ಲೋಕಸಭಾ ಚುನಾವಣಾ ಮಹಾ ಸಮರ ಆರಂಭವಾದ ಬೆನ್ನಲ್ಲೇ ಕೋಡಿಮಠದ ಶ್ರೀಗಳು ಮುಂದಿನ ಆಗುಹೋಗುಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಕೊಡಗು : ಈ ವರ್ಷವೂ ನಾಡಿನಾದ್ಯಂತ ಹೆಚ್ಚು ಮಳೆಯಾಗುತ್ತದೆ. ಮಳೆಯ ನೀರು ಕೆರೆ ಕಟ್ಟೆಗಳು ಹಾಗಾಗಿ ಅಲ್ಲಲ್ಲಿ ನಿಂತು ಬೆಳೆ ಕಡಿಮೆಯಾಗುತ್ತದೆ. ಮತ್ತು ರೋಗ ರುಜಿನಗಳು ಹೆಚ್ವುತ್ತವೆ ಎಂದು ಅರಸೀಕೆರೆ ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿ ಮಾತನಾಡಿದ ಅವರು ಕಳೆದ ವರ್ಷದಂತೆ ಈ ಬಾರಿಯೂ ಕೂಡ ಶ್ರೀಗಳು ಭವಿಷ್ಯ ನುಡಿದಿದ್ದು, ಮುಂದಿನ ಆಗುಹೋಗುಗಳ ಬಗ್ಗೆ ತಿಳಿಸಿದ್ದಾರೆ.
ನಂಜರಾಯಪಟ್ಟಣದ ಗ್ರಾಮ ದೇವರ ಉತ್ಸವದಲ್ಲಿ ಭಾಗಿಯಾಗಿ ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದ ಅವರು, ರಾಜಕೀಯ ಬೆಳವಣಿಗೆಗಳ ಕುರಿತು ನಾನು ಮಾತನಾಡೋ ಹಾಗಿಲ್ಲ. ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ ಎಂದು ಶ್ರೀಗಳು ಹೇಳಿದರು.
ಕಳೆದ ವರ್ಷವೂ ಇದೇ ಗ್ರಾಮದೇವರ ಉತ್ಸವಕ್ಕೆ ಧಾವಿಸಿದ್ದಾಗ ಈ ಬಾರಿ ಜಲಪ್ರಳಯ ಆಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಅದರಂತೆಯೇ ಕೊಡಗಿನಲ್ಲಿ ಜಲಪ್ರಳಯ ಆಗಿತ್ತು. ನಂಜುಂಡೇಶ್ವರ ದೇವರನ್ನು ನಂಬಿದಲ್ಲಿ ಯಾವುದೇ ಸಮಸ್ಯೆಯಾಗದರು ಎಂದು ಹೇಳಿದ್ದರು. ಈ ಪ್ರದೇಶದಲ್ಲಿ ಹೆಚ್ಚಿನ ಹಾನಿ ಸಂಭವಿಸಿರಲಿಲ್ಲ.
ಶ್ರೀಗಳು ಕಾವೇರಿ ನದಿಗೆ ತೆರಳಿ ಗಂಗಾ ಪೂಜೆ ನೆರವೇರಿಸಿ ಗ್ರಾಮ ದೈವಗಳಾದ ಬಸವೇಶ್ವರ ಮತ್ತು ಕನ್ನಂಬಾಡಮ್ಮ ದೇವರ ಅಡ್ಡಪಲ್ಲಕ್ಕಿ ಉತ್ಸವವನ್ನು ವೀರಭದ್ರ ನೃತ್ಯದೊಂದಿಗೆ ಮೆರವಣಿಗೆಯಲ್ಲಿ ದೇವಾಲಯದ ಮುಂದೆ ಕೊಂಡ ಪೂಜೆ ನೆರವೇರಿಸಿದರು.