ಈ ಕ್ಷೇತ್ರದಲ್ಲಿ ಸಾಮಾನ್ಯ ಚುನಾವಣೆಗಿಂತ 15 ಕೋಟಿ ಅಧಿಕ ಖರ್ಚು!

By Web DeskFirst Published Apr 8, 2019, 10:57 AM IST
Highlights

ನಿಜಾಮಾಬಾದ್‌ ಚುನಾವಣೆ ಖರ್ಚು 35 ಕೋಟಿ| ಸಾಮಾನ್ಯ ಚುನಾವಣೆಗಿಂತ 15 ಕೋಟಿ ಅಧಿಕ| 185 ಅಭ್ಯರ್ಥಿಗಳು ಸ್ಪರ್ಧಿಸಿರುವುದೇ ಕಾರಣ

ಹೈದರಾಬಾದ್‌[ಏ.08]: 185 ಅಭ್ಯರ್ಥಿಗಳು ಸ್ಪರ್ಧಿಸಿರುವ ತೆಲಂಗಾಣದ ನಿಜಾಮಾಬಾದ್‌ ಲೋಕಸಭಾ ಕ್ಷೇತ್ರದ ಚುನಾವಣಾ ಖರ್ಚು 35 ಕೋಟಿ ರುಪಾಯಿ ಆಗಲಿದ್ದು, ಇದು ಸಾಮಾನ್ಯ ಚುನಾವಣಾ ವೆಚ್ಚಕ್ಕಿಂತ 15 ಕೋಟಿ ರುಪಾಯಿ ಅಧಿಕ.

ತೆಲಂಗಾಣ ಮುಖ್ಯ ಚುನಾವಣಾಧಿಕಾರಿ ರಜತ್‌ ಕುಮಾರ್‌ ಈ ಮಾಹಿತಿ ನೀಡಿದರು. ಏಪ್ರಿಲ್‌ 11ರಂದು ನಡೆಯಲಿರುವ ಮತದಾನದಲ್ಲಿ ಇಲ್ಲಿ 170 ರೈತರು ಸೇರಿದಂತೆ 185 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.

ಸಾಮಾನ್ಯವಾಗಿ ಒಂದು ಲೋಕಸಭೆ ಕ್ಷೇತ್ರದಲ್ಲಿ 7 ವಿಧಾನಸಭಾ ಕ್ಷೇತ್ರಗಳು ಇರುತ್ತವೆ. ಪ್ರತಿ ಕ್ಷೇತ್ರಕ್ಕೆ 3 ಕೋಟಿ ರು. ಖರ್ಚಾಗುತ್ತದೆ. ಆದರೆ ಇಲ್ಲಿ ಅಧಿಕ ಅಭ್ಯರ್ಥಿಗಳು ಇರುವ ಕಾರಣ ಇನ್ನೂ ಸುಮಾರು 35 ಕೋಟಿ ರು. ಅಧಿಕ ಖರ್ಚಾಗುತ್ತದೆ ಎಂದು ರಜತ್‌ ತಿಳಿಸಿದರು.

ಸಾಮಾನ್ಯ ಕ್ಷೇತ್ರಗಳಲ್ಲಿ ಗರಿಷ್ಠ 64 ಅಭ್ಯರ್ಥಿಗಳ ಹೆಸರು ಇರಬಹುದಾದ ಎಂ2 ನಮೂನೆಯ ಮತಯಂತ್ರ ಬಳಸಲಾಗುತ್ತದೆ. ಆದರೆ ಇಲ್ಲಿ ಗರಿಷ್ಠ 380 ಅಭ್ಯರ್ಥಿಗಳ ಹೆಸರು ಇರಬಹುದಾದ ಎಂ3 ನಮೂನೆಯ ಮತಯಂತ್ರ ಬಳಸಲಾಗುತ್ತಿದ್ದು, ಖರ್ಚು ಅಧಿಕವಾಗುತ್ತದೆ. ಇಷ್ಟೊಂದು ಅಭ್ಯರ್ಥಿಗಳಿಗೆ ಇವಿಎಂ ಬಳಸುತ್ತಿರುವುದು ವಿಶ್ವದಲ್ಲೇ ಮೊದಲು ಎಂದು ಅವರು ಹೇಳಿದರು. ಎಲ್ಲ ಖರ್ಚನ್ನೂ ಚುನಾವಣಾ ಆಯೋಗವೇ ಭರಿಸುತ್ತದೆ.

click me!