
ನವದೆಹಲಿ(ಏ.11): ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸಿ ಇತ್ತೀಚಿಗೆ ಕಲಾವಿದರ ಗುಂಪೊಂದು ಪತ್ರ ಚಳವಳಿ ನಡೆಸಿದ ಬೆನ್ನಲ್ಲೇ, ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಆಗ್ರಹಿಸಿ ಸುಮಾರು 900 ಕಲಾವಿದರು ಪತ್ರ ಬರೆದಿದ್ದಾರೆ.
ಪಂಡಿತ್ ಜರ್ಸಾಜ್, ವಿವೇಕ್ ಒಬೆರಾಯ್, ಶಂಕರ್ ಮಹಾದೇವನ್, ರೀತಾ ಗಂಗೂಲಿ ಸೇರಿದಂತೆ ಪ್ರಮುಖ ಕಲಾವಿದರು ಮೋದಿ ಬೆಂಬಲಿಸಿ ಪತ್ರಕ್ಕೆ ಸಹಿ ಹಾಕಿದ್ದಾರೆ. ದೇಶಕ್ಕೆ ಮಜ್ಬೂತ್ ಸರ್ಕಾರ್(ಸದೃಢ ಸರ್ಕಾರ)ದ ಅವಶ್ಯಕತೆಯಿದ್ದು, ಇದಕ್ಕಾಗಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಿ ಎಂದು ಈ ಕಲಾವಿದರು ಮನವಿ ಮಾಡಿದ್ದಾರೆ.
"
ಅದರಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ಸೂಚಿಸಿರುವ ಕರ್ನಾಟಕದ ಪ್ರಸಿದ್ಧ ಕತಕ್ ನೃತ್ಯಗಾರರಾದ ನಿರೂಪಮಾ ಮತ್ತು ರಾಜೇಂದ್ರ, ಅಭ್ಯರ್ಥಿ ಲೆಕ್ಕಿಸದೇ ಮೋದಿ ಅವರಿಗಾಗಿ ಬಿಜೆಪಿಗೆ ಮತ ಹಾಕಿ ಎಂದು ಮನವಿ ಮಾಡಿದ್ದಾರೆ.
ಇನ್ನು ಮೋದಿ ಬೆಂಬಲಿಸಿ ನಡೆದ ಪತ್ರ ಚಳವಳಿಯಲ್ಲಿ ಸಹಿ ಹಾಕಿದ ಇತರ ಕಲಾವಿದರೆಂದರೆ, ತ್ರಿಲೋಕಿನಾಥ್ ಮಿಶ್ರಾ, ಕೋಯಿನಾ ಮಿತ್ರಾ, ಅನುರಾಧಾ ಪೋಡ್ವಾಲ್, ಹನ್ಸ್ ರಾಜ್ ಹನ್ಸ್, ಮಲಿನಿ ಅವಸ್ಥಿ ಸೇರಿದಂತೆ ಹಲವು ಪ್ರಮುಖ ಕಲಾವಿದರು ಮೋದಿ ಬೆಂಬಲಿಸಿ ಪತ್ರಕ್ಕೆ ಸಹಿ ಹಾಕಿದ್ದಾರೆ.