ಒಂದೇ ಕ್ಷೇತ್ರದಿಂದ 179 ರೈತರು ಚುನಾವಣೆಯಲ್ಲಿ ಸ್ಪರ್ಧೆ

Published : Apr 08, 2019, 10:10 AM IST
ಒಂದೇ ಕ್ಷೇತ್ರದಿಂದ 179 ರೈತರು ಚುನಾವಣೆಯಲ್ಲಿ ಸ್ಪರ್ಧೆ

ಸಾರಾಂಶ

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಅಭ್ಯರ್ಥಿಗಳು ಚುನಾವಣಾ ತಯಾರಿಯಲ್ಲಿ ತೊಡಗಿದ್ದಾರೆ. ಇತ್ತ ಸಿಎಂ ಪುತ್ರಿ ವಿರುದ್ಧ ನಿಜಾಮಬಾದ್ ನಲ್ಲಿ ಸ್ಪರ್ಧೆ ಮಾಡಿರುವ ರೈತರು ಬೃಹತ್ ಸಮಾವೇಶ ನಡೆಸಲು ಸಜ್ಜಾಗಿದ್ದಾರೆ. 

ಹೈದರಾಬಾದ್:  ಅನ್ನದಾತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಜಕೀಯ ಪಕ್ಷಗಳ ಗಮನ ಸೆಳೆಯುವ ನಿಟ್ಟಿನಲ್ಲಿ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಪುತ್ರಿ ಕೆ.ಕವಿತಾ ವಿರುದ್ಧವೇ ಅಖಾಡಕ್ಕಿಳಿದ  179 ರೈತರು ಏ.9 ರಂದು ಬೃಹತ್ ಸಾರ್ವಜನಿಕ ಸಭೆ ನಡೆಸಲಿದ್ದಾರೆ.

ರೈತರಲ್ಲಿರುವ ಐಕ್ಯತೆ ಭಾವನೆಯನ್ನು ತೋರಿಸುವ ನಿಟ್ಟಿನಲ್ಲಿ ನಿಜಾಮಾಬಾದ್‌ನ ಬಳಿಯಿರುವ ಅರ್ಮೂರ್ ಎಂಬಲ್ಲಿ ಬುಧವಾರ ಸಾರ್ವಜನಿಕ ಸಭೆ ನಡೆಸಲಾಗುತ್ತದೆ ಎಂದು ರೈತ ಮುಖಂಡರು ತಿಳಿಸಿದರು.

ನಿಜಾಮಾಬಾದ್ ಲೋಕಸಭಾ ಕ್ಷೇತ್ರದಲ್ಲಿ ತೆಲಂಗಾಣ ಸಿಎಂ ಕೆಸಿಆರ್ ಪುತ್ರಿ ಕವಿತಾ ಹಾಗೂ 179 ರೈತರು ಸೇರಿದಂತೆ ಒಟ್ಟು 185 ಮಂದಿ ಸ್ಪರ್ಧಿಸಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!