‘ಮೋದಿ ಅಪ್ಪ-ಅಮ್ಮಂಗೆ ಅವಮಾನಿಸುವುದಕ್ಕಿಂತ ಸಾಯುವುದು ಮೇಲು’!

Published : May 15, 2019, 12:36 PM ISTUpdated : May 15, 2019, 12:52 PM IST
‘ಮೋದಿ ಅಪ್ಪ-ಅಮ್ಮಂಗೆ ಅವಮಾನಿಸುವುದಕ್ಕಿಂತ ಸಾಯುವುದು ಮೇಲು’!

ಸಾರಾಂಶ

ಸತ್ತರೂ ಪರವಾಗಿಲ್ಲ ಮೋದಿ ಪರಿವಾರವನ್ನು ಬೈಯುವುದಿಲ್ಲ ಎಂದ ರಾಹುಲ್| ‘ಗಾಂಧಿ-ನೆಹರೂ ಪರಿವಾರ ಅವಮಾನಿಸುತ್ತಿರುವ ಪ್ರಧಾನಿ ಮೋದಿ’| ಮೋದಿಯನ್ನು ನಾವು ಪ್ರೀತಿಯಿಂದ ಸೋಲಿಸುತ್ತೇವೆ ಎಂದ ರಾಹುಲ್| ಮೋದಿ ಪರಿವಾರವನ್ನು ರಾಜಕೀಯ ಲಾಭಕ್ಕೆ ಎಳೆದು ತರಲ್ಲ ಎಂದ ಕಾಂಗ್ರೆಸ್ ಅಧ್ಯಕ್ಷ| ‘ಮೋದಿ ತಂದೆ-ತಾಯಿಯನ್ನು ಬೈಯುವುದಕ್ಕಿಂತ ಸಾಯುವುದೇ ಮೇಲು’|

ಉಜ್ಜಯಿನಿ(ಮೇ.15): ಗಾಂಧಿ-ನೆಹರೂ ಪರಿವಾರದ ಮೇಲೆ ಪ್ರಧಾನಿ ಮೋದಿ ನಿರಂತರ ವಾಗ್ದಾಳಿ ನಡೆಸುತ್ತಿದ್ದು, ಆದರೆ ತಾವೆಂದೂ ಮೋದಿ ಪರಿವಾರವನ್ನು ಗುರಿಯಾಗಿಸಿಕೊಂಡು ವೈಯಕ್ತಿಕ ನಿಂದನೆ ಮಾಡುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಪ್ರಧಾನಿ ಮೋದಿ ತಂದೆ-ತಾಯಿಯನ್ನು ಅವಮಾನಿಸುವುದಕ್ಕಿಂತ ಸಾಯುವುದೇ ಮೇಲು ಎಂದಿರುವ ರಾಹುಲ್, ತಾವು ಮೋದಿ ಅವರನ್ನು ಪ್ರೀತಿಯಿಂದ ಸೋಲಿಸುತ್ತೇವೆಯೇ ಹೊರತು ದ್ವೇಷದಿಂದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮೋದಿ ಬಾಯ್ತೆರೆದರೆ ದ್ವೇಷ ಕಾರುತ್ತಾರೆ. ಅವರು ನನ್ನ ತಂದೆ, ಅಜ್ಜಿ, ಮುತ್ತಜ್ಜ ಹೀಗೆ ಎಲ್ಲರನ್ನೂ ಅವಮಾನಿಸುತ್ತಾರೆ. ಆದರೆ ನಾನು ಮಾತ್ರ ಮೋದಿ ಪರಿವಾರವನ್ನು ರಾಜಕೀಯ ಲಾಭಕ್ಕಾಗಿ ಎಳೆದು ತರುವುದಿಲ್ಲ ಎಂದು ರಾಹುಲ್ ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!