ಒತ್ತಡದಲ್ಲಿ ಮೋದಿ ಕಳೆದುಕೊಂಡಿದ್ದಾರೆ ಬುದ್ದಿ: ರಾಹುಲ್ ಲೇವಡಿ!

Published : May 10, 2019, 02:21 PM IST
ಒತ್ತಡದಲ್ಲಿ ಮೋದಿ ಕಳೆದುಕೊಂಡಿದ್ದಾರೆ ಬುದ್ದಿ: ರಾಹುಲ್ ಲೇವಡಿ!

ಸಾರಾಂಶ

'ಒತ್ತಡದಲ್ಲಿರುವ ಪ್ರಧಾನಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ'| ಟ್ವಿಟ್ಟರ್‌ನಲ್ಲಿ ಮೋದಿ ಕಿಚಾಯಿಸಿದ ಕಾಂಗ್ರೆಸ್ ಅಧ್ಯಕ್ಷ| 'ಮೋದಿ ಸಂದರ್ಶನ ನೋಡಿದರೆ ಅವರು ಒತ್ತಡದಲ್ಲಿರುವುದು ಸ್ಪಷ್ಟವಾಗುತ್ತದೆ'| ಮೋದಿ ಅವರಂತಹ ದುರ್ಬಲ ಪ್ರಧಾನಿ ನೋಡಿಲ್ಲ ಎಂದ ಪ್ರಿಯಾಂಕಾ ಗಾಂಧಿ|

ನವದೆಹಲಿ(ಮೇ.10): ಪ್ರಧಾನಿ ಮೋದಿ ಒತ್ತಡದಲ್ಲಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ರಾಹುಲ್ ಗಾಂಧಿ, ಲೋಕಸಭೆ ಚುನಾವಣೆಯನ್ನು ಸೋಲುವ ಭೀತಿಯಲ್ಲಿರುವ ಪ್ರಧಾನಿ ಮೋದಿ ಒತ್ತಡದಲ್ಲಿ ತಮ್ಮ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ಕಿಚಾಯಿಸಿದ್ದಾರೆ.

ವಿವಿಧ ಮಾಧ್ಯಮಗಳಿಗೆ ಮೋದಿ ನೀಡಿರುವ ಸಂದರ್ಶನದಲ್ಲಿ ಅವರು ಒತ್ತಡದಲ್ಲಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ ಎಂದು ರಾಹುಲ್ ಹೇಳಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿ ಅವರಂತಹ ದ್ವೇಷಕಾರಿ ಹಾಗೂ ದುರ್ಬಲ ಪ್ರಧಾನಿಯನ್ನು ತಮ್ಮ ಜೀವನದಲ್ಲಿ ನೋಡಿಲ್ಲ ಎಂದು ರಾಹುಲ್ ಸಹೋದರಿ, ಪ್ರಿಯಾಂಕಾ ಗಾಂಧಿ ಕೂಡ ಪ್ರಧಾನಿ ಮೇಲೆ ವಾಗ್ದಾಳಿ ಮಾಡಿದ್ದಾರೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!