ಯುಪಿಎ-3: ವಿಪಕ್ಷ ಸಭೆಯ ಹೊಣೆ ಸೋನಿಯಾ ಹೆಗಲಿಗೆ!

By Web DeskFirst Published May 16, 2019, 6:02 PM IST
Highlights

ಯುಪಿಎ-3 ರಚನೆಗೆ ಕಸರತ್ತು ಶುರು| ಬಿಜೆಪಿ ವಿರೋಧಿ ಪಕ್ಷಗಳನ್ನು ಒಗ್ಗೂಡಿಸುತ್ತಿರುವ ಕಾಂಗ್ರೆಸ್| ಮೇ.23ರಂದು ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆ| ಬಿಜೆಪಿ ವಿರೋಧಿ ಪಕ್ಷಗಳೆಲ್ಲಾ ಭಾಗವಹಿಸುವ ನಿರೀಕ್ಷೆ| ಅಧಿಕಾರ ಹಿಡಿಯಲು ಯುಪಿಎ-3 ರಚನೆಯತ್ತ ಕಾಂಗ್ರೆಸ್ ಚಿತ್ತ|

ನವದೆಹಲಿ(ಮೇ.16): ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನೂ ಒಂದು ವಾರ ಬಾಕಿ ಇದೆ. ಆದರೆ ವಿಪಕ್ಷಗಳು ಈಗಲೇ ಅಧಿಕಾರ ಹಿಡಿಯುವ ಸಾಧ್ಯತೆಗಳ ಕುರಿತು ಚೆರ್ಚೆಗೆ ಸಿದ್ಧತೆ ನಡೆಸಿವೆ.
ಮೇ.23ರ ಬಳಿಕ ಫಲಿತಾಂಶ ಪ್ರಕಟಣೆ ಬಳಿಕ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ವಿಪಕ್ಷಗಳ ಮಹತ್ವದ ಸಭೆ ನಡೆಯಲಿದೆ.

ಬಿಜೆಪಿ ವಿರೋಧಿ ಎಲ್ಲಾ ರಾಜಕೀಯ ಪಕ್ಷಗಳ ಸಭೆ ಕರೆದಿರುವ ಸೋನಿಯಾ ಗಾಂಧಿ, ಫಲಿತಾಂಶದ ಬಳಿಕ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಲಾಗಿದೆ. 

ಸಭೆಯಲ್ಲಿ ಬಿಜೆಪಿ ವಿರೋಧಿ ಪಕ್ಷಗಳೆಲ್ಲ ಭಾಗವಹಿಸುವ ಸಾಧ್ಯತೆ ಇದ್ದು, ಕಾಂಗ್ರೆಸ್ ನಿಂದಲೂ ಅಂತರ ಕಾಯ್ದುಕೊಂಡಿರುವ ಎಸ್ ಪಿ, ಬಿಎಸ್ ಪಿ, ಟಿಆರ್ ಎಸ್ ಸೇರಿದಂತೆ ಇತರ ಪಕ್ಷಗಳೂ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

click me!