ಫಲಿತಾಂಶಕ್ಕೂ ಮುನ್ನ ನಿಖಿಲ್ ಮಂಡ್ಯ ಸಂಸದ ?

Published : May 22, 2019, 04:07 PM IST
ಫಲಿತಾಂಶಕ್ಕೂ ಮುನ್ನ ನಿಖಿಲ್  ಮಂಡ್ಯ ಸಂಸದ ?

ಸಾರಾಂಶ

ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ ಫಲಿತಾಂಶಕ್ಕೂ ಮುನ್ನ ನಿಖಿಲ್ ಮಂಡ್ಯ ಸಂಸದರಾಗಿದ್ದಾರೆ.

ಮಂಡ್ಯ : ಲೋಕಸಭಾ ಚುನಾವಣಾ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಫಲಿತಾಂಶ ಪ್ರಕಟಕ್ಕೆ ದಿನವಷ್ಟೇ ಬಾಕಿ ಉಳಿದಿದೆ. 

ಆದರೆ ಚುನಾವಣಾ ಫಲಿತಾಂಶ ಪ್ರಕಟವಾಗುವುದಕ್ಕೂ ಮುನ್ನ ನಿಖಿಲ್ ಕುಮಾರಸ್ವಾಮಿ ಸಂಸದರಾಗಿದ್ದಾರೆ. ವಿವಾಹ ಆಹ್ವಾನ ಪತ್ರಕೆಯಲ್ಲಿ ಸಂಸದರು ಮಂಡ್ಯ ಎಂದು ಪ್ರಕಟಿಸಲಾಗಿದೆ. 

ಜೂನ್ 6 ರಂದು ಮಂಡ್ಯ ಜಿಲ್ಲೆ ಶ್ರೀ ರಂಗಪಟ್ಟಣದ ಟಿಎಪಿಎಸಿಎಂ ಕಲ್ಯಾಣ ಮಂಟಪದಲ್ಲಿ ನಡೆಯುವ ಅಶೋಕ್ ಕುಮಾರ್ ಹಾಗೂ ಅಭೀಲಾಷಾ ಎಂಬುವರ ವಿವಾಹದ ಆಹ್ವಾನ ಪತ್ರಿಕೆಯಲ್ಲಿ ನಿಖಿಲ್ ಫೋಟೊ ಮುದ್ರಿಸಿ ಸಂದರೆಂದು ಹಾಕಲಾಗಿದೆ. 

ನಿಖಿಲ್ ಗೆಲುವಿಗಾಗಿ ಅಹಲ್ಯದೇವಿ ಮೊರೆಹೋದ ಬೆಂಬಲಿಗರು!

ವಿಶೇಷ ಆಹ್ವಾನಿತರ ಸ್ಥಾನದಲ್ಲಿ ನಿಖಿಲ್ ಕುಮಾರಸ್ವಾಮಿ - ಜೆಡಿಎಸ್ ಯುವ ಸಾರಥಿ, ಮಂಡ್ಯ ಸಂಸದರೆಂದು ನಮೂದಿಸಲಾಗಿದೆ. 

Exit Polls 2019: ಮಂಡ್ಯ ರಣಕಣ ಗೆಲುವಿನ ಅಂತಿಮ ಸ್ಪಷ್ಟ ಚಿತ್ರಣ

ಈ ಹಿಂದೆ ಚುನಾವಣೆ ಮುಗಿದ ವೇಳೆ ನಿಖಿಲ್ ಕುಮಾರಸ್ವಾಮಿ ಮಂಡ್ಯ ಸಂಸದರು ಎಂಬ ನಾಮಫಲಕ ಉಡುಗೋರೆ ನೀಡಿದ್ದರು. ಇದೀಗ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿದ್ದು, ಫಲಿತಾಂಶ ಬಂದ ಮೇಲಷ್ಟೇ ಎಲ್ಲಾ ಕುತೂಹಲಕ್ಕೂ ತೆರೆ ಬೀಳಲಿದೆ.

 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!