ಚೌಕಿದಾರ್ ಚೋರ್ ಹೇ ಅನ್ನೋದು ಬಿಡಲ್ಲ: ರಾಹುಲ್ ಗಾಂಧಿ!

By Web DeskFirst Published May 4, 2019, 2:42 PM IST
Highlights

ನವದೆಹಲಿಯಲ್ಲಿ ರಾಹುಲ್ ಗಾಂಧಿ ಸುದ್ದಿಗೋಷ್ಠಿ| ಚೌಕಿದಾರ್ ಚೋರ್ ಹೇ ಹೇಳಿಕೆಗೆ ಸ್ಪಷ್ಟನೆ| ಘೋಷವಾಕ್ಯದೊಂದಿಗೆ ಸುಪ್ರೀಂಕೋರ್ಟ್ ಹೆಸರು ತಳಕು ಹಾಕಿದ್ದಕ್ಕೆ ಕ್ಷಮೆ| 'ನಾನು ಸುಪ್ರೀಂಕೋರ್ಟ್ ಕ್ಷಮೆ ಕೇಳಿದ್ದೇನೆ ಹೊರತು ಮೋದಿ ಅವರಿಗೆ ಅಲ್ಲ'| ಚೌಕಿದಾರ್ ಚೋರ್ ಹೇ ಹೇಳಿಕೆ ಮುಂದುವರೆಸುವುದಾಗಿ ರಾಹುಲ್ ಸ್ಪಷ್ಟನೆ|

ನವದೆಹಲಿ(ಮೇ.04): ಚೌಕಿದಾರ್ ಚೋರ್ ಹೇ ಎಂಬ ಹೇಳಿಕೆಗೆ ನ್ಯಾಯಾಂಗ ನಿಂದನೆಗೆ ಗುರಿಯಾಗಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

ನವದೆಹಲಿಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ರಾಹುಲ್, ರಫೆಲ್ ವಿಚಾರಣೆಯ ತೀರ್ಪನ್ನು ತಪ್ಪಾಗಿ ಉಲ್ಲೇಖಿಸಿದ್ದಕ್ಕಾಗಿ ನಾನು ಸುಪ್ರೀಂಕೋರ್ಟ್ ಕ್ಷಮೆ ಕೋರಿದ್ದೇನೆ ಹೊರು ಪ್ರಧಾನಿ ಮೋದಿ ಅವರ ಕ್ಷಮೆ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ನ್ಯಾಯಾಲಯದ ಹೆಸರನ್ನು ಘೋಷವಾಕ್ಯದಲ್ಲಿ ತಂದಿರುವುದಕ್ಕೆ ನಾನು ಕ್ಷಮೆ ಕೋರಿದ್ದೇನೆ. ಆದರೆ ಪ್ರಧಾನಿ ಮೋದಿಗೆ ಅಥವಾ ಬಿಜೆಪಿಗೆ ಕ್ಷಮೆ ಕೇಳಿಲ್ಲ ಎಂದು ರಾಹುಲ್ ತಿಳಿಸಿದರು.

Congress President Rahul Gandhi: Process is going on in Supreme Court and I made a comment attributed to SC so I apologized. I did not apologize to BJP or Modi ji. 'Chowkidar Chor hai' will remain our slogan pic.twitter.com/ZQqv72jZNW

— ANI (@ANI)

ಅಲ್ಲದೇ ಚೌಕಿದಾರ್ ಚೋರ್ ಹೇ ಎಂಬ ತಮ್ಮ ಘೋಷವಾಕ್ಯವನ್ನು ಮುಂದುವರೆಸುವುದಾಗಿಯೂ ರಾಹುಲ್ ಸ್ಪಷ್ಟಪಡಿಸಿದ್ದಾರೆ. ದೇಶದ ಯಾವ ಮೂಲೆಗೆ ಹೋಗಿ ನೀವು ಜನರನ್ನು ಕೇಳಿ ಚೌಕಿದಾರ್ ಎಂದರೆ ಕೂಡಲೇ ಜನ ಚೋರ್ ಹೇ ಎಂದು ಪ್ರತಿಕ್ರಿಯೆ ನೀಡುತ್ತಾರೆ ಎಂದು ರಾಹುಲ್ ಗುಡುಗಿದ್ದಾರೆ.

ಚೌಕಿದಾರ್ ಚೋರ್ ಹೇ ಘೋಷಣೆಗೆ ಸುಪ್ರೀಂಕೋರ್ಟ್ ನ್ನು ತಳಕು ಹಾಕಿದ್ದಕ್ಕೆ ಸುಪ್ರೀಂಕೋರ್ಟ್ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ನ್ಯಾಯಾಂಗ ನಿಂದನೆಗೆ ಗುರಿಯಾದ ಪರಿಣಾಮ ರಾಹುಲ್ ಸುಪ್ರೀಂಕೋರ್ಟ್ ಕ್ಷಮೆ ಕೂಡ ಕೇಳಿದ್ದರು.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!