ಪಕ್ಕಾ ಫಲಿತಾಂಶ ಮೊದಲೆ ನೀಡಿದ್ದ ಈ ಎಕ್ಸಿಟ್ ಪೋಲ್ ಗಳು

Published : May 24, 2019, 12:02 AM IST
ಪಕ್ಕಾ ಫಲಿತಾಂಶ ಮೊದಲೆ ನೀಡಿದ್ದ ಈ ಎಕ್ಸಿಟ್ ಪೋಲ್ ಗಳು

ಸಾರಾಂಶ

ದೇಶಾದ್ಯಂತ ಕಮಲ ಅಭೂತಪೂರ್ವ ಗೆಲುವು ಸಾಧಿಸಿದೆ. ಸ್ವತಃ ಬಿಜೆಪಿಯವರೇ ಅಚ್ಚರಿ ಪಡುವ ರೀತಿಯಲ್ಲಿ ಫಲಿತಾಂಶ ಹೊರಕ್ಕೆ ಬಂದಿದೆ. ಹಾಗಾದರೆ ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿದ್ದಕ್ಕೂ ಅಸಲಿ ಫಲಿತಾಂಶಕ್ಕೂ ತಾಳೆ ಆಗುತ್ತಿದೆಯಾ?

ಬೆಂಗಳೂರು[ಮೇ. 23]  ಲೋಕ ಸಮರದಲ್ಲಿ ಸತ್ಯವಾಗಿದೆ  ಟುಡೇಸ್ ಚಾಣಕ್ಯ ಭವಿಷ್ಯ. ಇಂಡಿಯಾ ಟುಡೇ ನೀಡಿದ್ದ ಎಕ್ಸಿಟ್ ಪೋಲ್ ಸರ್ವೆ ಹತ್ತಿರಕ್ಕೆ ಹೋಗಿ ನಿಂತಿದೆ.

ಈ ಬಾರಿಯ ಲೋಕ ಸಮರದಲ್ಲಿ ಸಮೀಕ್ಷೆಗಳು ಭಾರೀ ಸದ್ದು ಮಾಡಿದ್ದವು. ಆದ್ರಲ್ಲೂ ಚುನಾವಣೋತ್ತರ ಮತಗಟ್ಟೆ ಸಮೀಕ್ಷೆ ಗಳು ದೇಶಾದ್ಯಂತ ಭಾರೀ ಚರ್ಚೆಯನ್ನೇ ಹುಟ್ಟುಹಾಕಿತ್ತು. ಮಹಾ ಘಟಬಂಧನ್ ನಾಯಕರಂತೂ ಸಮೀಕ್ಷಾ ಸಂಸ್ಥೆಗಳನ್ನು ಬಿಜೆಪಿ ಏಜೆಂಟರು ಮಾಡಿದ್ದಾರೆ ಎಂದು ಟೀಕಿಸಿದ್ದರು.

ಆದರೆ ಮತ ಎಣಿಕೆ ಆರಂಭವಾಗ್ತಿದ್ದಂತೆ ಸಮೀಕ್ಷೆಗಳು ನಿಜವಾಗ ತೊಡಗಿತು. ವಿರೋಧಿಗಳ ನಮೋ ಸೃಷ್ಟಿಸಿದ ಸುನಾಮಿಗೆ ಕೊಚ್ಚಿಹೋದರು. ಸಮೀಕ್ಷೆಗಳು ಹೇಳಿದ್ದ ಸ್ಥಾನಗಳೇ ಫಲಿತಾಂಶದಲ್ಲೂ ಬಂದಿದ್ದು, ಏಜೆನ್ಸಿಗಳನ್ನು ಅನುಮಾನದಿಂದ ನೋಡುತ್ತಿದ್ದವರಿಗೆ ಸರಿಯಾದ ಉತ್ತರ ಕೊಟ್ಟಿತು.

ಎನ್ಡಿಎ ಮೈತ್ರಿ ಕೂಟ 350 ಸ್ಥಾನ ಗೆಲ್ಲಲಿದೆ ಎಂದಿತ್ತು.  ಮೋದಿ ಪಡೆ 355 ಸ್ಥಾನ ಪಡೆಯುವ ಮೂಲಕ ಟುಡೇಸ್ ಚಾಣಕ್ಯ ಭವಿಷ್ಯ ನಿಜ ಮಾಡಿತು. ಇಂಡಿಯಾ ಟುಡೇ ಮತ್ತು ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯಲ್ಲಿ ಎನ್ಡಿಎಗೆ 339 ಸ್ಥಾನ ಸಿಕ್ಕಿದ್ದರೆ, ಫಲಿತಾಂಶ ಬಂದಾಗ ಆ ಸಂಖ್ಯೆ 355ಸ್ಥಾನಕ್ಕೇರಿತು

ನಿಜವಾಯ್ತು ಸಮೀಕ್ಷೆ ‘ಭವಿಷ್ಯ’
ಸಮೀಕ್ಷಾ ಸಂಸ್ಥೆ                    ಹೇಳಿದ್ದಿಷ್ಟು           ಸಿಕ್ಕಿದ್ದಿಷ್ಟು      
ಟುಡೇಸ್ ಚಾಣಕ್ಯ                  350                 351    
ಇಂಡಿಯಾ ಟುಡೇ -ಆಕ್ಸಿಸ್       339                351
ಟೈಮ್ಸ್ ನೌ                         306              351    
ಜನ್ ಕಿ ಬಾತ್                      305            351    
ಇಂಡಿಯಾ ಟಿವಿ                     300             351
 

ಕರ್ನಾಟಕದ ವಿಚಾರದಲ್ಲಿಯೂ ಸತ್ಯವಾದ ಸಮೀಕ್ಷೆ
ಸಮೀಕ್ಷಾ ಸಂಸ್ಥೆ                   ಎಕ್ಸಿಟ್ ಪೋಲ್        ಫಲಿತಾಂಶ      
ಇಂಡಿಯಾ ಟುಡೇ -ಆಕ್ಸಿಸ್          21-25               25
ಟುಡೇಸ್ ಚಾಣಕ್ಯ                      23                   25
ಟೈಮ್ಸ್ ನೌ                             21                   25
ಜನ್ ಕಿ ಬಾತ್                         18-20                25
ರಿಪಬ್ಲಿಕ್-ಸಿವೋಟರ್                 18                      25 
(ವಾಯ್ಸ್ ವಿಥ್ ಗ್ರಾಫಿಕ್ಸ್:- ರಾಜ್ಯದಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆಲ್ಲಲಿದೆ ಎಂದಿದ್ದ  ಇಂಡಿಯಾ ಟುಡೇ -ಆಕ್ಸಿಸ್ ಸಮೀಕ್ಷೆ ಅತ್ಯಂತ ವಿಶ್ವಾನೀಯ ಎಂದು ಸಾಬೀತಾಯಿತು.

 

ಪಕ್ಕಾ ಫಲಿತಾಂಶ ಮೊದಲೆ ನೀಡಿದ್ದ ಈ ಎಕ್ಸಿಟ್ ಪೋಲ್ ಗಳು

These agencies agency's exit poll results hold true

ದೇಶಾದ್ಯಂತ ಕಮಲ ಅಭೂತಪೂರ್ವ ಗೆಲುವು ಸಾಧಿಸಿದೆ. ಸ್ವತಃ ಬಿಜೆಪಿಯವರೇ ಅಚ್ಚರಿ ಪಡುವ ರೀತಿಯಲ್ಲಿ ಫಲಿತಾಂಶ ಹೊರಕ್ಕೆ ಬಂದಿದೆ. ಹಾಗಾದರೆ ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿದ್ದಕ್ಕೂ ಅಸಲಿ ಫಲಿತಾಂಶಕ್ಕೂ ತಾಳೆ ಆಗುತ್ತಿದೆಯಾ?

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!