ವೋಟಿಗಾಗಿ ನಮಾಜ್, ಪೂಜೆ: ಪ್ರಿಯಾಂಕಾಗೆ ಸ್ಮೃತಿ ತರಾಟೆ!

Published : May 17, 2019, 03:13 PM ISTUpdated : May 17, 2019, 03:16 PM IST
ವೋಟಿಗಾಗಿ ನಮಾಜ್, ಪೂಜೆ: ಪ್ರಿಯಾಂಕಾಗೆ ಸ್ಮೃತಿ ತರಾಟೆ!

ಸಾರಾಂಶ

ಪ್ರಿಯಾಂಕಾ ಗಾಂಧಿ ವಿರುದ್ಧ ಸ್ಮೃತಿ ಇರಾನಿ ವಾಗ್ದಾಳಿ| ‘ವೋಟಿಗಾಗಿ ಅಮೇಥಿಯಲ್ಲಿ ನಮಾಜ್, ಉಜ್ಜಯಿನಿಯಲ್ಲಿ ಪೂಜೆ’| ‘ಸಹೋದರನ ಗೆಲುವಿಗಾಗಿ ನಾಟಕವಾಡುತ್ತಿರುವ ಪ್ರಿಯಾಂಕಾ ಗಾಂಧಿ’| ಉಜ್ಜಯನಿಯ ಮಹಾಕಾಳೇಶ್ವರ ದೇವಾಲಯದಲ್ಲಿ ಪ್ರಿಯಾಂಕಾ ಪೂಜೆ| 

ಶಾಜಾಪುರ್(ಮೇ.17): ಪೂರ್ವ ಉತ್ತರಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವೋಟಿಗಾಗಿ ಅಮೇಥಿಯಲ್ಲಿ ನಮಾಜ್ ಮಾಡುತ್ತಾರೆ ಮತ್ತು ಉಜ್ಜಯಿನಿಯಲ್ಲಿ ಪೂಜೆ ಮಾಡುತ್ತಾರೆ ಎಂದು ಅಮೇಥಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಹೇಳಿದ್ದಾರೆ.

ಪ್ರಿಯಾಂಕಾ ಗಾಂಧಿ ಅಮೇಥಿಯಲ್ಲಿ  ನಮಾಜ್ ಮಾಡಿ, ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಕ್ಕೆ ಹೋಗಿ ಪೂಜೆ ಮಾಡುತ್ತಾರೆ. ಈ ಎಲ್ಲಾ ನಾಟಕ ವೋಟಿಗಾಗಿ ಎಂದು ಸ್ಮೃತಿ ಇರಾನಿ ವ್ಯಂಗ್ಯವಾಡಿದ್ದಾರೆ.

ಸಹೋದರ ರಾಹುಲ್ ಗಾಂಧಿ ಗೆಲುವಿಗಾಗಿ ಪ್ರಿಯಾಂಕಾ ಗಾಂಧಿ ಅಮೇಥಿಯಲ್ಲಿ ಹರಸಾಹಸ ಪಡುತ್ತಿದ್ದು, ವೋಟಿಗಾಗಿ ಕಸರತ್ತು ನಡೆಸಿದ್ದಾರೆ ಎಂದು ಸ್ಮೃತಿ ಹರಿಹಾಯ್ದಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!