ಚುನಾವಣೆಗೂ 3 ದಿನ ಮೊದ್ಲೇ ಆಯೋಗಕ್ಕೆ ಸುಪ್ರೀಂ 'ಮಹತ್ವದ ಸೂಚನೆ'!

By Web DeskFirst Published Apr 8, 2019, 4:08 PM IST
Highlights

ಚುನಾವಣಾ ಆಯೋಗಕ್ಕೆ ಮಹತ್ವದ ಸೂಚನೆ ನೀಡಿದ ಸುಪ್ರೀಂ ಕೋರ್ಟ್| ಮೊದಲ ಹಂತದ ಚುನಾವಣೆಗೆ ಕೇವಲ 3 ದಿನಗಳು ಬಾಕಿ| ವಿವಿಪ್ಯಾಟ್ ಸ್ಯಾಂಪಲ್ ತಪಾಸಣೆ ಸಂಖ್ಯೆ ಅಧಿಕಗೊಳಿಸುವಂತೆ ಸೂಚನೆ| ಪ್ರತಿ ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಲ್ಲಿ ವಿವಿಪ್ಯಾಟ್ ತಪಾಸಣೆ| ಒಂದರ ಬದಲು 5 ಮತಗಟ್ಟೆಯಲ್ಲಿ ತಪಾಸಣೆ ನಡೆಸಲು ಸುಪ್ರೀಂ ಸೂಚನೆ| ಶೇ.50 ರಷ್ಟು ವಿವಿಪ್ಯಾಟ್ ತಪಾಸಣೆಗೆ ಆಗ್ರಹಿಸಿದ್ದ 21 ವಿಪಕ್ಷಗಳ ಬೇಡಿಕೆ ತಿರಸ್ಕಾರ|

ನವದೆಹಲಿ(ಏ.08): ಮೊದಲ ಹಂತದ ಚುನಾವಣೆಗೆ ಇನ್ನೂ ಕೇವಲ 3 ದಿನ ಬಾಕಿ ಇರುವಂತೆಯೇ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ.

ವಿವಿಪ್ಯಾಟ್ ಮಾದರಿ ತಪಾಸಣೆ ಪ್ರಮಾಣವನ್ನು ಏರಿಕೆ ಮಾಡಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳ ಒಂದು ಮತಗಟ್ಟೆಯಲ್ಲಿ ವಿವಿಪ್ಯಾಟ್ ಸ್ಯಾಂಪಲ್ ತಪಾಸಣೆ ಮಾಡಲಾಗುತ್ತಿದೆ. ಆದರೆ ಒಂದರ ಬದಲು 5 ಮತಗಟ್ಟೆಗಳಲ್ಲಿ ವಿವಿಪ್ಯಾಟ್ ಮಾದರಿಯನ್ನು ತಪಾಸಣೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ನ್ಯಾ.ಗೋಗೊಯ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ 5 ಮತಗಟಟೆಯಲ್ಲಿ ವಿವಿಪ್ಯಾಟ್ ಮಾದರಿ ತಪಾಸಣೆಗೆ ಆದೇಶ ನೀಡಿದ್ದು, ಶೇ.50 ರಷ್ಟು ವಿವಿಪ್ಯಾಟ್ ಚೀಟಿಗಳನ್ನು ತಪಾಸಣೆಗೆ ಒಳಪಡಿಸಬೇಕು ಎಂಬ 21 ವಿಪಕ್ಷಗಳ ಬೇಡಿಕೆಯನ್ನು ತಿರಸ್ಕರಿಸಿದೆ.

click me!