ಚುನಾವಣೆ ಪ್ರಚಾರದಲ್ಲಿ ಸಾರಿಗೆ ಸಚಿವನ ವಿವಾದಾತ್ಮಕ ಹೇಳಿಕೆ | ಸ್ಥಳೀಯರ ವಿರುದ್ಧ ಬಹಿರಂಗವಾಗಿ ತೊಡೆ ತಟ್ಟಿದ ಸಚಿವ ಡಿ.ಸಿ.ತಮ್ಮಣ್ಣ| ಮದ್ದೂರು ಎಳನೀರು ಮಾರುಕಟ್ಟೆ ಬಳಿ ಸಚಿವನ ಸಂಸ್ಕೃತಿ ಅನಾವರಣ|
ಮಂಡ್ಯ, [ಮಾ.30]: ಮಂಡ್ಯ ಲೋಕಸಬಾ ಕ್ಷೇತ್ರದಲ್ಲಿ ದಿನಕ್ಕೊಂದು ವಿಶೇಷ ಬೆಳವಣಿಗೆಗಳು ನಡೆಯುತ್ತಲೇ ಇವೆ. ಇಂದು [ಶನಿವಾರ] ಪ್ರಚಾರದ ಸಮಯದಲ್ಲಿ ಸಾರಿಗೆ ಸಚಿವನ ವಿವಾದಾತ್ಮಕ ಹೇಳಿಕೆ ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮದ್ದೂರಿನ ಎಳನೀರು ಮಾರುಕಟ್ಟೆ ಬಳಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡುತ್ತಿರುವ ವೇಳೆ ಸಂಯಮ ಕಳೆದುಕೊಂಡ ಡಿ.ಸಿ.ತಮ್ಮಣ್ಣ, ಎಳನೀರು ಮಾರುಕಟ್ಟೆ ಒಳಗೆ ಮಜಾ ಮಾಡ್ಕೊಂಡು ಟೀಕೆ ಮಾಡ್ಕೊಂಡು ಇದ್ದಿರಾ. ನೀವೂ ಟೀಕೆ ಮಾಡೋದ್ನಾ ಕೇಳಿದ್ದೀನಿ. ತಾಕತ್ತಿದ್ರೆ, ಅಪ್ಪನಿಗೆ ಹುಟ್ಟಿದ್ರೆ ಬಂದು ಎದುರಿಗೆ ನಿಂತು ಟೀಕೆ ಮಾಡ್ಲೀ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
undefined
ಎಳನೀರು ಮಾರುಕಟ್ಟೆ ಚರಿತ್ರೆ ನನಗೆ ಗೊತ್ತು. ಹಣ ಮಜಾ ಮಾಡ್ಕೊಂಡು ಟೀಕೆ ಮಾಡ್ತಿರೇನ್ರೀ. ಅಂತಹವರು ಯಾರಾರು ಇದ್ರೆ ಮುಂದೆ ಬನ್ನಿ. ಹಿಂದೆ ನಿಂತು ಮಾತಾಡೋದಲ್ಲ, ಬೈಟ್ ಕೊಡೋದಲ್ಲ ಎಂದು ಸ್ಥಳೀಯರ ವಿರುದ್ಧ ಬಹಿರಂಗವಾಗಿ ತೊಡೆ ತಟ್ಟಿದರು.
ಹೀಗೆ ಜೆಡಿಎಸ್ ನಾಯಕರು ಒಬ್ಬರೇ ನಾಲಿಗೆ ಹರಿಬಿಡುತ್ತಿದ್ದಾರೆ. ಈ ಮೊದಲು ಸಚಿವ ರೇವಣ್ಣ ಅವರು ಸುಮಲತಾ ಅವರನ್ನ ವೈಯಕ್ತಿಕವಾಗಿ ನಿಂದಿಸಿದ್ದರು. ಅದಾದ ಬಳಿಕ ಸಾರಾ ಮಹೇಶ್ ಗುಡುಗಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಟೀಕೆಗಳು ವ್ಯಕ್ತವಾಗಿದ್ದವು.
ಇದ್ರಿಂದ ಜೆಡಿಎಸ್ ಗೆ ಮುಜುಗರ ಮಾತ್ರವಲ್ಲದೇ ಡ್ಯಾಮೇಜ್ ಆಗುತ್ತೆ ಎನ್ನವುದನ್ನ ಅರಿತ ಸಿಎಂ ಕುಮಾರಸ್ವಾಮಿ ಅವರು ಯಾವುದೇ ಅಸಂಬದ್ಧ ಹೇಳಿಕೆ ನೀಡಬಾರದು ಎಂದು ತಮ್ಮ ನಾಯಕರಿಗೆ ಸೂಚಿಸಿದ್ದಾರೆ. ಆದರೂ ಇಂದು ಡಿ.ಸಿ. ತಮ್ಮ ಎಳೆನೀರು ಮಾರುಕಟ್ಟೆಯಲ್ಲಿ ಗುಡುಗಿದ್ದು, ಹಲವರ ಕೆಂಗಣ್ಣಿಗೆ ಗುರಿಯಾದರು.