ನಾವೇನು ದೀಪಾವಳಿಗೆಂದು ಅಣ್ವಸ್ತ್ರ ಇಟ್ಟಿಲ್ಲ: ಪಾಕ್‌ಗೆ ಮೋದಿ ಎಚ್ಚರಿಕೆ

By Web DeskFirst Published Apr 22, 2019, 8:51 AM IST
Highlights

ನಾವೇನು ದೀಪಾವಳಿಗೆಂದು ಅಣ್ವಸ್ತ್ರ ಇಟ್ಟಿಲ್ಲ| ರಾಜಸ್ಥಾನ ಬಾರ್ಮೇಡ್‌ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಪಾಕ್‌ಗೆ ಮೋದಿ ಎಚ್ಚರಿಕೆ

ಬಾರ್ಮೇಡ್‌[ಏ.22]: ಭಾರತ ಕೂಡ ಅಣ್ವಸ್ತ್ರ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಪಾಕಿಸ್ತಾನ ಇದನ್ನು ಲಘುವಾಗಿ ಪರಿಗಣಿಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ರಾಜಸ್ಥಾನ ಬಾರ್ಮೇಡ್‌ನಲ್ಲಿ ಚುನಾವಣಾ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಮೋದಿ, ಭಾರತದ ಬೆದರಿಕೆಯ ಪರಿಣಾಮವಾಗಿ ಪಾಕಿಸ್ತಾನ ವಾಯುಪಡೆ ಪೈಲಟ್‌ ಅಭಿನಂದನ್‌ ಅವರನ್ನು ಬಿಡುಗಡೆ ಮಾಡಿದೆ.

ಪಾಕಿಸ್ತಾನದ ಬೆದರಿಕೆಗೆ ಹೆದರುವ ನೀತಿಯನ್ನು ಭಾರತ ತ್ಯಜಿಸಿದೆ. ಪಾಕಿಸ್ತಾನ ನಮ್ಮಲ್ಲಿ ಅಣ್ವಸ್ತ್ರ ಬಟನ್‌ ಇದೆ ಬೆದರಿಸುತ್ತದೆ. ಹಾಗಿದ್ದರೆ ನಮ್ಮ ಬಳಿ ಇರುವುದು ಏನು? ಅದನ್ನು ದೀಪಾವಳಿಗಾಗಿ ಇಟ್ಟುಕೊಂಡಿದ್ದೇವೆಯೇ? ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

ಪುಲ್ವಾಮಾದಲ್ಲಿ ಉಗ್ರರು 40ಕ್ಕೂ ಹೆಚ್ಚು ಸಿಆರ್‌ಪಿಎಫ್‌ ಯೋಧರನ್ನು ಬಲಿ ಪಡೆದ ಬಳಿಕ, ಪಾಕಿಸ್ತಾನದ ಬಾಲಾಕೋಟ್‌ ಉಗ್ರ ನೆಲೆ ಮೇಲೆ ಭಾರತ ವಾಯುದಾಳಿ ನಡೆಸಿತ್ತು. ಬಳಿಕ ಪಾಕಿಸ್ತಾನ ಕೂಡಾ ಭಾರತದ ಗಡಿಯೊಳಗೆ ನುಗ್ಗಿ ದಾಳಿ ನಡೆಸಲು ವಿಫಲ ಯತ್ನ ನಡೆಸಿತ್ತು.

ಇದಾದ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದ ವೇಳೆ ಹಲವು ಬಾರಿ ಪಾಕ್‌ ರಾಜಕೀಯ ನಾಯಕರು ಮತ್ತು ಸೇನಾ ಮುಖ್ಯಸ್ಥರು, ಪಾಕ್‌ ಬಳಿ ಅಣ್ವಸ್ತ್ರಗಳಿವೆ. ದೇಶ ರಕ್ಷಣೆಗಾಗಿ ಅದನ್ನು ಬಳಸಲು ಹಿಂದು ಮುಂದು ನೋಡುವುದಿಲ್ಲ ಎಂದು ಬೆದರಿಸುವ ಯತ್ನ ಮಾಡಿದ್ದರು.

click me!