ಚುನಾವಣೆ ಬೆನ್ನಲ್ಲೇ ಭಾರೀ ಹಿನ್ನಡೆ : ಬಿಜೆಪಿ ತೊರೆದ 25 ನಾಯಕರು

By Web DeskFirst Published Mar 20, 2019, 11:45 AM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ಬಿಜೆಪಿ ಭಾರೀ ಹಿನ್ನಡೆಯಾದಂತಾಗಿದೆ. ಒಂದೇ ಬಾರದಲ್ಲಿ ಸಚಿವರೂ ಸೇರಿ 25 ಮಂದಿ ಬಿಜೆಪಿ ತೊರೆದಿದ್ದಾರೆ. 

ನವದೆಹಲಿ : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಇದೇ ವೇಳೆ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ಅರುಣಾಚಲ ಪ್ರದೇಶದಲ್ಲಿ 6 ಜನಪ್ರತಿನಿಧಿಗಳು ಹಾಗೂ ಇಬ್ಬರು ಸಚಿವರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. 

ಏಪ್ರಿಲ್ 11 ರಂದು ರಾಜ್ಯ ವಿಧಾನಸಭಾ ಚುನಾವಣೆಯೂ ನಡೆಯಲಿದ್ದು,  ಒಂದೇ ವಾರದಲ್ಲಿ  ಒಟ್ಟು 25 ಮಂದಿ ಮುಖಂಡರು ಪಕ್ಷ ತೊರೆದಿದ್ದು, ಇದರಿಂದ ಭರ್ಜರಿ ಏಟು ನೀಡಿದಂತಾಗಿದೆ. ಅಲ್ಲದೇ ಮೂಲಗಳ ಪ್ರಕಾರ ಬಿಜೆಪಿ ಮೈತ್ರಿ ಪಕ್ಷವಾದ ಎನ್ ಪಿಪಿ ಮುಂದಿನ ಚುನಾವಣೆಯಲ್ಲಿ  ಏಕಾಂಗಿಯಾಗಿ ಸ್ಪರ್ಧೆ ಸಾಧ್ಯತೆ ಇದೆ ಎನ್ನಲಾಗಿದೆ. 

ಅರುಣಾಚಲ ಗೃಹ ಸಚಿವ ಕುಮಾರ್ ವಾಯ್, ಪ್ರವಾಸೋದ್ಯಮ ಸಚಿವ ಜಾರ್ಕರ್ ಗಾಮ್ಲಿನ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಜರ್ಪಮ್ ಗಂಭಿನ್ ಸೇರಿದಂತೆ ಒಟ್ಟು 6 ಮಂದಿ ರಾಜೀನಾಮೆ ಸಲ್ಲಿಸಿದ್ದಾರೆ. 

ನ್ಯಾಷನಲ್ ಪೀಪಲ್ ಪಾರ್ಟಿ [NPP] ರಾಜ್ಯದಲ್ಲಿ ಯಾವುದೇ ಮೈತ್ರಿ ಮಾಡಿಕೊಳ್ಳದೇ 30 ರಿಂದ 40 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದ್ದು, ತಮ್ಮದೇ ಸರ್ಕಾರ ರಚನೆ ಮಾಡುವ ಗುರಿಯನ್ನು ಹೊಂದಿದೆ. ಬಿಜೆಪಿಯೊಂದಿಗೆ ಮೈತ್ರಿ ಕೈ ಬಿಡುವ ಸಾಧ್ಯತೆ ಇದೆ. 

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ

click me!