ಲೋಕಸಭಾ ಚುನಾವಣೆಗೆ ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಎಚ್.ಡಿ ರೇವಣ್ಣ ನಾಮಪತ್ರ ತಿರಸ್ಕಾರವಾಗುತ್ತಾ,..? ಈ ಬಗ್ಗೆ ರೇವಣ್ಣ ಹೇಳಿದ್ದೇನು?
ಹಾಸನ : ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ ವೇಳೆ ಸುಳ್ಳು ಆಸ್ತಿ ವಿವರ ಸಲ್ಲಿಸಿದ್ದು, ಆ ಕುರಿತು ತನಿಖೆಗೆ ರಾಜ್ಯ ಚುನಾವಣಾ ಆಯೋಗ ತನಿಖೆಗೆ ಸೂಚನೆ ನೀಡಿರುವ ಕುರಿತು ನಾನು ತಲೆ ಕೆಡಿಸಿಕೊಂಡಿಲ್ಲ ಎಂದು ಸಚಿವ ಎಚ್.ಡಿ.ರೇವಣ್ಣ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಪ್ರಜ್ವಲ್ ಸುಳ್ಳು ಅಫಿಡವಿಟ್ ಸಲ್ಲಿಕೆ ಆರೋಪ ವಿಚಾರಕ್ಕೆ ಪ್ರತಿಕ್ರಿಸಿದ ರೇವಣ್ಣ, ಒಮ್ಮೆ ಚುನಾವಣಾ ಅಧಿಕಾರಿ ನಾಮಪತ್ರ ಅಂಗೀಕರಿಸಿದ ಮೇಲೆ ತಿರಸ್ಕಾರ ಮಾಡೋ ಹಾಗಿಲ್ಲ.
ಹೀಗೆಂದು ಚುನಾವಣಾ ಆಯೋಗದ ನಿರ್ದೇಶನವೇ ಇದೆ. ಆಯೋಗ, ಚುನಾವಣಾ ಅಧಿಕಾರಿಗಳು ಯಾವ ಆಧಾರದ ಮೇಲೆ ಹೀಗೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಕೆಲವರು ಬೇಕೆಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.