
ಅಮೇಠಿ[ಏ.22]: ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ರನ್ನು ಸೋಲಿಸಲು ಪಣ ತೊಟ್ಟಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಅಮೇಠಿಯಲ್ಲಿ ಜನ ಸಾಮಾನ್ಯರ ಮನ ಗೆಲ್ಲುವ ಭರ್ಜರಿ ಭರವಸೆ ನೀಡಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆದ್ದು, ಮೋದಿ ಮತ್ತೆ ಪ್ರಧಾನಿಯಾದರೆ ಕೇವಲ 13 ರು.ಗೆ ಸಕ್ಕರೆಯನ್ನು ಸರ್ಕಾರ ವಿತರಿಸಲಿದೆ ಎಂದು ಭರವಸೆ ನೀಡಿದ್ದಾರೆ. ಜೊತೆಗೆ ನಿಮಗೆಲ್ಲಾ ಈ ಸಂದೇಶವನ್ನು ತಲುಪಿಸಿ ಎಂದು ಸ್ವತಃ ಮೋದಿ ಅವರೇ ತಿಳಿಸಿದ್ದಾರೆ ಎಂದೂ ಹೇಳಿದ್ದಾರೆ.
ಇದೇ ವೇಳೆ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಕಾಣದ ಮತ್ತು ಕೇಳದ ‘ಕಾಣೆಯಾದ ಸಂಸದ’ರಿಗೆ ಬಿಳ್ಕೊಡುಗೆ ನೀಡಿ ಎಂದು ಹೇಳಿದ್ದಾರೆ.
ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28