ಮೋದಿ ಪ್ರಧಾನಿಯಾಗುವುದು ಕಷ್ಟ : ಭವಿಷ್ಯ ನುಡಿದ ಚೌಡೇಶ್ವರಿ ದೇವಿ

Published : May 22, 2019, 01:27 PM ISTUpdated : May 22, 2019, 01:42 PM IST
ಮೋದಿ ಪ್ರಧಾನಿಯಾಗುವುದು ಕಷ್ಟ  : ಭವಿಷ್ಯ ನುಡಿದ ಚೌಡೇಶ್ವರಿ ದೇವಿ

ಸಾರಾಂಶ

ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇತ್ತ ಪ್ರದಾನಿ ಮೋದಿ ಅವರು ಮತ್ತೊಮ್ಮೆ ಅಧಿಕಾರಕ್ಕೆ ಏರಲಿದ್ದಾರಾ ಎನ್ನುವ ಕುತೂಹಲ ಎಲ್ಲರಲ್ಲಿದೆ. ಇದೇ ವೇಳೆ ಚೌಡೇಶ್ವರಿ ದೇವಿ ಮೋದಿ ರಾಜಕೀಯದ ಬಗ್ಗೆ ಭವಿಷ್ಯವೊಂದನ್ನು ನುಡಿದಿದ್ದಾಳೆ.

ತುಮಕೂರು : ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇತ್ತ ತುಮಕೂರಿನ  ದಸರೀಘಟ್ಟ ಚೌಡೇಶ್ವರಿ ದೇವಿ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯದ ಬಗ್ಗೆ ಭವಿಷ್ಯ ನುಡಿದಿದ್ದಾಳೆ.

ಮೋದಿ ಮತ್ತೇ ಪ್ರಧಾನಿ ಆಗೋದು ಸುಲಭವಲ್ಲ. ಪ್ರಯಾಸದಿಂದ ಪ್ರಧಾನಿಯಾಗಲಿದ್ದಾರೆ. ಆದರೂ ಕೂಡ ಅವರು ಎರಡನೇ ಬಾರಿ ಮತ್ತೆ ಪ್ರಧಾನಿಯಾಗುತ್ತಾರೆ. ಎರಡನೇ ಬಾರಿ ಪ್ರಧಾನಿಯಾಗಬೇಕೆಂಬ ಆಸೆ ಈಡೇರುತ್ತದೆ ಎಂದು ಭವಿಷ್ಯ ನುಡಿಯಲಾಗಿದೆ.  

ಇನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶೀಘ್ರದಲ್ಲಿ ನನ್ನ ಕ್ಷೇತ್ರಕ್ಕೆ ಕರೆಸಿಕೊಳ್ಳುತ್ತೇವೆ ಎಂದು ತಿಪಟೂರು ತಾಲೂಕಿನಲ್ಲಿರುವ ಚೌಡೇಶ್ವರು ದೇವಿ ಭವಿಷ್ಯ ನುಡಿದಿದ್ದಾರೆ. 

2004ರ ಮರುಕಳಿಸುವಿಕೆ ಗುಮಾನಿ: ಹೇಗಾಗಲಿದ್ದಾರೆ ಮೋದಿ ಮತ್ತೆ ಪ್ರಧಾನಿ?

 ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗುವ ಮುನ್ನವೂ ಕೂಡ ಈ ದೇವಿ ಭವಿಷ್ಯ ನುಡಿದಿದ್ದು, ಅದೂ ನಿಜವಾಗಿತ್ತು. ಇದೀಗ ಮತ್ತೆ ಪ್ರಧಾನಿಯಾಗುತ್ತಾರೆ ಎನ್ನುವ ಭವಿಷ್ಯವನ್ನು ಕಾದು ನೋಡಬೇಕಿದೆ. 

ಇನ್ನು ಈ ಹಿಂದೆ ಜೆಡಿಎಸ್ ಮುಖಂಡ ಎಚ್.ಡಿ. ದೇವೇಗೌಡ  ಅವರು ಕೂಡ ಪ್ರಧಾನಿಯಾವುದಾಗಿ ಈ ಹಿಂದೆ ಚೌಡೇಶ್ವರಿ ದೇವಿ ಭವಿಷ್ಯ ನುಡಿದಿದ್ದು ಸತ್ಯವಾಗಿತ್ತು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!