ಅನಾರೋಗ್ಯ ಪೀಡಿತ ಮಗುವನ್ನು ಪ್ರಿಯಾಂಕಾ ಖಾಸಗಿ ವಿಮಾನದಲ್ಲಿ ಏರ್ ಲಿಫ್ಟ್!

Published : May 11, 2019, 09:57 PM IST
ಅನಾರೋಗ್ಯ ಪೀಡಿತ ಮಗುವನ್ನು ಪ್ರಿಯಾಂಕಾ ಖಾಸಗಿ ವಿಮಾನದಲ್ಲಿ ಏರ್ ಲಿಫ್ಟ್!

ಸಾರಾಂಶ

ಅನಾರೋಗ್ಯ ಪೀಡಿತ ಮಗುವನ್ನು ಖಾಸಗಿ ವಿಮಾನದಲ್ಲಿ ಲಿಫ್ಟ್ ಮಾಡಿದ ಪ್ರಿಯಾಂಕಾ| ಎರಡೂವರೆ ವರ್ಷದ ಮಗುವನ್ನು ತಮ್ಮ ಖಾಸಗಿ ವಿಮಾನದ ಮೂಲಕ ದೆಹಲಿಗೆ ಏರ್​ ಲಿಫ್ಟ್​| ಟ್ಯೂಮರ್​ನಿಂದ ಬಳಲುತ್ತಿದ್ದ ಬಾಲಕಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲೆ| ವಿಮಾನದಲ್ಲಿ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕ್ರಿಕೆಟಿಗ ಅಜರುದ್ದೀನ್|

ನವದೆಹಲಿ(ಮೇ.11): ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಎರಡೂವರೆ ವರ್ಷದ ಮಗುವನ್ನು ತಮ್ಮ ಖಾಸಗಿ ವಿಮಾನದ ಮೂಲಕ ದೆಹಲಿಗೆ ಏರ್​ಲಿಫ್ಟ್​ ಮಾಡುವ ಮೂಲಕ, ಪೂರ್ವ ಉತ್ತರಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾನವೀಯತೆ ಮೆರೆದಿದ್ದಾರೆ.

ಟ್ಯೂಮರ್​ನಿಂದ ಬಳಲುತ್ತಿದ್ದ ಬಾಲಕಿಯನ್ನು ಉತ್ತರ ಪ್ರದೇಶದ ಪ್ರಯಾಗ್​ರಾಜ್​ನ ಕಮಲಾ ನೆಹರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಬಾಲಕಿಯ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ದೆಹಲಿಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರು.

ಈ ವಿಷಯವನ್ನು ಕಾಂಗ್ರೆಸ್ ನಾಯಕರೊಬ್ಬರು ಪ್ರಿಯಾಂಕಾ ಗಾಧಿ ಅವರ ಗಮನಕ್ಕೆ ತಂದಿದ್ದು, ಕೂಡಲೇ ವಿಮಾನದ ಮೂಲಕ ಬಾಲಕಿಯನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿದೆ.
ಈ ವಿಮಾನದಲ್ಲಿ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕ್ರಿಕೆಟಿಗ ಅಜರುದ್ದೀನ್, ಬಾಲಕಿ ಅಂಶು ಹಾಗೂ ಆಕೆಯ ಪೋಷಕರು ದೆಹಲಿಗೆ ತೆರಳಿದರು.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!