ಮೋದಿ VS ದೀದಿ.. ಕೊನೆ ಪ್ರಚಾರದಲ್ಲಿ ಮಾತಿನ ಸಿಡಿಗುಂಡುಗಳು

By Web DeskFirst Published May 16, 2019, 10:44 PM IST
Highlights

ದೀದಿ ನಾಡು ಕೋಲ್ಕತ್ತಾ ಸದ್ಯ ರಾಜಕೀಯ ಕುರುಕ್ಷೇತ್ರ.. ಬಹಿರಂಗ ಪ್ರಚಾರಕ್ಕೆ ಒಂದು ದಿನ ಮೊದಲೇ ತೆರೆಬಿದ್ದಿದೆ.  ಆದ್ರೆ ಇಂದು[ಗುರುವಾರ]  ಎರಡೆರಡು  ಕಡೆ ನಡೆಸಿದ ಮೋದಿ ಹಾಗೂ ದೀದಿ ಪರಸ್ಪರ ವಾಕ್ಸಮರ ನಡೆಸಿದರು. ಇತ್ತ ಪ್ರತಿಮೆ ಹೆಸರಲ್ಲಿ ಮೋದಿ ಬಂಗಾಳಿಗಳ ಮನವೊಲಿಕೆಗೆ ಯತ್ನಿಸಿದ್ರೆ... ದೀದಿ ಮೋದಿ ವಿರುದ್ಧ ರಾಮಮಂದಿರ ಅಸ್ತ್ರ ಪ್ರಯೋಗಿಸಿದರು.

ಕೋಲ್ಕತ್ತಾ[ಮೇ. 16]   ಟಿಎಂಸಿ-ಬಿಜೆಪಿ ಸಂಘರ್ಷ ರಾಜಕೀಯದ ಕುರುಕ್ಷೇತ್ರ ಬಂಗಾಳದಲ್ಲಿ ಚುನಾವಣಾ ಆಯೋಗದ ಕಟ್ಟಾಜ್ಞೆಯಂತೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಕೊನೆಯ ದಿನವೂ ಬಿಜೆಪಿ-ಟಿಎಂಸಿ ನಡುವೆ ನಾನಾ ನೀನಾ ಕಸರತ್ತು ನಡೆಯಿತು.. ಎರಡು ಪಕ್ಷಗಳ ನಡುವಿವ ವಾಕ್ಸಮರ ಮತ್ತೊಮ್ಮೆ ಬಂಗಾಳದತ್ತ ದೇಶದ ಜನ ಚಿತ್ತ ಹರಿಸುವಂತೆ ಮಾಡಿತ್ತು.

ನಿನ್ನೆ ವರೆಗೂ ಮಾರಾಮಾರಿ ರಾಜಕೀಯಕ್ಕೆ ಇಳಿದಿದ್ದ ಬಿಜೆಪಿ-ಟಿಎಂಸಿ ಇಂದು ಆರೋಪಗಳ ಮೂಲಕವೇ ತೊಡೆ ತಟ್ಟಿದರು. ಬಹಿರಂಗ  ಪ್ರಚಾರದ ಕೊನೆಯ ದಿನ ಪ್ರಧಾನಿ ಮೋದಿ ಮಥುರಾಪುರ್ ಹಾಗೂ ಡಂಡಂನಲ್ಲಿ   ರೋಡ್ ಶೋ ನಡೆಸಿ.,. ದೀದಿ ವಿರುದ್ಧ ಗುಡುಗಿದರು.

ಚುನಾವಣೆ ಸಮಗ್ರ ಸುದ್ದಿಗಾಗಿ

ಇತ್ತ ಕೋಲ್ಕತ್ತಾ ಹಾಗೂ ಡೈಮಂಡ್ ಹಾರ್ಬರ್ನಲ್ಲಿ ಸಿಎಂ ಮಮತಾ ಬ್ಯಾನರ್ಜಿ ಕೂಡ ಪ್ರಚಾರ ಸಭೆಗಳ ಮೂಲಕ ಮೋದಿಗೆ ತಿರುಗೇಟು ಕೊಟ್ಟರು. ಬಹಿರಂಗ ಪ್ರಚಾರದ ಕೊನೆಯ ದಿನವೂ ಮೋದಿ ವರ್ಸಸ್ ದೀದಿ ಸಮರ ಮುಂದುವರಿದಿತ್ತು.. ಕೋಲ್ಕತ್ತಾದಲ್ಲಿ ಮೊನ್ನೆ ಟಿಎಂಸಿ ಗೂಂಡಾಗಳು ವಿದ್ಯಾಸಾಗರ್ ಪ್ರತಿಮೆ ಧ್ವಂಸಗೊಳಿಸಿದ್ದಾರೆ.. ಅದೇ ಸ್ಥಳದಲ್ಲಿ ಬೃಹತ್ ಪ್ರತಿಮೆ ಸ್ಥಾಪಿಸುತ್ತೇವೆ ಎಂದು ಮೋದಿ ದೀದಿಗೆ ಟಾಂಗ್ ಕೊಟ್ಟರು..

ಐದು ವರ್ಷ ಸಂಪೂರ್ಣ ಬಹುಮತವಿದ್ದರೂ. ರಾಮಮಂದಿರ ನಿರ್ಮಿಸದ ಬಿಜೆಪಿ ವಿದ್ಯಾಸಾಗರ ಪ್ರತಿಮೆ ನಿರ್ಮಾಣ ಮಾಡೋಕೆ ಸಾಧ್ಯವಾ..? ಬಿಜೆಪಿ ಹಣದಿಂದ ಬಂಗಾಳ ಅಭಿವೃದ್ಧಿ ಬೇಕಾಗಿಲ್ಲ ಎಂದು ದೀದಿ ಮೋದಿಗೆ ಕೌಂಟರ್ ಕೊಟ್ಟರು.

 

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ. 

 

click me!