ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಶಾಮನೂರು ಶಿವಶಂಕರಪ್ಪ ಲೋಕಸಭಾ ಅಖಾಡಕ್ಕಿಳಿದಿದ್ದಾರೆ. ಅರೇ....ಅದು ಹೇಗಂತೀರಾ ಮುಂದೆ ಓದಿ..
ದಾವಣಗೆರೆ, (ಮಾ.24): ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಟಿಕೆಟ್ ನೀಡಿದೆ. ಈ ಮೂಲಕ ಶಾಮನೂರು ತಮ್ಮ ಪುತ್ರನಿಗೆ ಹೊಸ ರಾಜಕೀಯ ಭವಿಷ್ಯ ನೀಡಲು ಮುಂದಾಗಿದ್ದಾರೆ.
ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್ ವಿರುದ್ಧ ಸತತ ಮೂರು ಬಾರಿ ಸೋಲು ಕಂಡಿದ್ದ ಎಸ್. ಎಸ್. ಮಲ್ಲಿಕಾರ್ಜುನ್ ಈ ಬಾರಿ ಲೋಕಸಭಾ ಚುನಾವಣಾ ಕಣದಿಂದ ದೂರ ಸರಿದಿದ್ದಾರೆ.
undefined
ದಾವಣಗೆರೆ: ಒಂದೇ ವೇದಿಕೆಯಲ್ಲಿ ಮಾವ ಅಳಿಯ ಜಟಾಪಟಿ
ಆದರೆ ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶ್ಯಾಮನೂರು ಶಿವಶಂಕರಪ್ಪ ಚುನಾವಣಾ ಅಖಾಡಕ್ಕೆ ಧುಮುಕಿದ್ದು, ಶತಾಯಗತಾಯಾಗಿ ಈ ಬಾರಿ ಸಿದ್ದೇಶ್ವರ್ ಅವರನ್ನು ಮಣಿಸಿ ದಕ್ಷಿಣ ಕ್ಷೇತ್ರವನ್ನು ಪುತ್ರನಿಗೆ ಬಿಟ್ಟುಕೊಡಲು ಶಾಮನೂರು ಪ್ಲಾನ್ ಆಗಿದೆ.
ಈ ಹಿಂದೆ ಮೂರು ಬಾರಿ ಸಿದ್ದೇಶ್ವರ್ ಎದುರು ಮಲ್ಲಿಕಾರ್ಜುನ್ ಸೋಲು ಕಂಡಿದ್ದು, ಈ ಬಾರಿ ನಾನೊಂದು ಕೈ ನೋಡಿಯೇ ಬಿಡ್ತೀನಿ ಅಂತ ಶಾಮನೂರು ಅಖಾಡಕ್ಕಿಳಿದಿದ್ದಾರೆ.
ಒಟ್ಟಿನಲ್ಲಿ ಈ ಬಾರಿ ಅಳಿಯ ಜಿ.ಎಂ.ಸಿದ್ಧೇಶ್ವರ್ ಹಾಗೂ ಮಾವ ಶಾಮನೂರು ಶಿವಶಂಕರಪ್ಪ ನಡುವಿನ ಜಿದ್ದಾಜಿದ್ದಿಗೆ ದಾವಣಗೆರೆ ಲೋಕಸಭಾ ಅಖಾಡ ಸಾಕ್ಷಿಯಾಗಲಿದೆ.