‘ಬುವಾ-ಬಬುವಾ’ ಅವಧಿಗಿಂತ ಹೆಚ್ಚು ಕಾಲ ಸಿಎಂ ಆಗಿದ್ದೆ: ಮೋದಿ!

Published : May 14, 2019, 06:29 PM ISTUpdated : May 14, 2019, 06:32 PM IST
‘ಬುವಾ-ಬಬುವಾ’ ಅವಧಿಗಿಂತ ಹೆಚ್ಚು ಕಾಲ ಸಿಎಂ ಆಗಿದ್ದೆ: ಮೋದಿ!

ಸಾರಾಂಶ

ಅಖಿಲೇಶ್, ಮಾಯಾ ನೀರಿಳಿಸಿದ ಪ್ರಧಾನಿ ಮೋದಿ| ‘ಅಖಿಲೇಶ್, ಮಾಯಾ ಅವಧಿಗಿಂತ ಹೆಚ್ಚಿನ ಕಾಲ ಸಿಎಂ ಆಗಿದ್ದೆ’| ನನ್ನ ವಿರುದ್ಧ ಭ್ರಷ್ಟಾಚಾರ ಆರೋಪ ಇದ್ದರೆ ಸಾಬೀತು ಮಾಡಿ ಎಂದು ಸವಾಲು| ‘ನಾನು ಅಕ್ರಮ ಆಸ್ತಿ ಗಳಿಸಿದ್ದರ ದಾಖಲೆ ಇದ್ದರೆ ಬಹಿರಂಗಪಡಿಸಿ’|

ಬಲಿಯಾ(ಮೇ.14): ತಮ್ಮ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಅಥವಾ ವಿದೇಶಿ ಬ್ಯಾಂಕ್‌ಗಳಲ್ಲಿ ಹಣ ಇಟ್ಟಿರುವ ಆರೋಪವನ್ನು ಸಾಬೀತುಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳಿಗೆ ಸವಾಲು ಹಾಕಿದ್ದಾರೆ.

ಮಹಾಮಿಲಾವಟಿ(ಮಹಾ ಕಲಬೆರಕೆ) ಗೆ ನಾನು ಬಹಿರಂಗ ಸವಾಲು ಹಾಕುತ್ತಿದ್ದು, ನನಗೆ ಸಂಬಂಧಿಸಿದ ಬೇನಾಮಿ ಆಸ್ತಿ, ಫಾರ್ಮ್ ಹೌಸ್, ಶಾಪಿಂಗ್ ಕಾಂಪ್ಲೆಕ್ಸ್ ಅಥವಾ ವಿದೇಶಿ ಬ್ಯಾಂಕ್‌ಗಳಲ್ಲಿ ಹಣ ಇಟ್ಟಿರುವ ಕುರಿತು ದಾಖಲೆ ಇದ್ದರೆ ಅದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.

ಉತ್ತರ ಪ್ರದೇಶದಲ್ಲಿ ಮಾಯಾವತಿ, ಅಖಿಲೇಶ್ ಯಾದವ್ ಇಬ್ಬರ ಅವಧಿಯನ್ನೂ ಒಟ್ಟುಗೂಡಿಸಿದಕ್ಕಿಂತಲೂ ಹೆಚ್ಚಿನ ಅವಧಿಯನ್ನು ನಾನು ಗುಜರಾತ್ ಮುಖ್ಯಮಂತ್ರಿಯಾಗಿ ಕಳೆದಿದ್ದೇನೆ ಎಂದು ಮೋದಿ ವ್ಯಂಗ್ಯವಾಡಿದರು.  
 

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!