ಮಾಜಿ ಸಚಿವ, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ತಂಗಡಗಿ ಅವರು ಬಿಜೆಪಿ ಶಾಸಕ ಬಿ. ಶ್ರೀರಾಮುಲು ಅವರನ್ನು ಹಾಡಿಹೊಗಳಿದ್ದಾರೆ.
ಕೊಪ್ಪಳ, [ಏ.17]: ಶ್ರೀರಾಮುಲು ಒಳ್ಳೆ ನಾಯಕ. ಆದ್ರೆ ಬಿಜೆಪಿ ಶ್ರೀರಾಮಲುಗೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ
ಕೊಪ್ಪಳದಲ್ಲಿ ನಡೆದ ಪ್ರಚಾರದ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಶಿವರಾಜ್ ತಂಗಡಗಿ, ಮೈತ್ರಿ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಪರ ಮತಯಾಚಿಸಿದರು. ಈ ವೇಳೆ ಬಿಜೆಪಿ ಶಾಸಕ ಶ್ರೀರಾಮುಲು ಅವರನ್ನು ಗುಣಗಾನ ಮಾಡಿದರು.
ಶ್ರೀರಾಮಲುಗೆ ಬಿಜೆಪಿ ಅನ್ಯಾಯ ಮಾಡಿದ್ದು, ವೋಟಿಗಾಗಿ ಶ್ರೀರಾಮಲು ಅವರನ್ನು ಬಲಿಪಶು ಮಾಡಿದೆ. ವೋಟು,ದುಡ್ಡಿಗಾಗಿ ರೆಡ್ಡಿ, ರಾಮಲು ಬೇಕು ಎಂದು ಹೇಳಿದರು.
ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಜನಾರ್ಧನ ರೆಡ್ಡಿ ಕಾರಣ. ಶ್ರೀರಾಮಲು ಮುಗ್ದರು. ಅವರಿಗೆ ನಿಜವಾಗಿ ಅನ್ಯಾಯವಾಗಿದೆ ಎಂದು ಶ್ರೀರಾಮುಲು ಹಾಗೂ ಜನಾರ್ದನಾ ರೆಡ್ಡಿ ಅವರನ್ನು ಕೊಂಡಾಡಿದರು.
ನಾಯಕ ಸಮುದಾಯದ ಮತ ಸೆಳೆಯಲು ತಂಗಡಗಿ ಶ್ರೀರಾಮಲು ಹಸೆರು ಬಳಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.