ಅಂಬಾನಿ ಮನೆ ಬಿಟ್ಟು, ಮೋದಿ 10 ನಿಮಿಷ ಚರ್ಚೆಗೆ ಬರಲಿ: ಪ್ರಧಾನಿಗೆ ರಾಹುಲ್ ಸವಾಲ್

Published : May 04, 2019, 12:38 PM IST
ಅಂಬಾನಿ ಮನೆ ಬಿಟ್ಟು, ಮೋದಿ 10 ನಿಮಿಷ  ಚರ್ಚೆಗೆ ಬರಲಿ: ಪ್ರಧಾನಿಗೆ ರಾಹುಲ್ ಸವಾಲ್

ಸಾರಾಂಶ

ಭಾರತೀಯ ಸೇನೆ ಮೋದಿಯವರ ಸ್ವತ್ತಲ್ಲ| ಯುಪಿಎ ಸರ್ಕಾರದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು| ಭಾರತೀಯ ಸೇನೆ 70 ವರ್ಷದಿಂದ ಸದೃಢವಾಗಿದೆ| ಇದರಲ್ಲಿ ಏನು ಹೊಸ ಸಾಧನೆ ಮಾಡಿದ್ದಾರೆಂದು ಹೇಳಲಿ| ಭ್ರಷ್ಟಾಚಾರದ ಬಗ್ಗೆ ನನ್ನ ಜೊತೆ ಮೋದಿಯವರು ಚರ್ಚೆಗೆ ಬರಲಿ| 5ರಿಂದ 10 ನಿಮಿಷವರೆಗಾದ್ರೂ ಚರ್ಚೆಗೆ ಮೋದಿ ಬರಲಿ| ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ

ನವದೆಹಲಿ[ಮೇ.04]: ಲೋಕಸಭಾ ಚುನಾವಣೆ ದೇಶದೆಲ್ಲೆಡೆ ನಡೆಯುತ್ತಿದೆ. ಹೀಗಿರುವಾಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಾ ಭಾರತೀಯ ಸೇನೆಯ ಬಳಿಕೆ, ನೋಟ್ ಬ್ಯಾನ್, ಭ್ರಷ್ಟಾಚಾರ, ಭಯೋತ್ಪಾದನೆ, ಅರ್ಥವ್ಯವಸ್ಥೆ, ನಿರುದ್ಯೋಗಕ್ಕೆ ಸಂಬಂಧಿಸಿದಂತೆ ಟೀಕಿಸಿದ್ದಾರೆ. ಅಲ್ಲದೇ ಮೋದಿ 10 ನಿಮಿಷ  ಚರ್ಚೆಗೆ ಬರಲಿ ಎಂದು ಸವಾಲೆಸೆದಿದ್ದಾರೆ. 

ಮೋದಿ ವಿರುದ್ಧ ರಾಹುಲ್ ಗಾಂಧಿ 10 ಟೀಕೆಗಳು

1. ಸೇನೆ ಪ್ರಧಾನಿ ಮೋದಿಯ ವೈಯುಕ್ತಿಕ ಸ್ವತ್ತಲ್ಲ. ಸರ್ಜಿಕಲ್ ಸ್ಟ್ರೈಕ್ ಸಶಸ್ತ್ರ ಪಡೆಗಳು ನಡೆಸಿದ್ದವು. ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಗೇಮ್ ಆಗಿತ್ತು ಎನ್ನುವ ಮೂಲಕ ಅವರು ಭಾರತೀಯ ಸೇನೆಯನ್ನು ಅವಮಾನಿಸಿದ್ದಾರೆ.

2. ನಾನು ಇತ್ತೀಚೆಗೆ ವಿಪಕ್ಷಗಳ ಟೀಕೆ ಎದುರಿಸಲಾಗದ, ಓರ್ವ ಭಯಭೀತ ಪ್ರಧಾನಿಯನ್ನು ನೊಡುತ್ತಿದ್ದೇನೆ.

3. ಮೋದಿ ಸರ್ಕಾರ ದೇಶದ ಅರ್ಥ ವ್ಯವಸ್ಥೆಯನ್ನೇ ಹಾಳು ಮಾಡಿದೆ. ಸದ್ಯಕ್ಕಿರುವ ಬಹುದೊಡ್ಡ ಸಮಸ್ಯೆ ಎಂದರೆ ನಿರುದ್ಯೋಗ.

4. ಮಸೂದ್ ಅಜರ್ ಓರ್ವ ಭಯೋತ್ಪಾದಕ, ಆತನಿಗೆ ಶಿಕ್ಷೆ ಸಿಗಲೇಬೇಕು. ಆದರೆ ಆತನನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ದು ಯಾರು? ಕಾಂಗ್ರೆಸ್ ಸರ್ಕಾರವಲ್ಲ. ಅಂದು ಅಧಿಕಾರದಲ್ಲಿ ಇದ್ದಿದ್ದು ನಬಿಜೆಪಿ ನೇತೃತ್ವದ ಸರ್ಕಾರ.

5. ಭಯೋತ್ಪಾದನೆ ವಿರುದ್ಧ ನಾವು ಮತ್ತಷ್ಟು ಬಲಶಾಲಿಯಾಗಿ ಹೋರಾಡಬೇಕು. ನಾವು ಮೋದಿ ಸರ್ಕಾರವನ್ನು ಹೋಲಿಸಿದರೆ ಮತ್ತಷ್ಟು ಶಕ್ತಿಶಾಲಿಯಾಗಿ ಹೋರಾಡುತ್ತೇವೆ. ಬಿಜೆಪಿ ಭಯೋತ್ಪಾದನಾ ಸಮಸ್ಯೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

6. ಪ್ರಧಾನಿ ಮೋದಿ ಮೇಲೆ ಯಾವುದೇ ವಿಚಾರದಲ್ಲಿ ಕೊಂಚ ಒತ್ತಡ ಬೀಳುತ್ತದೆ ಎಂದಾಗ ಅವರು ಅದರಿಂದ ಜಾರಿಕೊಳ್ಳುತ್ತಾರೆ.

7. ಮೋದಿ ಚುನಾವಣೆಯಲ್ಲಿ ಸೋಲನುಭವಿಸುತ್ತಾರೆ ಎಂಬುವುದೇ ವಾಸ್ತವ. ಇದು ಅವರ ಮುಖಭಾವದಲ್ಲಿ ಕಾಣಬಹುದು.

8. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಾರತದ ಧ್ವನಿ ಇದೆ ಆದರೆ ಬಿಜೆಪಿ ಪ್ರಣಾಳಿಕೆಯಲ್ಲಿ ಕೇವಲ ಓಬ್ಬ ವ್ಯಕ್ತಿಯ ಧ್ವನಿ ಕೇಳಬಹುದು. ಆ ವ್ಯಕ್ತಿ ಗೆಲ್ಲುವುದು ಅಸಾಧ್ಯ, ಯಾಕೆಂದರೆ ಈ ದೇಶದ ವಿರುದ್ಧ ಯಾರೂ ನಿಲ್ಲಲು ಸಾಧ್ಯವಿಲ್ಲ.

9. ಪ್ರಧಾನಿ ಮೋದಿ ಬಳಿ ಯಾವೊಬ್ಬ ವಿಶೇಷ ತಜ್ಞರಿಲ್ಲ. ಇದ್ದರೂ ಅವರ ಸಲಹೆ ಪಡೆಯುವುದಿಲ್ಲ. ಇದೇ ಕಾರಣದಿಂದ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ನನ್ನೊಂದಿಗೆ ಚರ್ಚೆ ನಡೆಸಲು ಮುಂದಾಗುತ್ತಿಲ್ಲ.

10. ರೈತರ ಸಮಸ್ಯೆ, ಭ್ರಷ್ಟಾಚಾರ, ನಿರುದ್ಯೋಗ, ಸಂಸ್ಥೆಗಳ ಅತಿಕ್ರಮಣ ಪ್ರಮುಖ ಸಮಸ್ಯೆಗಳು. ಇದೇ ಕಾರಣದಿಂದ ಬಿಜೆಪಿ ಸೋಲನುಭವಿಸಲಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!