ಕೇಜ್ರಿಗೆ ಹೊಡೆದಿದ್ದೇಕೆ ಗೊತ್ತಿಲ್ಲ, ಆದ್ರೆ ಪಶ್ಚತ್ತಾಪವಿದೆ: ಸುರೇಶ್!

Published : May 10, 2019, 04:04 PM ISTUpdated : May 10, 2019, 04:06 PM IST
ಕೇಜ್ರಿಗೆ ಹೊಡೆದಿದ್ದೇಕೆ ಗೊತ್ತಿಲ್ಲ, ಆದ್ರೆ ಪಶ್ಚತ್ತಾಪವಿದೆ: ಸುರೇಶ್!

ಸಾರಾಂಶ

ನಾನೇಕೆ ಕೇಜ್ರಿಗೆ ಹೊಡೆದೆ ಎಂಬುದು ಗೊತ್ತಿಲ್ಲ ಎಂದ ಸುರೇಶ್| ಆದರೆ ನನ್ನ ಕೃತ್ಯಕ್ಕೆ ಪಶ್ಚಾತಾಪವಿದೆ ಎಂದ ಯುವಕ| ಮೇ.4ರಂದು ದೆಹಲಿಯ ಮೋತಿನಗರದಲ್ಲಿ ನಡೆದ ರೋಡ್ ಶೋ ವೇಳೆ ಕೇಜ್ರಿಗೆ ಕಪಾಳಮೋಕ್ಷ| ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ ಎಂದ ಸುರೇಶ್| ಕೇಜ್ರಿವಾಲ್'ಗೆ ಹೊಡೆಯುವಂತೆ ನನಗೆ ಯಾರೂ ಹೇಳಿಲ್ಲ ಎಂದ ಯುವಕ|

ನವದೆಹಲಿ(ಮೇ.10): ರೋಡ್ ಶೋ ವೇಳೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್'ಗೆ ಕಪಾಳಮೋಕ್ಷ ಮಾಡಿದ ಯುವಕ, ಈ ಕುರಿತು ತನಗೆ ಪಶ್ಚಾತಾಪವಿದೆ ಎಂದು ಖೇದ ವ್ಯಕ್ತಪಡಿಸಿದ್ದಾನೆ.

'ನಾನು ಕೇಜ್ರಿವಾಲ್ ಅವರಿಗೆ ಯಾಕೆ ಹೊಡೆದೆ ಎಂಬುದಕ್ಕೆ ಕಾರಣ ಗೊತ್ತಿಲ್ಲ, ಆದರೆ ನನ್ನ ವರ್ತನೆಯಿಂದ ನನ್ನ ಮನಸ್ಸಿನಲ್ಲಿ ಪಶ್ಚಾತಾಪ ಭಾವನೆ ಮೂಡಿದೆ..'ಎಂದು ಸುರೇಶ್ ಕ್ಷಮೆ ಕೋರಿದ್ದಾನೆ.

ಇದೇ ವೇಳೆ ತಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ ಎಂದು ಸ್ಪಷ್ಟಪಡಿಸಿರುವ ಸುರೇಶ್, ಕೇಜ್ರಿವಾಲ್ ಅವರಿಗೆ ಹೊಡೆಯುವಂತೆ ತನಗೆ ಯಾರೂ ಪ್ರೇರೆಪಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ.

ಕಳೆದ ಮೇ 4ರಂದು ದೆಹಲಿಯ ಮೋತಿನಗರದಲ್ಲಿ ಪ್ರಚಾರದಲ್ಲಿ ತೊಡಗಿದ್ದ ಕೇಜ್ರಿವಾಲ್'ಗೆ ಸುರೇಶ್ ಕಪಾಳಮೋಕ್ಷ ಮಾಡಿದ್ದ. ತಕ್ಷಣ ಕೇಜ್ರಿವಾಲ್ ಅವರ ರಕ್ಷಣೆಗೆ ಧಾವಿಸಿದ ಬೆಂಬಲಿಗರು, ಯುವಕನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದರು.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!