ಚುನಾವಣಾ ಪ್ರಚಾರದ ನಡುವೆಯೂ ಸನ್ನಿ ಈ ಕೆಲಸ ಮಾತ್ರ ಬಿಟ್ಟಿಲ್ಲ!: ವಿಡಿಯೋ ವೈರಲ್

Published : May 10, 2019, 11:31 AM IST
ಚುನಾವಣಾ ಪ್ರಚಾರದ ನಡುವೆಯೂ ಸನ್ನಿ ಈ ಕೆಲಸ ಮಾತ್ರ ಬಿಟ್ಟಿಲ್ಲ!: ವಿಡಿಯೋ ವೈರಲ್

ಸಾರಾಂಶ

ಚುನಾವಣಾ ಪ್ರಚಾರದ ನಡುವೆಯೂ ದಿನನಿತ್ಯದ ಕೆಲಸ ಮರೆತಿಲ್ಲ ಸನ್ನಿ ಡಿಯೋಲ್| ಬಿಜೆಪಿ ಅಭ್ಯರ್ಥಿಯ ಬದ್ಧತೆಗೆ ಅಭಿಮಾನಿಗಳು ಫುಲ್ ಫಿದಾ

ಮುಂಬೈ[ಮೇ.10]: ಬಾಲಿವುಡ್ ನಟ ಸನ್ನಿ ಡಿಯೋಲ್ ತಮ್ಮ ಆ್ಯಕ್ಷನ್ ಸಿನಿಮಾಗಳಿಂದಲೇ ಫೇಮಸ್ ಆದವರು. 'ಘಾಯಲ್', 'ಘಾತಕ್', 'ಗದರ್: ಏಕ್ ಪ್ರೇಮ್ ಕಥಾ' ಈ ಎಲ್ಲಾ ಸಿನಿಮಾಗಳಲ್ಲಿ ಅವರ ಫೈಟ್ ಆಭರೀ ಮೆಚ್ಚುಗೆಗೆ ಪಾತ್ರವಾಗಿದೆ. 62 ವರ್ಷದ ಸನ್ನಿ ಡಿಯೋಲ್ ಇವತ್ತಿಗೂ ತಮ್ಮ ಫಿಟ್ನೆಸ್ ಕಾಪಾಡಿಕೊಂಡು ಬಂದಿದ್ದಾರೆ. ಇದೇ ಕರಣದಿಂದ ಬಾಲಿವುಡ್ ನಲ್ಲೂ ಅವರು ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಚುನವಣಾ ಪ್ರಚಾರದಲ್ಲಿ ಬ್ಯೂಸಿಯಗಿರುವ ಸನ್ನಿ ಡಿಯೋಲ್ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ವಿಡಿಯೋದಲ್ಲೇನಿದೆ? ಇಲ್ಲಿದೆ ವಿವರ

ವೈರಲ್ ಆಗಿರುವ ವಿಡಿಯೋದಲ್ಲಿ ಸನ್ನಿ ಡಿಯೋಲ್ ಬಿರುಸಿನ ಚುನವಣಾ ಪ್ರಚಾರದ ಭರಾಟೆಯ ನಡುವೆಯೂ ಕೊಂಚ ಬ್ರೇಕ್ ಪಡೆದು ತನ್ನದೇ ಧಾಟಿಯಲ್ಲಿ ವ್ಯಾಯಾಮ ಮಾಡುತ್ತಿದ್ದಾರೆ. ಸನ್ನಿ ತಂದೆ ಧರ್ಮೇಂದ್ರ ಡಿಯೋಲ್ ತನ್ನ ಮಗ ವ್ಯಾಯಾಮ ಮಾಡುತ್ತಿರುವ ವಿಡಿಯೋ ಒಂದನ್ನು ಚಿತ್ರೀಕರಿಸಿ ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಜೊತೆಗೆ 'ನನ್ನ ಪ್ರೀತಿಯ ಸತ್ಯವಂತ ಮಗನೇ, ಮಾಲಿಕನ ಅತ್ಯಂತ ನಿಯತ್ತಿನ ಸೇವಕ ನೀನು' ಎಂದು ಬರೆದುಕೊಂಡಿದ್ದಾರೆ.

ಗುರುದಾಸಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸನ್ನಿ ಡಿಯೋಲ್ ಚುನಾವಣಾ ಪ್ರಚಾರದ ನಡುವೆಯೂ ಜಿಮ್ ಮಾಡಲು ಸಮಯ ಮೀಡಲಿಡಲು ಮರೆತಿಲ್ಲ. ಇದನ್ನು ಕಂಡ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!