ಫಲಿತಾಂಶದ ನಂತರ ಇವಿಎಂ ರಹಸ್ಯ ಹೇಳಿದ ಓವೖಸಿ

By Web DeskFirst Published May 24, 2019, 5:45 PM IST
Highlights

ಲೋಕ ಸಮರ ಫಲಿತಾಂಶ ಪ್ರಕಟವಾಗುವುದಕ್ಕ ಮುನ್ನ ಇವಿಎಂ ಯಂತ್ರಗಳ ಮೇಲೆ ವಿಪಕ್ಷಗಳು ಅನುಮಾನ ವ್ಯಕ್ತಪಡಿಸಿದ್ದವು. ಇವಿಎಂ ಯಂತ್ರಗಳ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದವು. ಆದರೆ ಫಲಿತಾಂಶದ ನಂತರ ಹೈದರಾಬಾದ್ ನಿಂದ ಗೆದ್ದಿರುವ ಅಸಾದುದ್ದೀನ್ ಓವೈಸಿ ಮಾತನಾಡಿದ್ದಾರೆ.

ಹೈದರಾಬಾದ್[ಮೇ. 24] ಇವಿಎಂ ಮತಯಂತ್ರಗಳನ್ನು ಹ್ಯಾಕ್ ಮಾಡಲಾಗಿದೆ, ಟ್ಯಾಂಪರಿಂಗ್ ಮಾಡಲಾಗಿದೆ, ಬದಲಾಯಿಸಲಾಗಿದೆ  ಎಂದು ಮುಂತಾಗಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಆರೋಪ ಮಾಡಿದ್ದವು.

ಆದರೆ ಇವಿಎಂ ಗಳನ್ನು ರಿಗ್ಗಿಂಗ್ ಮಾಡಲಾಗಿಲ್ಲ. ಬದಲಾಗಿ ಹಿಂದು ಮೈಂಡ್ ಗಳನ್ನು ರಿಗ್ಗಿಂಗ್ ಮಾಡಿರುವುದೇ ಬಿಜೆಪಿ ಗೆಲುವಿಗೆ ಕಾರಣ ಎಂದು ಆಲ್ ಇಂಡಿಯಾ ಮಜಿಲೀಸ್ - ಇತ್ತೆಹುದುಲ್ ಮುಸ್ಲಿಮಿನ್ [AIMIM] ನೇತಾರ ಅಸಾದುದ್ದಿನ್ ಓವೈಸಿ ಹೇಳಿದ್ದಾರೆ.

'ಇವಿಎಂ ಬಗ್ಗೆ ಮೊದಲು ಕ್ಯಾತೆ ತೆಗೆದಿದ್ದು ಅಡ್ವಾಣಿ'

ಇವಿಎಂ ಮತ್ತು ವಿವಿ ಪ್ಯಾಟ್ ಗಳು ಶೇ. 100 ಪಕ್ಕಾ ಇದೆ. ಚುನಾವಣಾ ಆಯೋಗ ಸ್ವತಂತ್ರವಾಗಿಯೇ ಕೆಲಸ ಮಾಡಿದೆ ಎಂದು ಓವೖಸಿ ಬಣ್ಣಿಸಿದ್ದಾರೆ.

click me!