ಅಮೇಥಿಯಲ್ಲಿ ರಾಹುಲ್ ನಾಮಪತ್ರ: ಕುಟುಂಬಸ್ಥರೆಲ್ಲರೂ ಇದ್ದರು ಹತ್ತಿರ!

By Web DeskFirst Published Apr 10, 2019, 1:47 PM IST
Highlights

ಅಮೇಥಿಯಲ್ಲಿ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ| ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದ ರಾಹುಲ್ ಗಾಂಧಿ| ಸಾವಿರಾರು ಬೆಂಬಲಿಗರೊಂದಿಗೆ ಚುನಾವಣಾ ಆಯೋಗದ ಕಚೇರಿಗೆ ಆಗಮನ| ಕಾಂಗ್ರೆಸ್ ಅಧ್ಯಕ್ಷರಿಗೆ ಸಾಥ್ ನೀಡಿದ ಗಾಂಧಿ ಕುಟುಂಬ|

ಅಮೇಥಿ:(ಏ.10): ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಅಮೇಥಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದು, ಸಾವಿರಾರು ಕಾರ್ಯಕರ್ತರು ಮತ್ತು ಕುಟುಂಬಸ್ಥರ ಬೆಂಬಲದೊಂದಿಗೆ ಚುನಾವಣಾ ಆಯೋಗಕ್ಕೆ ಬಂದು ನಾಮಪತ್ರ ಸಲ್ಲಿಸಿದರು.

Congress President Rahul Gandhi holds road show in Amethi. Priyanka Gandhi Vadra along with her husband Robert Vadra, son Raihan and daughter Miraya also present. pic.twitter.com/edDv8W7aHl

— ANI UP (@ANINewsUP)

ನಾಮಪತ್ರ ಸಲ್ಲಿಕೆಗೂ ಮುನ್ನ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದ ರಾಹುಲ್ ಗಾಂಧಿ, ಅಮೇಥಿ ಲೋಕಸಭಾ ಕ್ಷೇತ್ರದಿಂದ ಗೆಲುವಿನ ವಿಶ್ವಸ ವ್ಯಕ್ತಪಡಿಸಿದರು.

ನಂತರ ಆಯೋಗದ ಕಚೇರಿಗೆ ತೆರಳಿದ ರಾಹುಲ್ ಗಾಂಧಿ ಅಧಿಕಾರಿಗಳ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ ರಾಹುಲ್ ತಾಯಿ ಸೋನಿಯಾ ಗಾಂಧಿ, ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಿ ಹಾಗೂ ಭಾವ ರಾಬರ್ಟ್ ವಾದ್ರಾ ಉಪಸ್ಥಿತರಿದ್ದರು.

Congress President Rahul Gandhi files his nomination from Amethi for . Sonia Gandhi, Priyanka Gandhi Vadra and Robert Vadra also present. pic.twitter.com/EvNswqEm3N

— ANI UP (@ANINewsUP)

ಅಮೇಥಿಯಲ್ಲಿ ರಾಹುಲ್ ಗೆ ವಿರುದ್ಧವಾಗಿ ಬಿಜೆಪಿಯಿಂದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸ್ಪರ್ಧಿಸುತ್ತಿದ್ದು, ಈ ಬಾರಿ ತೀವ್ರ ಪೈಪೋಟಿ ನಡೆಯಲಿದೆ ಎಂದು ಅಂದಾಜಿಸಲಾಗಿದೆ. 

ಅಮೇಥಿಯಲ್ಲಿ ರಂದು ಚುನಾವಣೆ ನಡೆಯಲಿದ್ದು, ಮೇ.23ರಂದು ಫಲಿತಾಂಶ ಹೊರ ಬೀಳಲಿದೆ.

click me!