ನಿನ್ನ ಪಲ್ಲಕ್ಕಿ, ಹೆಣ ಎರಡನ್ನೂ ನಾನೆ ಹೊರ್ತಿನಿ: ಡಿಕೆಶಿ ಹೇಳಿಕೆಗೆ ನಾಗೇಂದ್ರ ಗಡಗಡ!

Published : Mar 24, 2019, 04:07 PM IST
ನಿನ್ನ ಪಲ್ಲಕ್ಕಿ, ಹೆಣ ಎರಡನ್ನೂ ನಾನೆ ಹೊರ್ತಿನಿ: ಡಿಕೆಶಿ ಹೇಳಿಕೆಗೆ ನಾಗೇಂದ್ರ ಗಡಗಡ!

ಸಾರಾಂಶ

ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಅವರಿಗೆ ಡಿಕೆಶಿ ಸ್ವೀಟ್ ವಾರ್ನಿಂಗ್| ನಿನ್ನ ಪಲ್ಲಕ್ಕಿ ಹೊರೋನೂ ನಾನೇ, ಹೆಣ ಹೊರೋನೂ ನಾನೇ ಎಂದ ಡಿಕೆಶಿ| ಸಂಡೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಡಿಕೆಶಿ ವಾರ್ನಿಂಗ್|

ಬಳ್ಳಾರಿ(ಮಾ.24): ಅತೃಪ್ತರ ಜೊತೆ ಗುರುತಿಸಿಕೊಂಡಿದ್ದ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ, ಸಚಿವ ಡಿಕೆ ಶಿವಕುಮಾರ್ ಕೊಟ್ಟ ಎಚ್ಚರಿಕೆಗೆ ತಬ್ಬಿಬ್ಬಾಗಿದ್ದಾರೆ. ನಾಗೇಂದ್ರ ಅವರಿಗೆ ತಮ್ಮದೇ ಧಾಟಿಯಲ್ಲಿ ವಾರ್ನಿಂಗ್ ನೀಡಿರುವ ಡಿಕೆಶಿ, ತಪ್ಪು ಮಾಡದಂತೆ ಸ್ವೀಟ್ ವಾರ್ನಿಂಗ್ ಕೊಟ್ಟಿದ್ದಾರೆ.

ಸಂಡೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಡಿಕೆಶಿ, ನಾಗೇಂದ್ರ ನಮ್ಮ ಹುಡುಗ ತಪ್ಪು ಮಾಡಿದ್ದಾನೆ ಆದರೆ ತಪ್ಪು ತಿದ್ದಿಕೊಂಡು ಮರಳಿದ್ದಾನೆ ಎಂದು ಹೇಳಿದರು. ಈ ವೇಳೆ ನಾಗೇಂದ್ರ ಅವರಿಗೆ ಸ್ವೀಟ್ ವಾರ್ನಿಂಗ್ ಕೊಟ್ಟ ಡಿಕೆಶಿ, 'ನಿನ್ನ ಪಲ್ಲಕ್ಕಿ ಹೊರೋನೂ ನಾನೇ, ನಿನ್ನ ಹೆಣ ಹೊರೋನೂ ನಾನೇ..' ಎಂದು ಖಡಕ್ ವಾರ್ನಿಂಗ್ ನೀಡಿದರು.

"

ಡಿಕೆಶಿ ಈ ಮಾತನಾಡಿದಾಗ ನಾಗೇಂದ್ರ ವೇದಿಕೆ ಮೇಲೆ ಇರಲಿಲ್ಲ. ಆದರೂ ಡಿಕೆಶಿ ಅವರ ಈ ಹೇಳಿಕೆ ಬಳ್ಳಾರಿ ಜಿಲ್ಲೆಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!