ಕೈ ನಾಯಕಿ ಉರ್ಮಿಳಾಗೆ ಮೋದಿ ಘೋಷಣೆಯಿಂದ ಸ್ವಾಗತ!

By Web DeskFirst Published Apr 17, 2019, 2:23 PM IST
Highlights

ಲೋಕಸಭಾ ಚುನಾವಣಾ ಪ್ರಚಾರಕ್ಕಿಳಿದ ಊರ್ಮಿಳಾ ಮಾತೋಂಡ್ಕರ್| ಕೈ ನಾಯಕಿಯನ್ನು ಮೋದಿ ಘೋಷಣೆಯೊಂದಿಗೆ ಸ್ವಾಗತಿಸಿದ ಸಾರ್ವಜನಿಕರು

ನವದೆಹಲಿ[ಏ.17]: ಈಗಾಗಲೇ ಲೋಕಸಭಾ ಚುನಾವಣೆ ಆರಂಭವಾಗಿದೆ, ನಾಯಕರು ಮತದಾರರನ್ನು ಓಲೈಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ರೋಡ್ ಶೋ, ಸಮಾವೇಶ ಸೇರಿದಂತೆ ಹಲವಾರು ಬಗೆಯ ಪ್ರಚಾರ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಬಾಲಿವುಡ್ ನಟಿ ಉರ್ಮಿಳಾ ಮಾತೋಂಡ್ಕರ್ ಕೂಡಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೀಗ ಪ್ರಚಾರ ಕಾರ್ಯದಲ್ಲಿ ಕಾಂಗ್ರೆಸ್ ಪರ ಮತ ಯಾಚಿಸಿದ್ದ ಉರ್ಮಿಳಾಗೆ ಸಾರ್ವಜನಿಕರು ಮೋದಿ ಘೋಷಣೆ ಹಾಕುವ ನಮೂಲಕ ಸ್ವಾಗತಿಸಿದ್ದಾರೆ.

ಹೌದು ಇಂದು ಬುಧವಾರ ಬೆಳಗ್ಗೆ ಉರ್ಮಿಳಾ ಮಲಾಡ್ ಮಾರುಕಟ್ಟೆಯಿಂದ ಚುನಾವಣಾ ಪ್ರಚಾರ ಆರಂಭಿಸಿದ್ದರು. ಆದರೆ ಮಾರುಕಟ್ಟೆಯಲ್ಲಿರುವ ಅಂಗಡಿ ಮುಂಗಟ್ಟುಗಳಲ್ಲಿ ನಿಂತಿದ್ದ ಸಾರ್ವಜನಿಕರು ನಟಿಯನ್ನು ನೋಡುತ್ತಿದ್ದಂತೆಯೇ 'ಮೋದಿ, ಮೋದಿ' ಎಂಬ ಘೋಷಣೆ ಕೂಗಲಾರಂಭಿಸಿದ್ದಾರೆ. ಹೀಗಿದ್ದರೂ ಊರ್ಮಿಳಾ ಮಾತ್ರ ಈ ವಿಚಾರಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಜನರೆಡೆ ಕೈ ಬೀಸುತ್ತಾ ಮುಂದುವರೆದಿದ್ದಾರೆ. 

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಅಭ್ಯರ್ಥಿ 'ಯಾವ ರೀತಿ ಅಭ್ಯರ್ಥಿಗಳಿಗೆ ಪ್ರಚಾರ ನಡೆಸುವ ಸ್ವಾತಂತ್ರ್ಯ ಇದೆಯೋ ಅದೇ ರೀತಿ ಸಾರ್ವಜನಿಕರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದೆ. ಕೆಲವರು ಮೋದಿ ಎಂದು ಘೋಷಣೆ ಕೂಗಿದರೆ ಅದು ಕಾಂಗ್ರೆಸ್ ಗೆ ತೊಪ್ಪೆನಿಸಬಹುದಷ್ಟೇ' ಎಂದಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28

click me!