ಈ ಗ್ರಾಮ​ದಲ್ಲಿ ಪಕ್ಷ​ಗ​ಳ ಪ್ರಚಾ​ರ ನಿಷೇ​ಧ: ಆದರೂ ಶೇ.100ರಷ್ಟು ಮತ​ದಾ​ನ!

Published : Apr 22, 2019, 09:06 AM IST
ಈ ಗ್ರಾಮ​ದಲ್ಲಿ ಪಕ್ಷ​ಗ​ಳ ಪ್ರಚಾ​ರ ನಿಷೇ​ಧ: ಆದರೂ ಶೇ.100ರಷ್ಟು ಮತ​ದಾ​ನ!

ಸಾರಾಂಶ

ಈ ಗ್ರಾಮ​ದಲ್ಲಿ ಪಕ್ಷ​ಗ​ಳ ಪ್ರಚಾ​ರ ನಿಷೇ​ಧ: ಆದರೂ ಶೇ.100ರಷ್ಟು ಮತ​ದಾ​ನ| ತಮ್ಮದೇ ನಿಯಮಗಳನ್ನು ರೂಪಿಸಿದ್ದಾರೆ ಗ್ರಾಮಸ್ಥರು!| ರಾಜಕೀಯ ಪ್ರಚಾರ ನಡೆಸಿದ್ರೆ ದಂಡ ಬೀಳೋದು ಗ್ಯಾರಂಟಿ| ಆ ಗ್ರಾಮ ಯಾವುದು? ಇಲ್ಲಿದೆ ವಿವರ

ರಾಜ್‌ಕೋಟ್‌: ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸಲು ದೇಶಾದ್ಯಂತ ಸಂಚರಿಸುತ್ತಾರೆ. ಆದರೆ ಗುಜರಾತ್‌ನ ಗ್ರಾಮವೊಂದಲ್ಲಿ ಅದಕ್ಕೆ ಅವಕಾಶವೇ ಇಲ್ಲ. ಕಾರಣ ಅಲ್ಲಿ ರಾಜಕೀಯ ಪಕ್ಷಗಳ ಅಬ್ಬರದ ಪ್ರಚಾರಕ್ಕೆ ಗ್ರಾಮಸ್ಥರು ನಿಷೇ​ಧ ಹೇರಿ​ದ್ದಾ​ರೆ.

ಹೌದು! ಗುಜರಾತ್‌ನ ಈ ಗ್ರಾಮದ ಹೆಸರು ರಾಜಸಮಧಿಯಾಲ್‌. ಇಲ್ಲಿ ಗ್ರಾಮ ಅಭಿವೃದ್ಧಿ ಸಮಿತಿ ಕಠಿಣವಾದ, ಪರಿಸರಕ್ಕೆ ಪೂರಕವಾದ ಮತ್ತು ಅಭಿವೃದ್ಧಿಶೀಲ ಚಿಂತನೆಗಳ ನಿಯಮಾವಳಿ ರೂಪಿಸಿದೆ. ಹೀಗಾಗಿ ಇಲ್ಲಿ ಯಾವುದೇ ರಾಜಕೀಯ ಪಕ್ಷದ ಪ್ರಚಾರಕ್ಕೆ ಅನುಮತಿ ಇಲ್ಲ. ಇನ್ನು ಇಲ್ಲಿನ ನಿಯಮಾವಳಿ ಮುರಿದರೆ ದಂಡ ವಿಧಿ​ಸ​ಲಾ​ಗು​ತ್ತದೆ. ಅಂದಹಾಗೆ ಈ ಗ್ರಾಮದಲ್ಲಿ ಕಡ್ಡಾಯ ಮತದಾನ ಮಾಡಬೇಕು. ಒಂದು ವೇಳೆ ಮತದಾನ ಮಾಡದೇ ಇದ್ದರೇ, ಆ ವ್ಯಕ್ತಿಗೆ 51 ರು. ದಂಡ ವಿಧಿ​ಸ​ಲಾ​ಗು​ತ್ತ​ದೆ.

ಈ ಗ್ರಾಮದಲ್ಲಿ ಪ್ರತಿ ಬಾರಿ ಶೇ.100ರಷ್ಟುಮತದಾನವಾಗುತ್ತಿದೆ. ಆದರೆ ಚುನಾವಣಾ ಆಯೋಗ ಮೃತಪಟ್ಟವರ ಹೆಸರನ್ನು ಮತ್ತು ಗ್ರಾಮದಿಂದ ಬೇರೆಡೆ ಮದುವೆಯಾಗಿ ಹೋದ ಮಹಿಳೆಯರ ಹೆಸರನ್ನು ಸರಿಯಾದ ರೀತಿಯಲ್ಲಿ ನಮೂ​ದಿ​ಸದ ಕಾರಣಕ್ಕೆ ಪ್ರತಿ ಬಾರಿ ಶೇ.95-96ರಷ್ಟುಮತದಾನ ಪ್ರಮಾಣ ದಾಖಲಾಗುತ್ತಿದೆ. ಇಲ್ಲಿನ 26 ಲೋಕಸಭಾ ಕ್ಷೇತ್ರಗಳಿಗೆ ಮೂರನೇ ಹಂತದ ಮತದಾನ ಏ.23ಕ್ಕೆ ನಡೆಯುತ್ತಿದ್ದು, ಮೇ.23ಕ್ಕೆ ಮತ ಎಣಿಕೆ ನಡೆಯಲಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!