ಕೊನೆ ಕ್ಷಣದಲ್ಲಿ ಕರ್ನಾಟಕ ಅಖಾಡಕ್ಕೆ ಹಿರಿಯ ಕಾಂಗ್ರೆಸ್ಸಿಗನ ಪುತ್ರ

Published : Apr 12, 2019, 06:09 PM ISTUpdated : Apr 12, 2019, 07:01 PM IST
ಕೊನೆ ಕ್ಷಣದಲ್ಲಿ ಕರ್ನಾಟಕ ಅಖಾಡಕ್ಕೆ ಹಿರಿಯ ಕಾಂಗ್ರೆಸ್ಸಿಗನ ಪುತ್ರ

ಸಾರಾಂಶ

ಒಂದು ಕಾಲದಲ್ಲಿ ಕೇಂದ್ರದ ಪ್ರಭಾವಿ ಸಚಿವರಾಗಿದ್ದವರೊಬ್ಬರ ಪುತ್ರ ಲೋಕಸಭೆ ಚುನಾವಣೆ ಎದುರಾಗಿರುವ ಸಂದರ್ಭದಲ್ಲಿ ರಾಜಕಾರಣಕ್ಕೆ ಧುಮುಕಿದ್ದಾರೆ.

ಮಂಗಳೂರು[ಏ. 12]  ತಾವು ರಾಜಕಾರಣದಲ್ಲಿ ಇದ್ದರೂ ತಮ್ಮ ಕುಟುಂಬವನ್ನು ರಾಜಕಾರಣದಿಂದ ದೂರ ಇರಿಸಿದ್ದ ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಪುತ್ರ ಅಖಾಡವನ್ನು ಪ್ರವೇಶ ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಜನಾರ್ದನ ಪೂಜಾರಿ ಪುತ್ರ ಪುತ್ರ ಸಂತೋಷ್ ಪೂಜಾರಿ ದಕ್ಷಿಣ ಕನ್ನಡ  ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರಿಗೆ ಸಂಪೂರ್ಣ ಬೆಂಬಲ ನೀಡುವ ಮಾತನ್ನಾಡಿದರು.

ಸುಮಲತಾಗೆ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲ ಸುದ್ದಿಗೆ ಸಿಕ್ಕ ಸ್ಪಷ್ಟನೆ

ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದಕ್ಷಿಣ ಕನ್ನಡ ಪ್ರವಾಸ ಮಾಡಿದ್ದಾಗ ಜನಾರ್ದನ ಪೂಜಾರಿ ಕಾಣಿಸಿಕೊಂಡಿದ್ದರು. ಕಾಂಗ್ರೆಸ್ ಸರಕಾರ ಮತ್ತು ಸಿದ್ದರಾಮಯ್ಯ ನಡೆಯನ್ನು ವಿರೋಧಿಸಿಕೊಂಡು ಬಂದಿದ್ದ ಪೂಜಾರಿ ಹಿಂದೊಮ್ಮೆ ದಕ್ಷಿಣ ಕನ್ನಡದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!