‘ಪಿಎಂ 3 ಗಂಟೆ ಮಲಗ್ತಾರಂತೆ: ಉಳಿದ ಸಮಯದಲ್ಲಿ ಭ್ರಷ್ಟಾಚಾರ ಚರ್ಚೆ ಮಾಡೋಣ’!

By Web DeskFirst Published May 11, 2019, 4:57 PM IST
Highlights

‘3 ಗಂಟೆ ಮಲಗುವ ಪಿಎಂ ಜೊತೆ ಬಹಳಷ್ಟು ಮಾತನಾಡೋದಿದೆ’| ಭ್ರಷ್ಟಾಚಾರ, ನೋಟು ಅಮಾನ್ಯೀಕರಣ, ಜಿಎಸ್ ಟಿ ಚರ್ಚೆಗೆ ರಾಹುಲ್ ಆಹ್ವಾನ| ‘ಪ್ರೀತಿ ತುಂಬಿದ್ದ ದೇಶದಲ್ಲಿ ದ್ವೇಷ ತುಂಬಿದ ಪ್ರಧಾನಿ ಮೋದಿ’| ‘ಈ ದೇಶವನ್ನು ಹೇಗೆ ಆಳಬಾರದು ಎಂದು ಮೋದಿ ಪಾಠ ಕಲಿಸಿದ್ದಾರೆ’| 

ಶುಜಾಲ್‌ಪುರ್(ಮೇ.11): ಪ್ರಧಾನಿ ಮೋದಿ ದಿನದ ಕೇಲವ 3 ಗಂಟೆ ನಿದ್ದೆ ಮಾಡುತ್ತಾರೆ ಎಂದು ಕೇಳಿದ್ದೇನೆ. ಹಾಗಿದ್ದರೆ ಉಳಿದ ಸಮಯದಲ್ಲಿ ನನ್ನ ಜೊತೆ ಭ್ರಷ್ಟಾಚಾರದ ಕುರಿತು ಚರ್ಚೆ ಮಾಡಲು ಅವರನ್ನು ಆಹ್ವಾನಿಸುತ್ತೇನೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.

ಮಧ್ಯಪ್ರದೇಶ ಶುಜಲ್‌ಪುರ್ ನಲ್ಲಿ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ದಿನದ ಕೇವಲ 3 ಗಂಟೆ ಮಲಗುವ ಪ್ರಧಾನಿ ಮೋದಿ, ಉಳಿದ ಸಮಯದಲ್ಲಾದರೂ ಭ್ರಷ್ಟಾಚಾರ, ನೋಟು ಅಮಾನ್ಯೀಕರಣ, ಜಿಎಸ್ ಟಿ ಕುರಿತು ನಮ್ಮೊಂದಿಗೆ ಚರ್ಚೆ ಮಾಡಲಿ ಎಂದು ಆಹ್ವಾನಿಸಿದರು.

 ಪ್ರೀತಿ ಈ ದೇಶದ ಮೂಲ ತತ್ವವಾಗಿದ್ದು, ಪ್ರಧಾನಿ ಮೋದಿ ಅದನ್ನು ದ್ವೇಷವನ್ನಾಗಿ ಪರಿವರ್ತಿಸಿದ್ದಾರೆ ಎಂದ ರಾಹುಲ್, ಈ ದೇಶವನ್ನು ಹೇಗೆ ಆಳಬಾರದು ಎಂಬ ಪಾಠವನ್ನು ಮೋದಿ ತಮಗೆ ಕಲಿಸಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!