ಸ್ಯಾಮ್ ಹೇಳಿಕೆ ಕಾಂಗ್ರೆಸ್ ಮನಸ್ಥಿತಿ ಬಿಂಬಿಸುತ್ತದೆ: ಮೋದಿ ವಾಗ್ದಾಳಿ!

By Web DeskFirst Published May 10, 2019, 4:31 PM IST
Highlights

1984 ರ ಸಿಖ್ ನರಮೇಧದ ಕುರಿತು ಸ್ಯಾಮ್ ಪಿತ್ರೋಡಾ ಹೇಳಿಕೆ| ಕಾಂಗ್ರೆಸ್ ನಾಯಕನ ಹೇಳಿಕೆ ಖಂಡಿಸಿದ ಪ್ರಧಾನಿ ಮೋದಿ| 'ಸಿಖ್ ನರಮೇಧದ ಕುರಿತು ಕಾಂಗ್ರೆಸ್ ನಾಯಕರೆಲ್ಲಾ ಉಡಾಫೆಯ ಮಾತುಗಳನ್ನೇ ಆಡುತ್ತಾರೆ'| ಸ್ಯಾಮ್ ಪಿತ್ರೋಡಾ ಹೇಳಿಕೆ ಕಾಂಗ್ರೆಸ್ ಮನಸ್ಥಿತಿ ಬಿಂಬಿಸುತ್ತದೆ ಎಂದ ಪ್ರಧಾನಿ| ದೇಶದ ಭದ್ರತೆಗೆ ಸವಾಲೊಡ್ಡುವ ಯಾರೇ ಆದರೂ ಬಿಡುವುದಿಲ್ಲ ಎಂದ ಪ್ರಧಾನಿ|

ರೋಹ್ಟಕ್(ಮೇ.10): 1984ರ ಸಿಖ್ ನರಮೇಧದ ಕುರಿತು ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ನೀಡಿರುವ ಹೇಳಿಕೆಯನ್ನು ಪ್ರಧಾನಿ ಮೋದಿ ತೀವ್ರವಾಗಿ ಖಂಡಿಸಿದ್ದಾರೆ.

PM Modi on Sam Pitroda's remark on 1984 riots: Reflects Congress's mentality, they have done this for years. Rajiv Gandhi had said 'when a big tree falls earth shakes'. They even made Kamal Nath incharge of Punjab,now made him MP CM. So dont take this as an individual's statement pic.twitter.com/CR3kLHDJs1

— ANI (@ANI)

ರೋಹ್ಟಕ್'ನಲ್ಲಿ ಚುನಾವಣಾ ಪ್ರಚಾರದ ಮಧ್ಯೆ ANI ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪ್ರಧಾನಿ, ಪಿತ್ರೋಡಾ ಹೇಳಿಕೆ ಕಾಂಗ್ರೆಸ್ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಹರಿಹಾಯ್ದಿದ್ದಾರೆ. ಕಳೆದ ಚುನಾವಣೆಯಲ್ಲಿ ಕೇವಲ 44 ಸೀಟುಗಳನ್ನು ಗೆದ್ದು ಇಷ್ಟೊಂದು ಗರ್ವ ತೋರಿಸುತ್ತಿರುವ ಕಾಂಗ್ರೆಸ್‌ಗೆ ಈ ಬಾರಿಯ ಚುನಾವಣೆಯಲ್ಲಿ ಮತದಾರ ತಕ್ಕ ಪಾಠ ಕಲಿಸಲಿದ್ದಾನೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

PM Narendra Modi on Sam Pitroda's remark on 1984 riots: This is Congress's arrogance which got them 44 seats and now people of India will ensure that they slip even further pic.twitter.com/bdcTdSKBK1

— ANI (@ANI)

ಸಿಖ್ ನರಮೇಧದ ವೇಳೆಯೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಇಂತದ್ದೇ ಹೇಳಿಕೆ ನೀಡಿದ್ದರು. ಮುಮದೆ ಕಮಲನಾಥ್ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಆ ಭಯಾನಕ ಘಟನೆಯ ಕುರಿತು ಉಡಾಫೆಯ ಮಾತುಗಳನ್ನಾಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.

: PM Narendra Modi to ANI on Sam Pitroda's remarks on 1984 riots, "Reflects Congress's mentality. Rajiv Gandhi had said 'when a big tree falls earth shakes'. They even made Kamal Nath incharge of Punjab, now made him MP CM. So don't take this as an individual's statement" pic.twitter.com/V3MOJZMQYe

— ANI (@ANI)

ತಾವು ಚುನಾವಣಾ ಪ್ರಚಾರಗಳಲ್ಲಿ ಕೇಂದ್ರ ಸರ್ಕಾರದ 5 ವರ್ಷಗಳ ಸಾಧನೆ ಮತ್ತು ಬಡವರ ಕಲ್ಯಾಣಕ್ಕಾಗಿ ಕೈಗೊಂಡ ಕ್ರಮಗಳ ಕುರಿತು ಮಾತನಾಡುತ್ತಿದ್ದು, ಕಾಂಗ್ರೆಸ್ ತಮ್ಮ ಮೇಲೆ ವೈಯಕ್ತಿಕ ನಿಂದನೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದೆ ಎಂದು ಪ್ರಧಾನಿ ಆರೋಪಿಸಿದರು.

PM Modi on Oppn charge that PM raking up nationalism issue: I am saying from Day 1 we gave houses to 1.5 cr poor,electrification of 18,000 villages, Ayushmaan Bharat,MSP,highways etc.I wanted Congress to challenge us but Congress cant debate on these issues as facts are required. pic.twitter.com/trZPCrWT6e

— ANI (@ANI)

ಇದೇ ವೇಳೆ ಜೆಇಎಂ ನಾಯಕ ಮಸೂದ್ ಅಜರ್ ಮತ್ತು ಪಾಕಿಸ್ತಾನದಲ್ಲಿರುವ ದಾವೂದ್ ಇಬ್ರಾಹಿಂ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮೋದಿ, ದೇಶದ ಭದ್ರತೆಗೆ ಅಪಾಯ ತಂದೊಡ್ಡುವ ಯಾರೇ ಆದರೂ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

PM Modi on if action will be taken against Hafiz Saeed & Dawood Ibrahim like Masood Azahar, if BJP comes back to power: Don't take names of individuals, any threat to nation, be it by people or system, whether it's on land, sky or in space, BJP is bound to protect India & Indians pic.twitter.com/Hn166VqO2p

— ANI (@ANI)

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!