ಹೀಗೇಕಾಯ್ತು? ವೇದಿಕೆಯಲ್ಲೇ ರಾಜೀವ್‌ ಗೌಡಗೆ ಸೋನಿಯಾ ತರಾಟೆ!

Published : Apr 04, 2019, 09:54 AM IST
ಹೀಗೇಕಾಯ್ತು? ವೇದಿಕೆಯಲ್ಲೇ ರಾಜೀವ್‌ ಗೌಡಗೆ ಸೋನಿಯಾ ತರಾಟೆ!

ಸಾರಾಂಶ

ರಾಜೀವ್‌ ಗೌಡಗೆ ಸೋನಿಯಾ ತರಾಟೆ!| ಪಕ್ಷದ ಪ್ರಣಾಳಿಕೆ ಬಿಡುಗಡೆ ವೇದಿಕೆಯಲ್ಲೇ ಯುಪಿಎ ಅಧ್ಯಕ್ಷೆ ಅತೃಪ್ತಿ| ರಾಹುಲ್‌ ಚಿತ್ರ, ಕಾಂಗ್ರೆಸ್‌ ಚಿಹ್ನೆ ಚಿಕ್ಕದಾಗಿ ಮುದ್ರಿಸಿದ್ದಕ್ಕೆ ಅಸಮಾಧಾನ

ನವದೆಹಲಿ[ಏ.04]: ಕಾಂಗ್ರೆಸ್‌ ಪಕ್ಷ ಮಂಗಳವಾರ ಭಾರೀ ಮಹತ್ವಾಕಾಂಕ್ಷೆಯ ಪ್ರಣಾಳಿಕೆ ಬಿಡುಗಡೆ ಮಾಡಿತಾದರೂ, ಪ್ರಣಾಳಿಕೆಯ ಮುಖಪುಟ ವಿನ್ಯಾಸದ ಬಗ್ಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ವೇದಿಕೆಯ ಮೇಲೆಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಪ್ರಣಾಳಿಕೆ ಬಿಡುಗಡೆಗೂ ಮುನ್ನ ಸೋನಿಯಾ ಗಾಂಧಿ ಅವರು ಪ್ರಣಾಳಿಕೆ ಉಸ್ತುವಾರಿ ಹೊತ್ತಿದ್ದರು ಎನ್ನಲಾದ ಕರ್ನಾಟಕದ ಸಂಸದ, ಎಐಸಿಸಿ ಸಂಶೋಧನಾ ಘಟಕದ ಮುಖ್ಯಸ್ಥ ಪ್ರೊ

ರಾಜೀವ್‌ ಗೌಡ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ದೃಶ್ಯಗಳು ಟೀವಿ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ.

‘ಪ್ರಣಾಳಿಕೆಯ ಮುಖಪುಟದಲ್ಲಿ ಬರೀ ಜನರು ಕಾಣುವ ಚಿತ್ರವನ್ನು ಹಾಕಿದ್ದು, ಅದರ ಕೆಳಭಾಗದಲ್ಲಿ ಸಣ್ಣದಾಗಿ ಪಕ್ಷಾಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಪಕ್ಷದ ಚಿಹ್ನೆ ಹಸ್ತ ಚಿಹ್ನೆ ಮುದ್ರಿಸಿದ್ದೀರಿ. ಕಾಣುವಂತೆ ದೊಡ್ಡದಾಗಿ ಮುದ್ರಿಸಬೇಕಿತ್ತಲ್ಲವೇ?’ ಎಂದು ಸೋನಿಯಾ ಅವರು ರಾಜೀವ್‌ರನ್ನು ಪ್ರಶ್ನಿಸಿದರು ಎಂದು ಮೂಲಗಳು ಹೇಳಿವೆ.

ಸೋನಿಯಾ ಅವರು ಕೋಪದಿಂದ ‘ಕೈ’ ತೋರಿಸುತ್ತ ರಾಜೀವ್‌ರತ್ತ ಪ್ರಶ್ನಿಸಿದಾಗ ಅವರು ಏನೋ ಸಮಜಾಯಿಷಿ ನೀಡುತ್ತಿರುವುದು ಕಂಡುಬಂತು. ಬಳಿಕ ಸಮಾರಂಭದುದ್ದಕ್ಕೂ ಸೋನಿಯಾ ಗರಂ ಆಗಿದ್ದರು ಎಂದು ಮೂಲಗಳು ಹೇಳಿವೆ. ಬಳಿಕ ಅವರು ಭಾಷಣ ಮಾಡದೇ ಹೊರಟು ಹೋದರು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!