ಕೊನೆಗಳಿಗೆಯಲ್ಲಿ ಹಾಲಿ MP ಸಂಗಣ್ಣಗೆ ಟಿಕೆಟ್ ಸಿಕ್ಕಿದ್ದೇಗೆ..? ಇದು 'ಕರಡಿ' ಆಟ..!

By Web DeskFirst Published Mar 30, 2019, 5:06 PM IST
Highlights

ಕೊಪ್ಪಳ ಹಾಲಿ ಸಂಸದ ಕರಡಿ ಸಂಗಣ್ಣ ಅವರು ಈ ಬಾರಿ ಟಿಕೆಟ್ ಸಿಗುತ್ತೋ ಇಲ್ಲ ಎನ್ನುವ ಆತಂಕದಲ್ಲಿದ್ದರು. ಕೊನೆಗಳಿಗೆಯಲ್ಲಿ ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಕೆಲ ಷರತ್ತುಗೊಂದಿಗೆ ಸಂಗಣ್ಣಗೆ ಟಿಕೆಟ್ ಘೋಷಣೆ ಮಾಡಿದೆ. ಆದ್ರೆ ಕೊನೆ ಕ್ಷಣದಲ್ಲಿ ಸಂಗಣ್ಣಗೆ ಟಿಕೆಟ್ ನೀಡಿರುವ ಹಿಂದಿನ ಸಿಕ್ರೇಟ್ ಬೇರೆನೇ ಇದೆ. ಆ ಕಂಪ್ಲೀಟ್ ಸಿಕ್ರೇಟ್ ಇಲ್ಲಿದೆ.

ಕೊಪ್ಪಳ, (ಮಾ.30): ನಾಯಕರ ದುಂಬಾಲು ಬಿದ್ದು ಕೊನೆ ಕ್ಷಣದಲ್ಲಿ ಟಿಕೆಟ್ ಪಡೆದುಕೊಳ್ಳುವಲ್ಲಿ ಕೊಪ್ಪಳ ಹಾಲಿ ಸಂಸದ ಕರಡಿ ಸಂಗಣ್ಣ ಯಶಸ್ವಿಯಾಗಿದ್ದಾರೆ. ಸಂಗಣ್ಣಗೆ ಟಿಕೆಟ್ ನೀಡಬಾರದು ಎನ್ನುವ ಹಂತಕ್ಕೆ ಬಿಜೆಪಿ ಹೈಕಮಾಂಡ್ ಹೋಗಿತ್ತು. ಆದ್ರೆ ಕೆಲವು ಒತ್ತಡಕ್ಕೆ ಮಣಿದು ಹೈಕಾಂಡ್ ಕರಡಿ ಸಂಗಣ್ನಗೆ ಟಿಕೆಟ್ ನೀಡಬೇಕಾಯಿತು. ಇದೀಗ ಸಂಗಣ್ಣಗೆ ಮಣೆಹಾಕಿರುವುದರ ಹಿಂದಿನ ಸಿಕ್ರೇಟ್ ಏನು ಎನ್ನುವುದು ಬಟಾಯಲಾಗಿದೆ.

"

ರಾಜ್ಯ ಬಿಜೆಪಿಯ ಮೊದಲ ಪಟ್ಟಿಯಲ್ಲಿ ಹಾಲಿ ಸಂಸದರಿಗೆ  ಟಿಕೆಟ್ ನೀಡಲಾಗಿತ್ತು.ಸಂಗಣ್ಣ ಅವರನ್ನು ಹೊರತುಪಡಿಸಿ ಉಳಿದ ಹಾಲಿ ಸಂಸದರಿಗೆ ಟಿಕೆಟ್‌ ಘೋಷಿಸಲಾಗಿತ್ತು. 

ಬಿಜೆಪಿ ಮೊದಲ ಪಟ್ಟಿ: ಕೊಪ್ಪಳ ಹಾಲಿ ಸಂಸದ ಸಂಗಣ್ಣ ಕರಡಿಗೆ ಟಿಕೆಟ್ ಇಲ್ಲ?

ಕರಡಿ ಸಂಗಣ್ಣ ವಿರುದ್ಧ ವಿರೋಧಿ ಅಲೆ ಇರುವುದರಿಂದ ಅವರಿಗೆ ಟಿಕೆಟ್ ನೀಡಬಾರದೆಂದು ಸ್ಥಳೀಯ ಮುಖಂಡರು ಒತ್ತಡ ಹಾಕಿದ್ದರು. ಹೀಗಾಗಿ ಟಿಕೆಟ್ ಘೋಷಣೆ ಮಾಡಿರಲಿಲ್ಲ. 

ಈ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಬೆಂಗಳೂರಿನಲ್ಲಿಯೇ ಮೊಕ್ಕಾಂ ಹೂಡಿದ್ದ ಸಂಗಣ್ಣ, ಬಿ.ಎಸ್‌.ಯಡಿಯೂರಪ್ಪ ಸೇರಿ ಅನೇಕರನ್ನು ಭೇಟಿಯಾಗಿ ಟಿಕೆಟ್ ಗಾಗಿ ದುಂಬಾಲು ಬಿದ್ದಿದ್ದರು. ಕೊನೆಗೆ ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಸಂಗಣ್ಣಗೆ ಟಿಕೆಟ್ ನೀಡಿದೆ.

ಟಿಕೆಟ್ ಹಿಂದಿನ ಸಿಕ್ರೇಟ್..!
ರಾಜ್ಯ ಬಿಜೆಪಿಯ ಮೊದಲ ಎರಡು ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲ ಎಂದು ಆತಂಕದಲ್ಲಿ ಕರಡಿ ಸಂಗಣ್ಣ ಕೊನೆಗಳಿಗೆಯಲ್ಲಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ ಟಿಕೆಟ್ ಸಿಕ್ಕಿರುವ ಹಿಂದೆ ಪಂಚಮಸಾಲಿ‌ ಪೀಠದ ಸ್ವಾಮೀಜಿ ಕೈ ಇದೆ ಎಂದು ಕೇಳಿಬಂದಿದೆ.

ಕರಡಿ ಸಂಗಣ್ಣ ಅವರು ಪಂಚಮಸಾಲಿ‌ ಪೀಠದ ಸ್ವಾಮೀಜಿಗಳಿಂದ ಒತ್ತಡ ಹಾಕಿಸಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.

ಆರ್.ಎಸ್.ಎಸ್ ಮುಖಂಡರ ಹಾಗೂ ಪಕ್ಷದ ಮುಖಂಡರ ಮೇಲೆ ಸ್ವಾಮೀಜಿಗಳಿಂದ ಒತ್ತಡ ಹಾಕಿಸಿದ್ದು, ಟಿಕೆಟ್ ಸಿಗದಿದ್ರೆ ಕಾಂಗ್ರೆಸ್ ಬೆಂಬಲಿಸುವ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.

ಕ್ಷೇತ್ರದಲ್ಲಿ ಪಂಚಮಶಾಲಿ ಮತಗಳು ಅಧಿಕವಾಗಿರುವುದನ್ನು ರಾಜ್ಯ ನಾಯಕರ ಮೂಲಕ ಹೈಕಮಾಂಡ್ ಗಮನಕ್ಕೆ ತಂದು ಕೊನೆಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಮುಂದೆ ಬರೋ ಚುನಾವಣೆಯಲ್ಲಿ ಸಂಗಣ್ಣ ಕರಡಿ‌ ಯಾರ ಪರವೂ ಲಾಭಿ‌ ಮಾಡದಂತೆ ಹಾಗೂ ಮಕ್ಕಳ ಪರವಾಗಿ ಲಾಭಿ ಮಾಡದೆ ಟಿಕೆಟ್ ಕೊಟ್ಟವರಿಗೆ ಕೆಲಸ ಮಾಡುವಂತೆ ಷರತ್ತು ವಿಧಿಸಿ ಹೈಕಮಾಂಡ್ ಟಿಕೆಟ್ ನೀಡಲಾಗಿದೆ.

ಈ ಹಿಂದೆ 2018ರ ಕೊಪ್ಪಳ ವಿಧಾನಸಭಾ ಚುನಾವಣೆ ವೇಳೆ ತಮ್ಮ ಪುತ್ರನಿಗೆ ಟಿಕೆಟ್ ನೀಡಬೇಕೆಂದು ಭರ್ಜರಿ ಲಾಭಿ ನಡೆಸಿದ್ದರು. ಇದಕ್ಕಾಗಿಯೇ ಹೈಕಮಾಂಡ್ ಎಚ್ಚರಿಕೆ ನೀಡಿ ಸಂಗಣ್ಣಗೆ ಟಿಕೆಟ್ ನೀಡಿದೆ.

click me!