ಲೋಕಸಭಾ ಚುನಾವಣೆ: ಡಿ.ಕೆ. ಶಿವಕುಮಾರ್ ಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು..!

By Web DeskFirst Published Mar 15, 2019, 7:43 PM IST
Highlights

ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಗೆ ಫುಲ್ ಡಿಮ್ಯಾಂಡ್..| ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿ ಡಿ.ಕೆ.ಶಿ ಗೆ ಬೇಡಿಕೆ ಇಟ್ಟ ಮಧುಬಂಗಾರಪ್ಪ..! ಇದಕ್ಕೆ ಕಾಂಗ್ರೆಸ್ ಹೇಳಿದ್ದೇನು.?

ಬೆಂಗಳೂರು,[ಮಾ.15]: ಕಾಂಗ್ರೆಸ್ ನ ಟ್ರಬಲ್ ಶೂಟರ್ ಎಂದೇ ಬಿಂಬಿತರಾಗಿರುವ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಫುಲ್ ಡಿಮ್ಯಾಂಡ್ ಬಂದಿದೆ.

ಪಕ್ಷ ತಮಗೆ ವಹಿಸಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವ ನಾಯಕ ಅಂದ್ರೆ ಡಿಕೆಶಿ ಎಂದು ಪೇಮಸ್ ಆಗಿದ್ದಾರೆ. ಅದರಲ್ಲೂ ಚುನಾವಣೆ ಜವಾಬ್ದಾರಿ ನೀಡಿದ್ರೆ ಸಾಕು ಚಾಲೆಂಜ್ ಆಗಿ ಸ್ವೀಕರಿಸಿ ಯಶಸ್ವಿಯಾಗಿರುವುದು ಸಾಕಷ್ಟು ಉದಾಹರಣೆಗಳಿವೆ.

ಸುಮಲತಾ ಮನವೊಲಿಕೆ : ಡಿಕೆಶಿ ಹೇಳಿದ್ದೇನು..?

ಇತ್ತೀಚೆಗೆ ನಡೆದಿದ್ದ ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದ ಉಸ್ತುವಾರಿಯನ್ನು ಇದೇ ಡಿ.ಕೆ.ಶಿವಕುಮಾರ್ ಅವರಿಗೆ ವಹಿಸಲಾಗಿತ್ತು. ಅದರಂತೆ ಬಿಜೆಪಿಯ ಭದ್ರಕೋಟೆ ಬಳ್ಳಾರಿಯಯನ್ನು ಛೀದ್ರ ಮಾಡಿ ವಿ.ಎಸ್. ಉಗ್ರಪ್ಪ ಅವರನ್ನು ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದರು. 

ಅದ್ರಂತೆ ಈ ಲೋಕಸಭಾ ಚುನಾವಣೆಯಲ್ಲಿ ಶಿವವೊಗ್ಗ ಕ್ಷೇತ್ರದ ಉಸ್ತುವಾರಿಯನ್ನು ಡಿ.ಕೆ.ಶಿವಕುಮಾರ್ ಅವರಿಗೆ ನೀಡಬೇಕೆಂದು ಮಧುಬಂಗಾರಪ್ಪ ಮನವಿ ಮಾಡಿಕೊಂಡಿದ್ದಾರೆ. ನನ್ನ ಕ್ಷೇತ್ರದ ಉಸ್ತುವಾರಿಯನ್ನು ಡಿಕೆಶಿಗೆ ವಹಿಸಬೇಕೆಂದು ಎಂದು ಶಿವಮೊಗ್ಗ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧುಬಂಗಾರಪ್ಪ ಅವರು ಕುಮಾರಸ್ವಾಮಿ ಬಳಿ ಬೇಡಿಕೆ ಇಟ್ಟಿದ್ದಾರೆ.  

ಡಿಕೆಶಿಗೆ ಮಂಡ್ಯ ಕಾಂಗ್ರೆಸ್ಸಿಗರ ಎಚ್ಚರಿಕೆ, JDSಗೆ ನಡುಕ ಶುರು..!

ಮಧು ಬಂಗರಪ್ಪ ಬೇಡಿಕೆಯಂತೆ ಸಿಎಂ ಕುಮಾರಸ್ವಾಮಿ ಅವರು ಡಿ.ಕೆ.ಶಿವಕುಮಾರ್ ಅವರ ಜತೆ ಚರ್ಚೆ ಕೂಡ ಮಾಡಿದ್ದಾರೆ. ಆದ್ರೆ ಇದಕ್ಕೆ ಕಾಂಗ್ರೆಸ್ ಒಪ್ಪುತ್ತಿಲ್ಲ.

ಶಿವಮೊಗ್ಗ ಜೆಡಿಎಸ್ ಗೆ ಹಂಚಿಕೆ ಆಗಿರೊದ್ರಿಂದ ಡಿಕೆಶಿಗೆ ಉಸ್ತುವಾರಿ ವಹಿಸಲು ಕಾಂಗ್ರೆಸ್ ಹಿಂಜರಿಯುತ್ತಿದೆ. ಈ ಬಾರಿಯೂ ಡಿ.ಕೆ ಶಿವಕುಮಾರ್ ಹೆಗಲಿಗೆ ಬಳ್ಳಾರಿ ಕ್ಷೇತ್ರವನ್ನು ವಹಿಸಿಲು ಕಾಂಗ್ರೆಸ್ ಪ್ಲಾನ್ ಮಾಡಿದೆ.

click me!