‘ದೇಶದಾದ್ಯಂತ ಮೋದಿ ಪಡೆ ಹೆಚ್ಚು ಸ್ಥಾನದಲ್ಲಿ ಗೆಲ್ಲಲಿದೆ : ಇಲ್ಲಿ ಅಸಾಧ್ಯ’

Published : Apr 07, 2019, 09:01 AM IST
‘ದೇಶದಾದ್ಯಂತ ಮೋದಿ ಪಡೆ ಹೆಚ್ಚು ಸ್ಥಾನದಲ್ಲಿ ಗೆಲ್ಲಲಿದೆ : ಇಲ್ಲಿ ಅಸಾಧ್ಯ’

ಸಾರಾಂಶ

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ಸಂದರ್ಭದಲ್ಲಿ ದೇಶದಲ್ಲಿ ಮೋದಿ ನೇತೃತ್ವದ ಬಿಜೆಪಿ ಹೆಚ್ಚು ಸ್ಥಾನ ಪಡೆದುಕೊಳ್ಳಲಿದೆ. ಆದರೆ ಈ ರಾಜ್ಯದಲ್ಲಿ ಮಾತ್ರ ಅಸಾಧ್ಯ ಎಂದು ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ. 

ಹೈದ್ರಾಬಾದ್ : ವೈಎಸ್ ಆರ್ ಕಾಂಗ್ರೆಸ್ ಮುಖಂಡ ಜಗನ್ ಮೋಹನ್ ರೆಡ್ಡಿ  ಲೋಕಸಭಾ ಚುನಾವಣಾ ಬೆನ್ನಲ್ಲೇ ನರೇಂದ್ರ  ಮೋದಿ ನೇತೃತ್ವದ ಸರ್ಕಾರ ಐದು ವರ್ಷದಲ್ಲಿ ಒಳ್ಳೆ ಆಡಳಿತ ನೀಡಿದೆ ಎಂದಿದ್ದಾರೆ. 

ದೇಶದಲ್ಲಿ ಒಳ್ಳೆ ಆಡಳಿತ ನಡೆಸಿದ್ದು, ಆಂಧ್ರ ಪ್ರದೇಶಕ್ಕೂ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉತ್ತಮ ಕೊಡುಗೆ ನೀಡಿದೆ ಎಂದಿದ್ದಾರೆ. 

ಅಲ್ಲದೇ ದೇಶದಲ್ಲಿ ಇನ್ನೇನು ಕೆಲವೇ ದಿನದಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಒಳ್ಳೆಯ ಫಲಿತಾಂಶ ಪಡೆದುಕೊಳ್ಳಲಿದೆ. ಆದರೆ ಆಂಧ್ರ ಪ್ರದೇಶದಲ್ಲಿ  ಮಾತ್ರ ಸಾಧ್ಯವಿಲ್ಲ ಎಂದಿದ್ದಾರೆ. 

ಬೇರೆ ಪ್ರಧಾನಿಗಳಿಗಿಂತ ಉತ್ತಮ ಎನಿಸಿಕೊಂಡಿದ್ದು, ನೀಡಿದ ಕೆಲ ಭರವಸೆಗಳನ್ನು ಈಡೇರಿಸಿದ್ದಾರೆ ಎಂದರು. 

ಮಾರ್ಚ್ 2018 ರಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ NDA ಪಡೆಯಲ್ಲಿದ್ದು, ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನ ಮಾನ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಯಿತೆಂದು ಒಕ್ಕೂಟದಿಂದ ಹೊರನಡೆದಿದ್ದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!