ಮಂಡ್ಯದಲ್ಲಿ ಏಪ್ರಿಲ್ 18 ರಂದು ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದ್ದು ಈ ಬಾರಿ ಮಾಜಿ ಸಂಸದೆ ರಮ್ಯಾ ಮತದಾನಕ್ಕೆ ಬರುತ್ತಾರೋ? ಇಲ್ಲವೋ? ಎಂಬ ಪ್ರಶ್ನೆ ಸಹಜವಾಗಿ ಮೂಡಿದೆ.
ಮಂಡ್ಯ [ಏ. 17]: ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ವಾರ್ ನಡೆಸುವ ರಮ್ಯಾ ದಿವ್ಯ ಸ್ಪಂದನ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಚೆಕ್ ಮಾಡಿಕೊಳ್ಳಿ ಎಂದು ಟ್ವಿಟ್ ಮಾಡಿ ಜನರಿಂದ ಟೀಕೆಗೆ ಗುರಿಯಾಗಿದ್ದರು.
2018 ರ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡದೇ ದೂರ ಉಳಿದಿದ್ದ ಮಾಜಿ ಸಂಸದೆ ರಮ್ಯಾ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆ ವೇಳೆಯೂ ಮತದಾನಕ್ಕೆ ಬಂದಿರಲಿಲ್ಲ.ಹಿಂದೊಮ್ಮೆ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ರಮ್ಯಾ ನಂತರ ಬದಲಾದ ರಾಜಕಾರಣದ ವಾತಾವರಣದಲ್ಲಿ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಜವಾಬ್ದಾರಿ ಹೊತ್ತುಕೊಂಡಿದ್ದರು.
ಈ ಹುಡುಗನ ಕೆನ್ನೆ ಗಿಲ್ಲಬೇಕು ಎಂದ ರಮ್ಯಾಗೆ ಭರಪೂರ ಪ್ರತಿಕ್ರಿಯೆ
ಮಂಡ್ಯದಿಂದ ಮನೆಯನ್ನು ಖಾಲಿ ಮಾಡಿದ್ದ ರಮ್ಯಾ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಸಂವಾದದಲ್ಲಿ ಕಾಣಿಸಿಕೊಂಡಿದ್ದರು. ರಮ್ಯಾ ತಮ್ಮ ಮತದಾನದ ವಿವರ ಬದಲಾಯಿಸಿದ್ದಾರೆ ಎನ್ನಲಾಗಿತ್ತು. ಆದರೆ ರಮ್ಯಾ ವೋಟಿಂಗ್ ಮಂಡ್ಯದಲ್ಲಿಯೇ ಇದೆ. ಈ ಬಾರಿಯೂ ರಮ್ಯಾ ವೋಟಿಂಗ್ ಮಾಡಲ್ಲ ಎಂದು ಅವರ ಆಪ್ತ ವಲಯ ಹೇಳಿದೆ.