ಕಣಿವೆ ರಾಜ್ಯದಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟು!

By Web DeskFirst Published Mar 30, 2019, 5:17 PM IST
Highlights

ಬಿಜೆಪಿ ಪ್ರಬಲವಾಗುತ್ತಿರುವುದನ್ನು ಅರಿತ ವಿಪಕ್ಷಗಳು | ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್, ಪಿಡಿಪಿ ಮಧ್ಯೆ ಒಡಂಬಡಿಕೆ ಇದನ್ನು ಮೆಟ್ಟಿ ನಿಲ್ಲಲು ಬಿಜೆಪಿ ಪ್ರತಿತಂತ್ರ | ಉಗ್ರವಾದ, ಪ್ರಧಾನಿ ಮೋದಿ ನೀತಿಗಳೇ ಭಾಜಪ ಪ್ರಮುಖ ಅಜೆಂಡಾ

ಶ್ರೀನಗರ[ಮಾ.30]: ಭಯೋತ್ಪಾದಕ ಕೃತ್ಯಗಳಿಂದ ನಲುಗುತ್ತಿರುವ ಭಾರತದ ಶಿಖರ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯ ಭದ್ರತೆಯಲ್ಲಿ ಲೋಕಸಭೆ ಚುನಾವಣೆಗಳು ಈ ಸಲ ನಡೆಯಲಿವೆ. ಅಶಾಂತ ವಾತಾವರಣದ ನಡುವೆಯೇ ರಾಜಕೀಯ ಪಕ್ಷಗಳು ಚುನಾವಣೆಗೆ ಸಿದ್ಧವಾಗುತ್ತಿವೆ

ಈ ಚುನಾವಣೆಯಲ್ಲಿ ಮುಖ್ಯವಾಹಿನಿಯ ಪಕ್ಷಗಳು ಪ್ರತ್ಯೇಕತಾವಾದಿ ಪಕ್ಷಗಳಿಗೆ ಸಡ್ಡು ಹೊಡೆದಿವೆ. ಆದರೆ ನಿಜವಾದ ಸ್ಪರ್ಧೆಯು ಬಿಜೆಪಿ ಹಾಗೂ ಪ್ರತಿಪಕ್ಷಗಳಾದ ಕಾಂಗ್ರೆಸ್, ಪಿಡಿಪಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್‌ಗಳ ನಡುವೆ ಇದೆ. ಬಿಜೆಪಿ ರಾಜ್ಯ ದಲ್ಲಿ ಬಲಗೊಳ್ಳುತ್ತಿರುವುದನ್ನು ಕಂಡು ಪಿಡಿಪಿ, ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫರೆನ್ ್ಸಗಳು ಕೆಲವೆಡೆ ಮೈತ್ರಿ ಮಾಡಿಕೊಳ್ಳುವ ಅಥವಾ ಒಳಗೊಳಗೇ ಸಹಕಾರ ನೀಡಿ ಬಿಜೆಪಿಯನ್ನು ಮಣಿಸುವ ತಂತ್ರಕ್ಕೆ ಶರಣಾಗಿವೆ

ಬಿಜೆಪಿಯನ್ನು ಮಣಿಸುವ ತಂತ್ರಕ್ಕೆ ಶರಣಾಗಿವೆ. ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಹೀಗೆ ಮೂರು ರೀತಿಯ ವಿಭಿನ್ನ ವಾತಾವರಣ ಹೊಂದಿರುವ ಪ್ರದೇಶವುಳ್ಳ ಜಮ್ಮು-ಕಾಶ್ಮೀರದಲ್ಲಿ, ಪಕ್ಷಗಳ ಪ್ರಾಬಲ್ಯವೂ ವಿಭಿನ್ನವಾಗಿದೆ. ಜಮ್ಮು ಭಾಗದಲ್ಲಿ ಹಾಗೂ ಲಡಾಖ್‌ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪ್ರಭಾವವಿದ್ದರೆ, ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್‌ಗಳು ಕಾಶ್ಮೀರ ಭಾಗದಲ್ಲಿ ಪ್ರಭಾವ ಹೊಂದಿ ವೆ. ರಾಜ್ಯದಲ್ಲಿ ಒಟ್ಟು ೬ ಲೋಕಸಭಾ ಕ್ಷೇತ್ರಗಳಿದ್ದು, ಉಧಂ ಪುರ ಹಾಗೂ ಜಮ್ಮು ಕ್ಷೇತ್ರಗಳು ಜಮ್ಮು ಭಾಗದಲ್ಲಿ ಬರುತ್ತವೆ. ಅನಂತನಾಗ್, ಬಾರಾಮುಲ್ಲಾ ಹಾಗೂ ಶ್ರೀನಗರಗಳು ಕಾಶ್ಮೀರ ಭಾಗದಲ್ಲಿ ಬರುತ್ತಿದ್ದರೆ, ಲಡಾಖ್ ಕ್ಷೇತ್ರವು ಚೀನಾ ಗಡಿಗೆ ಹೊಂದಿಕೊಂಡ ಲಡಾಖ್ ಭಾಗದಲ್ಲಿ ಬರುತ್ತದೆ.

ಬಿಜೆಪಿ ವರ್ಸಸ್ ಪ್ರತಿಪಕ್ಷ: ಬಿಜೆಪಿ ಪ್ರಬಲಗೊಂಡು ಕೆಲವೆಡೆ ಮುಸ್ಲಿಂ ಮತಗಳನ್ನೂ ಸೆಳೆಯುವ ತಾಕತ್ತನ್ನು ಇತ್ತೀಚಿನ ಕೆಲವು ಚುನಾವಣೆಗಳಲ್ಲಿ ಪ್ರದರ್ಶಿಸಿದೆ. ಇದು ವಿಪಕ್ಷಗಳನ್ನು ಆತಂಕಕ್ಕೀಡು ಮಾಡಿದೆ. ಅದಕ್ಕೆಂದೇ ಕಳೆದ ಸಲ ಧೂಳೀಪಟಗೊಂಡಿದ್ದ ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್‌ಗಳು ಜಮ್ಮು ಭಾಗದ ಉಧಂಪುರ-ದೋಡಾ ಹಾಗೂ ಜಮ್ಮು-ಪೂಂಛ್ ಕ್ಷೇತ್ರಗಳಲ್ಲಿ ಮೈತ್ರಿ ಮಾಡಿಕೊಂಡಿವೆ. ಇದು ಬಿಜೆಪಿ ತಲೆಬಿಸಿಗೆ ಕಾರಣವಾಗಿದೆ. ಇದೇ ವೇಳೆ, ಮೆಹಬೂಬಾ ಮುಫ್ತಿ ಅವರ ಪಿಡಿಪಿ, ಜಮ್ಮು ಭಾಗದ ೨ ಕ್ಷೇತ್ರಗಳಲ್ಲೂ ಅಭ್ಯರ್ಥಿ ಹಾಕುವುದಿಲ್ಲ ಎಂದು ಹೇಳಿದೆ. ಇಲ್ಲಿ ಕಾಂಗ್ರೆಸ್‌ನಿಂದ ರಮಣ್ ಭಲ್ಲಾ (ಜಮ್ಮು) ಹಾಗೂ ಡೋಗ್ರಾ ಮಹಾರಾಜರ ಕುಟುಂಬದ ವಿಕ್ರಮಾದಿತ್ಯ ಸಿಂಗ್ (ಉಧಂಪುರ) ಸ್ಪರ್ಧಿಸುವ ಸಾಧ್ಯತೆ ಇದೆ

ಚಿವರಾಗಿರುವ ಡಾ| ಜಿತೇಂದ್ರ ಸಿಂಗ್ ಅವರು ಉಧಂಪುರದಲ್ಲಿ ಕಾಂಗ್ರೆಸ್‌ನ ಹಿರಿಯ ನೇತಾರ ಗುಲಾಂ ನಬಿ ಆಜಾದ್ ಅವರನ್ನು ೬೦ ಸಾವಿರಕ್ಕೂ ಹೆಚ್ಚು ಮತದಿಂದ ಸೋಲಿಸಿದ್ದರು. ಇನ್ನು ಬಿಜೆಪಿಯ ಜುಗಲ್ ಕಿಶೋರ್ ಶರ್ಮಾ ಅವರು ೨.೨೬ ಲಕ್ಷ ದಾಖಲೆ ಮತದ ಅಂತರದಿಂದ ಜಮ್ಮು ಕ್ಷೇತ್ರ ಗೆದ್ದುಕೊಂಡಿದ್ದರು. ಈ ಸಲ ಇವರಿಬ್ಬರೂ ಕಣಕ್ಕಿಳಿಯವುದು ನಿಶ್ಚಿತ. ಆದರೆ ಬಿಜೆಪಿಗೆ ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಕಾಂಗ್ರೆಸ್ ಮೈತ್ರಿಯ ಜತೆಗೆ ಇನ್ನೊಂದು ಸವಾಲು ಎದುರಾಗಿದೆ. ಬಿಜೆಪಿ ನಾಯಕರಾಗಿದ್ದ ಲಾಲ್‌ಸಿಂಗ್ ಅವರು ಡೋಗ್ರಾ ಸ್ವಾಭಿಮಾನ ಸಂಘಟನ್ ಎಂಬ ಹೊಸ ಪಕ್ಷ ಸ್ಥಾಪಿಸಿ ಎರಡೂ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿ ಹಾಕುವುದಾಗಿ ಹೇಳಿದ್ದಾರೆ. ಇದು ಬಿಜೆಪಿಗೆ ಆತಂಕದ ವಿಷಯವಾಗಿದೆ. ಅವರು ಕಠುವಾ ಅತ್ಯಾಚಾರ ಪ್ರಕರಣದ ಬಳಿಕ ಬಿಜೆಪಿ ಬಿಟ್ಟಿದ್ದರು.

ಇದಿಷ್ಟು ಜಮ್ಮು ಭಾಗದ ಕತೆಯಾದರೆ ಇನ್ನು ಕಾಶ್ಮೀರ ಭಾಗದ ಕತೆ. ಇಲ್ಲಿನ ಅನಂತನಾಗ್ ಕ್ಷೇತ್ರ ಅತಿ ಸೂಕ್ಷ್ಮವಾಗಿದ್ದು, ಒಂದೇ ಕ್ಷೇತ್ರಕ್ಕೆ ಹಲವು ಹಂತದ ಮತದಾನ ನಡೆಸುವುದಾಗಿ ಚುನಾವಣಾ ಆಯೋಗ ಘೋಷಿಸಿದೆ. ಇದು ಇಲ್ಲಿನ ಭಯೋತ್ಪಾದಕ ಸಮಸ್ಯೆಯ ತೀವ್ರತೆಯನ್ನು ಸೂಚಿಸುತ್ತದೆ. ಅನಂತನಾಗ್ ಕ್ಷೇತ್ರದ ವ್ಯಾಪ್ತಿಯಲ್ಲೇ ಉಗ್ರ ಬುರ್ಹಾನ್ ವಾನಿ ಹತ್ಯೆ ಸಂಭವಿಸಿ, ಇಡೀ ಕಾಶ್ಮೀರ ಅಗ್ನಿಕುಂಡವಾಗಿದ್ದು ಇಲ್ಲಿ ಗಮನಾರ್ಹ

ಅನಂತನಾಗ್‌ನಲ್ಲಿ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಸ್ಪರ್ಧಿಸುತ್ತಿದ್ದು, ಅವರ ವಿರುದ್ಧ ನ್ಯಾಷನಲ್ ಕಾನ್ಫರೆನ್ಸ್‌ನಿಂದ ಹಸ್ನೇನ್ ಮಸೂದಿ ಅಭ್ಯರ್ಥಿ. ಬಿಜೆಪಿ ಕೂಡ ಮುಸ್ಲಿಂ ಮುಖ ಸೋಫಿ ಯೂಸುಫ್ ಎಂಬ ವಿಧಾನ ಪರಿಷತ್ ಸದಸ್ಯನನ್ನು ಅಭ್ಯರ್ಥಿ ಎಂದು ಪ್ರಕಟಿಸಿದೆ. ಮುಫ್ತಿ ಅವರಿಗೆ ಈ ಕ್ಷೇತ್ರ ಈ ಸಲ ಕಠಿಣ ಆಗಬಹುದು ಎನ್ನಲಾಗಿದೆ. ಇದೇ ವೇಳೆ ಮತದಾನ ಬಹಿಷ್ಕಾರಕ್ಕೆ ಪ್ರತ್ಯೇಕತಾವಾದಿಗಳು ಕೊಡುವ ಕರೆ, ಮತದಾನದ ಮೇಲೆ ಪರಿಣಾಮ ಬೀರಬಹುದು.

ಶ್ರೀನಗರದಲ್ಲಿ ಹಾಲಿ ಸಂಸದ, ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಖ್ ಅಬ್ದುಲ್ಲಾ ಮತ್ತೆ ಧುಮುಕಲಿದ್ದಾರೆ. ಪಿಡಿಪಿಯಿಂದ ಆಗಾ ಮೊಹ್ಸಿನ್ ಸ್ಪರ್ಧಿಸುವರು. ಬಿಜೆಪಿ ಕೂಡ ಮುಸ್ಲಿಂ ಅಭ್ಯರ್ಥಿ ಹಾಕಬಹುದು. ಬಾರಾಮುಲ್ಲಾದಲ್ಲಿ ಪಿಡಿಪಿ, ಕಾಂಗ್ರೆಸ್-ಎನ್‌ಸಿ ಹಾಗೂ ಸಜ್ಜಾದ್ ಲೋನ್ ಸ್ಥಾಪಿತ ಪೀಪಲ್ಸ್ ಕಾನ್ಫರೆನ್ಸ್ ಮಧ್ಯೆ ತ್ರಿಕೋನ ಸ್ಪರ್ಧೆ ನಿಶ್ಚಿತ. ಉಳಿದಂತೆ ಲಡಾಖ್ ಹಾಲಿ ಬಿಜೆಪಿ ವಶದಲ್ಲಿದೆ. ಇನ್ನೂ ಯಾವ ಪಕ್ಷಗಳೂ ಇಲ್ಲಿ ಅಭ್ಯರ್ಥಿ ಪ್ರಕಟಿಸಿಲ್ಲ

ಚುನಾವಣಾ ವಿಷಯಗಳು

ಕಾಶ್ಮೀರ ಕುರಿತ ಮೋದಿ ಸರ್ಕಾರದ ನೀತಿಗಳು, ಗಡಿಯಲ್ಲಿ ಪಾಕಿಸ್ತಾನದ ಕಿರಿಕಿರಿ, ಉಗ್ರ ದಾಳಿಗಳು, ಕಾಶ್ಮೀರಿ ಯುವಕರ ಮೇಲೆ ಸೇನಾ ಪಡೆಗಳು ದೌರ್ಜನ್ಯ ನಡೆಸುತ್ತಿವೆ ಎಂಬ ಆರೋಪಗಳು, ಕಾಶ್ಮೀರಿ ಕಾಯಂ ನಿವಾಸಿಗಳಿಗೆ ವಿಶೇಷ ಸವಲತ್ತು ಕಲ್ಪಿಸುವ ಪರಿಚ್ಛೇದ ೩೫ಎ ಮುಂದುವರಿಯಬೇಕೇ ಬೇಡವೇ ಎಂಬ ವಿವಾದ ಇತ್ಯಾದಿ.

ಪ್ರಮುಖ ಕ್ಷೇತ್ರಗಳು

*ಬಾರಾಮುಲ್ಲಾ *ಶ್ರೀನಗರ *ಅನಂತನಾಗ್ *ಲಡಾಖ್ *ಉಧಾಂಪುರ *ಜಮ್ಮು

ಸಂಭಾವ್ಯ ಅಭ್ಯರ್ಥಿಗಳು

*ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ (ಪಿಡಿಪಿ) *ಎನ್‌ಸಿ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ (ನ್ಯಾಷನಲ್ ಕಾನ್ಫರೆನ್ಸ್) *ಕೇಂದ್ರ ಸಚಿವ ಜಿತೇಂದ್ರ ಸಿಂಗ್ (ಬಿಜೆಪಿ) *ಹಿರಿಯ ಮುಖಂಡ ಮುಜಫ್ಫರ್ ಹುಸೇನ್ ಬೇಗ್ (ಪಿಡಿಪಿ)

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

click me!