ಮತದಾನಕ್ಕೆ ವಿದೇಶದಿಂದ ಬಂದರು: ಮೋದಿಗಾಗಿ ANYTHING ಅಂದರು!

By Web Desk  |  First Published Apr 13, 2019, 5:46 PM IST

ಮತವಾಗಿ ಪರಿವರ್ತನೆಯಾಗ್ತಿದೆ ಮೋದಿ ಫಾರೆನ್ ಟ್ರೆಂಡ್| ಮೋದಿಗಾಗಿಯೇ ಲಕ್ಷಾಂತರ ಖರ್ಚು ಮಾಡಿ ದೇಶಕ್ಕೆ ಬರ್ತಿರೋ ಅಭಿಮಾನಿಗಳು| ಮಸ್ಕತ್ ದೇಶದಿಂದ ಓಟ್ ಮಾಡೋಕೆಂದೆ ಏಕಕಾಲಕ್ಕೆ ಬಂದ 44 ಜನರ ತಂಡ| ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿದೆ ಮೋದಿ ಮೋಡಿ| ಮಸ್ಕತ್ ನಲ್ಲಿ ಬಿಜೆಪಿ ಭಾವುಟ ಹಿಡಿದು ದೇಶಕ್ಕೆ ಮತ್ತು ಮೋದಿಗೆ ಜೈಕಾರ|


ಮಲ್ಲಿಕಾರ್ಜುನ ಹೊಸಮನಿ

ಬಾಗಲಕೋಟೆ(ಏ.13): ದೇಶದಲ್ಲಿ ಮತದಾನ ಮಾಡಿಸೋಕೆ ಜನ ಜಾಗೃತಿಗಾಗಿ ಸರ್ಕಾರ ವಿವಿಧ ಕಾರ್ಯಕ್ರಮ ಹಮ್ಮಿಕೊಂಡು ಲಕ್ಷಾಂತರ ರೂಪಾಯಿ ಖರ್ಚು ಮಾಡ್ತಿದೆ. ಇತ್ತ ಮೋದಿಗಾಗಿ ವಿದೇಶದಲ್ಲಿರುವ ಭಾರತೀಯರೇ ಮೋದಿಗಾಗಿ ಓಟ್ ಮಾಡಲೆಂದು ಸ್ವತ: ತಾವೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ದೇಶಕ್ಕೆ ವಾಪಸ್ಸಾಗ್ತಿದ್ದಾರೆ.

Tap to resize

Latest Videos

ದೇಶದಲ್ಲಿ ಲೋಕಸಭಾ ಚುನಾವಣೆ ಆರಂಭವಾಗಿದ್ದೇ ತಡ ಇತ್ತ ಬಿಜೆಪಿ ಕಾಂಗ್ರೆಸ್ ಸೇರಿದಂತೆ ಅನೇಕ ರಾಜಕೀಯ ಪಕ್ಷಗಳ ಜಿದ್ದಾಜಿದ್ದಿನ ಹೋರಾಟ ಶುರುವಾಗಿದೆ. ಈ ಮಧ್ಯೆ ದೇಶದ ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನ ಮತ್ತುಷ್ಟು ಪ್ರಚುರಪಡಿಸಿರೋ ಬೆನ್ನಲ್ಲೆ ಇದೀಗ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಚರಿಸಿ ಭಾಷಣ ಮಾಡೋಕೆ ಶುರು ಮಾಡಿದ್ದಾರೆ.

ಈ ಮಧ್ಯೆ ಮೋದಿ ಮೋಡಿಗೆ ಮಾರು ಹೋಗಿರೋ ವಿದೇಶದಲ್ಲಿರೋ ಭಾರತೀಯರು ಇದೀಗ ಮೋದಿಗಾಗಿ ಓಟ್ ಮಾಡಲೆಂದೇ ತಮ್ಮದೇ ಸ್ವಂತ ಖರ್ಚಿನಲ್ಲಿ ಇಂದು ಸ್ವದೇಶಕ್ಕೆ ಆಗಮಿಸುತ್ತಿದ್ದಾರೆ. ಇನ್ನು ಮಸ್ಕತ್ ನಲ್ಲಿ ಭಾರತಕ್ಕೆ ಬರೋ ವೇಳೆ ಕೈಯಲ್ಲಿ ಬಿಜೆಪಿ ಭಾವುಟ ಹಿಡಿದು ದೇಶಕ್ಕೆ ಮತ್ತು ಮೋದಿಗೆ ಜೈಕಾರ ಹಾಕುವ ಮೂಲಕ ಅಭಿಮಾನ ಮೆರೆದಿದ್ದಾರೆ.

"

ಮಸ್ಕತ್, ವಿಯಟ್ನಾಂ ಸೇರಿದಂತೆ ವಿವಿದೆಡೆ ಇರೋ ಭಾರತೀಯರು ಇದೀಗ ಭಾರತಕ್ಕೆ ವಾಪಸ್ಸಾಗಿದ್ದಾರೆ. ಬಾಗಲಕೋಟೆ, ರಾಯಚೂರು, ಕೊಪ್ಪಳ ಜಿಲ್ಲೆಯ 44 ಜನರ ತಂಡವೊಂದು ಮಸ್ಕತ್ ದೇಶದಿಂದ ಏಕಕಾಲಕ್ಕೆ ಭಾರತಕ್ಕೆ ವಾಪಸ್ಸಾಗಿದ್ದು ತಾವು ಮೋದಿ ಮೇಲಿನ ಅಭಿಮಾನಕ್ಕಾಗಿ ನಮ್ಮ ಸ್ವಂತ ಹಣದಿಂದಲೇ ಖರ್ಚು ಮಾಡಿಕೊಂಡು ಇದೀಗ ಮೋದಿಗೆ ಓಟ್ ಮಾಡುವ ಏಕೈಕ ಉದ್ದೇಶದಿಂದ ತಾವು ಆಗಮಿಸಿರೋದಾಗಿ ಹೇಳಿದ್ದಾರೆ.

 ಇನ್ನೊಂದೆಡೆ ವಿಯಟ್ನಾಂನಲ್ಲಿಯೂ ಸಹ ಕಳೆದ ಎರಡು ತಿಂಗಳಿಂದ "ನಮೋ ಅಗೇನ್" ಎಂಬ ಟ್ಯಾಗಲೈನ್ ಮೂಲಕ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಭಾರತೀಯರು ವಿದೇಶದಲ್ಲಿಯೂ ಮೋದಿ ಗುಣಗಾನ ಆರಂಭಿಸಿದ್ದು, ಹೀಗಾಗಿ ಇತ್ತೀಚಿಗೆ ನಡೆದ ಹೋಳಿ ಹಬ್ಬದಲ್ಲೂ ಸಹ ವಿಯಟ್ನಾಂನಲ್ಲಿ ಮೋದಿ ಮೋದಿ ಎಂಬ ಘೋಷಣೆಗಳು ಕೇಳಿ ಬಂದಿವೆ.

"

ಈ ಮಧ್ಯೆ ಮಸ್ಕತ್, ವಿಯಟ್ನಾಂ ಸೇರಿದಂತೆ ವಿವಿಧ ದೇಶದಲ್ಲಿ ಕೆಲ್ಸಕ್ಕೆಂದು ತೆರಳಿರೋ ಭಾರತೀಯರು ಇದೀಗ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತಕ್ಕೆಂದು ಮೋದಿ ಮೇಲಿನ ಅಭಿಮಾನಕ್ಕಾಗಿ ಸ್ವತ: ತಾವೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ಬಂದಿದ್ದಾರೆ. ಹೀಗೆ ವಿದೇಶದಲ್ಲಿನ ಭಾರತೀಯರ ಅಭಿಮಾನದಿಂದ ಇದೀಗ ಇಲ್ಲಿನ ಬಿಜೆಪಿ ಕಾರ್ಯಕರ್ತರಿಗೆ ಮತ್ತಷ್ಟು ಜೋಷ್ ತರುವಂತಾಗಿದ್ದು, ಈ ಬಾರಿ ಮೋದಿ ಗೆಲುವು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ದೇಶದಲ್ಲಿ ಬಿಜೆಪಿ ಪಕ್ಷ ಮತ್ತೊಮ್ಮೆ ಮೋದಿ ಎಂಬ ಆಶಯದೊಂದಿಗೆ ಲೋಕಸಭಾ ಚುನಾವಣೆ ಎದುರಿಸಿದ್ದು ಇತ್ತ ವಿದೇಶದಲ್ಲಿರೋ ಭಾರತೀಯರ ಮೋದಿ ಅಭಿಮಾನ ಕಂಡು ದೇಶದಲ್ಲಿರೋ ಮೋದಿ ಅಭಿಮಾನಿಗಳ ಆಶಯ ಇಮ್ಮಡಿಸಿದಂತಾಗಿದೆ. ಇಷ್ಟಕ್ಕೂ ಇದೆಲ್ಲಾ ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿ ಗದ್ದುಗೆಗೆ ಏರಿಸುತ್ತಾ ಅಂತ ಕಾದು ನೋಡಬೇಕಿದೆ.

ದೇಶದಲ್ಲಿ ಏ.11ರಿಂದ ಮೇ.19 ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23 ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!