ಹಳದಿ ಸೀರೆ ಚುನಾವಣಾಧಿಕಾರಿ: ಕರ್ತವ್ಯಕ್ಕೆ ಸೌಂದರ್ಯವೇ ಮಾರಿ?

Published : May 11, 2019, 07:42 PM IST
ಹಳದಿ ಸೀರೆ ಚುನಾವಣಾಧಿಕಾರಿ: ಕರ್ತವ್ಯಕ್ಕೆ ಸೌಂದರ್ಯವೇ ಮಾರಿ?

ಸಾರಾಂಶ

ಇಂಟರ್‌ನೆಟ್ ಸೆನ್ಸೆಶನ್ ಸೃಷ್ಟಿಸಿದ ಮಹಿಳಾ ಚುನಾವಣಾಧಿಕಾರಿ| ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆದ ಮಹಿಳಾ ಚುನಾವಣಾಧಿಕಾರಿ| 5ನೇ ಹಂತದ ಮತದಾನದ ವೇಳೆ ಮತಗಟ್ಟೆ ಅಧಿಕಾರಿಯಾಗಿ ಕರ್ತವ್ಯ ನಿಭಾಯಿಸಿದ ರೀನಾ ದ್ವಿವೇದಿ| ಹಳದಿ ಸೀರೆಯುಟ್ಟ ಅಧಿಕಾರಿಗಾಗಿ ಇಂಟರ್‌ನೆಟ್ ತಡಕಾಡಿದ ಯುವಕರು| ಕರ್ತವ್ಯದಲ್ಲಿ ಸೌಂದರ್ಯ ನೋಡುವ ಭಾವನೆ ಏಕೆಂದ ರೀನಾ ದ್ವಿವೇದಿ|

ಲಕ್ನೋ(ಮೇ.11): ದೇಶದೆಲ್ಲೆಡೆ ಈಗ ಲೋಕಸಭಾ ಚುನಾವಣಾ ಕಾವು ಜೋರಾಗಿದೆ. ಬಿರು ಬೇಸಿಗೆಯಲ್ಲೇ ಮತದಾರ ತನ್ನ ಮತದಾನದ ಹಕ್ಕನ್ನು ಚಲಾಯಿಸುತ್ತಿದ್ದಾನೆ. ಈ ಮಧ್ಯೆ ಹಳದಿ ಸೀರೆಯುಟ್ಟ ಮಹಿಳಾ ಚುನಾವಣಾಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಭಾರೀ ಫೇಮಸ್ ಆಗಿದ್ದಾರೆ.

ಮೇ.6ರಂದು ನಡೆದ ಐದನೇ ಹಂತದ ಚುನಾವಣೆ ವೇಳೆ ಮತಗಟ್ಟೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಲಕ್ನೋ ಮೂಲದ ಚುನಾವಣಾಧಿಕಾರಿ ರೀನಾ ದ್ವಿವೇದಿ, ಇದೀಗ ಇಂಟರ್‌ನೆಟ್ ಸೆನ್ಸೆಶನ್ ಆಗಿದ್ದಾರೆ. ಜನ ಅದರಲ್ಲೂ ಹೆಚ್ಚಾಗಿ ಯುವಕರು ಈಕೆಯ ಕುರಿತು ಮಾಹಿತಿಗಾಗಿ ಇಂಟರ್‌ನೆಟ್ ತಡಕಾಡುತ್ತಿದ್ದಾರೆ.

ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ರೀನಾ, ತಾವು ತಮ್ಮ ಚುನಾವಣಾ ಕರ್ತವ್ಯ ನಿಭಾಯಿಸಿದ್ದು ಕರ್ತವ್ಯದಲ್ಲಿ ಸೌಂದರ್ಯ ನೋಡುವ ಮನೋಭಾವನೆ ಸಲ್ಲದು ಎಂದು ಸೂಕ್ಷ್ಮವಾಗಿ ನೀತಿ ಪಾಠ ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!