ಸುಮಲತಾ ನಮ್ಮ ವಿರೋಧಿ ಅಲ್ಲ: ಸಿದ್ದರಾಮಯ್ಯ ಅಚ್ಚರಿ ಹೇಳಿಕೆ..!

By Web DeskFirst Published Apr 14, 2019, 3:35 PM IST
Highlights

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಎಲೆಕ್ಷನ್ ಪ್ರತೀಕಾರವನ್ನು ಮಂಡ್ಯದಲ್ಲಿ  ತೀರಿಸಿಕೊಳ್ಳುತ್ತಿದ್ದಾರಾ..?  ಎನ್ನುವ ಸುದ್ದಿ ಲೋಕಸಭಾ ಚುನಾವಣೆ ದಿನಾಂಕ ಪ್ರಕಟವಾಗಿನಿಂದೂ ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿದೆ. ಇದೀಗ ಸಿದ್ದರಾಮಯ್ಯ ಅವರ ಹೇಳಿಕೆ ಆ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ. ಅಷ್ಟಕ್ಕೂ ಸಿದ್ದು ಹೇಳಿದ್ದೇನು..? 

ಮೈಸೂರು, (ಏ.14): ಸುಮಲತಾ ಅಂಬರೀಶ್ ನಮ್ಮ ವಿರೋಧ ಎಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಬಾರೀ ಸಂಚಲನ ಮೂಡಿಸಿದೆ.

ಮೈಸೂರಿನಲ್ಲಿ ಪ್ರಚಾರದ ವೇಳೆ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದೆ.  ನಾವೇ 82, ಜೆಡಿಎಸ್ 37 ಸ್ಥಾನ ಗೆದ್ದಿದ್ರು, ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ಮೈತ್ರಿ ಮಾಡಿಕೊಂಡಿದ್ದೇವೆ. ನಮಗೆ ಬಿಜೆಪಿ, ಪ್ರತಾಪ್ ಸಿಂಹ ವಿರೋಧಿಗಳು. ಮಂಡ್ಯದಲ್ಲಿ ಸುಮಲತಾ ನಮ್ಮ ವಿರೋಧಿ ಅಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. 

ನನ್ನ ಹೆಸರು ಹೇಳಿ ಸುಮಲತಾಗೆ ಮತ ಕೇಳಿದರೆ ಮಂಗಳಾರತಿ ಎತ್ತಿ

ಇದು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಗಳಿವ. ಯಾಕಂದ್ರೆ ಶನಿವಾರವಷ್ಟೇ ಮಂಡ್ಯದಲ್ಲಿ ಬೆಂಬಲಿತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪ್ರಚಾರದ ವೇಳೆ ಯಾವುದೇ ಕಾರಣಕ್ಕೂ ಮಂಡ್ಯದಲ್ಲಿ ಸುಮಲತಾ ಅವರನ್ನ ನಂಬಬೇಡಿ. ನನ್ನ ಹೆಸರು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಹೇಳಿದ್ದು, ನನ್ನ ಹೆಸರು ಕೇಳಿಕೊಂಡು ವೋಟ್ ಕೇಳಲು ಬಂದ್ರೆ ಮಂಗಳಾರತಿ ಎತ್ತಿ ಎಂದು ಹೇಳಿದ್ದರು.

ಆದ್ರೆ ಇದೀಗ ಸಿದ್ದರಾಮಯ್ಯ ಅವರು ಸುಮಲತಾ ಪರ ಸಾಫ್ಟ್‌ ಕಾರ್ನ್ ಮಾತುಗಳನ್ನಾಡಿರುವುದು ಹಲವರ ಹುಬ್ಬೇರುವಂತೆ ಮಾಡಿದೆ. ಈಗಾಗಲೇ ಮಂಡ್ಯದಲ್ಲಿ ಬಿಜೆಪಿ ಸುಮಲತಾಗೆ ಬೇಷರತ್ ಬೆಂಬಲ ಕೊಟ್ಟಿರುವುದು ಜೆಡಿಎಸ್ ಗೆ ನಿದ್ದೆಗೆಡಿಸಿದೆ.

ಸುಮಲತಾ ಹಿಂದಿದ್ದಾರಾ ಕಾಣದ ’ಕೈ’ಗಳು?

 ಜತೆಗೆ ಜೋಡೆತ್ತುಗಳೆಂದೆ ಕರೆಯಲ್ಪಡುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್, ಸುಮಲತಾ ಪರ ಪ್ರಚಾರಕ್ಕೆ ಹೋದ ಕಡೆಗಳೆಲ್ಲ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.

ಅಷ್ಟೇ ಅಲ್ಲದೇ ಪ್ರಚಾರದ ವೇಳೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ. ಇದೀಗ ಸಿದ್ದರಾಮಯ್ಯ ಹೇಳಿಕೆ ಜೆಡಿಎಸ್ ನಾಯಕರನ್ನು ಮತ್ತಷ್ಟು ನಿದ್ದೆಗೆಡಿಸಿದೆ.

ಚಾಮುಂಡೇಶ್ವರಿಯಲ್ಲಿ ದೇವೇಗೌಡರ ಕಾರಣದಿಂದ ಕಂಡ ಸೋಲು ಸಿದ್ದರಾಮಯ್ಯ ಅವರಿಗೆ ಎಂದೂ ಆರದ ಗಾಯ ಇದ್ದಹಾಗೆ. ಅದರ ಪ್ರತೀಕಾರವನ್ನು ಮಂಡ್ಯದಲ್ಲಿ ತೀರಿಸಿಕೊಳಲು  ಸಿದ್ದರಾಮಯ್ಯ ಪ್ರಯತ್ನಿಸಿದ್ದಾರೆ ಎನ್ನುವ ಮಾತುಗಳು ಲೋಕಸಭಾ ಎಲೆಕ್ಷನ್ ಆರಂಭದಿಂದಲೂ ರಾಜ್ಯ ರಾಜಕಾರಣದಲ್ಲಿ ಹರಿದಡುತ್ತಿದ್ದವು. 

click me!