಿಥಿ' ಗಡ್ಡಪ್ಪ?

Published : Apr 09, 2019, 10:40 AM ISTUpdated : Apr 09, 2019, 11:13 AM IST
ಯಾರ ಪರ ಪ್ರಚಾರ ಮಾಡ್ತಾರೆ 'ತಿಥಿ' ಗಡ್ಡಪ್ಪ?

ಸಾರಾಂಶ

ಸುಮಲತಾ, ನಿಖಿಲ್‌ ಇಬ್ಬರೂ ಇಷ್ಟ, ಆದರೆ ಪ್ರಚಾರ ಮಾಡಲ್ಲ ಎಂದು ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ಹೇಳಿದ್ದಾರೆ.

ಮೈಸೂರು[ಏ.09]: ಮಂಡ್ಯ ರಾಜಕೀಯ ರಂಗೇರುತ್ತಿದ್ದು ಅದೃಷ್ಟಯಾರಿಗಿದೆಯೋ ಅವರು ಗೆಲ್ಲುತ್ತಾರೆ ಎಂದು ‘ತಿಥಿ’ ಸಿನಿಮಾ ಖ್ಯಾತಿಯ ಗಡ್ಡಪ್ಪ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಗೆಲ್ಲಬೇಕು ಎಂದು ನಾನು ಹೇಳುವುದಿಲ್ಲ. ಜನ ಯಾರನ್ನು ಬೆಂಬಲಿಸಲು ತೀರ್ಮಾನ ಮಾಡುತ್ತಾರೆಯೋ ಅವರು ಗೆಲ್ಲುತ್ತಾರೆ. ಕುಮಾರಸ್ವಾಮಿಯಾಗಲಿ, ಸುಮಲತಾ ಆಗಲಿ ನನ್ನನ್ನು ಭೇಟಿಯಾಗಿಲ್ಲ. ನನಗೆ ಇಬ್ಬರೂ ಇಷ್ಟಎಂದರು. ನನಗೆ ಅನಾರೋಗ್ಯ ಇರುವುದರಿಂದ ನಾನು ಯಾರ ಪರವಾಗಿಯೂ ಪ್ರಚಾರಕ್ಕೆ ಹೋಗುವುದಿಲ್ಲ. ನಾನು ಮತ್ತು ನನ್ನ ಮಗನೇ ನಮ್ಮ ಕಷ್ಟನಿಭಾಯಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಸದ್ಯ ಮಂಡ್ಯ ಲೋಕಸಭಾ ಕ್ಷೇತ್ರ ಭಾರೀ ಕುತೀಹಲ ಮೂಡಿಸಿದ್ದು, ಸುಮಲತಾ ಹಾಗೂ ನಿಖಿಲ್ ಕುಮಾರಸ್ವಾಮಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!