ಮೋದಿ ಮೇಲೆ ಮುನಿಸು: ಕಾಂಗ್ರೆಸ್- ಎನ್‌ಸಿಪಿಗೆ ರಾಜ್ ಠಾಕ್ರೆ ಪರೋಕ್ಷ ಬೆಂಬಲ!

By Web DeskFirst Published Apr 7, 2019, 8:36 AM IST
Highlights

ಮಹಾರಾಷ್ಟ್ರದಲ್ಲಿ ಮೋದಿ-ಶಾ ಜೋಡಿಗೆ ರಾಜ್ ಠಾಕ್ರೆ ಕಂಟಕ?| ಮೋದಿ-ಶಾ ಜೋಡಿ ವಿರುದ್ಧ ರಾಜ್ ಠಾಕ್ರೆ ಪ್ರಚಾರ| ಸ್ಪರ್ಧೆ ಮಾಡದಿದ್ದರೂ ಮಹಾರಾಷ್ಟ್ರದಲ್ಲಿ ರಾಜ್ ಠಾಕ್ರೆ ಮಿಂಚಿನ ಪ್ರಚಾರ| ಕಾಂಗ್ರೆಸ್-ಎನ್‌ಸಿಪಿಗೆ ರಾಜ್ ಠಾಕ್ರೆ ಪರೋಕ್ಷ ಬೆಂಬಲ| ದೇಶದ ಒಳಿತಿಗಾಗಿ ಮೋದಿ-ಶಾ ಜೋಡಿ ತೊಲಗಬೇಕು ಎಂದ ಎಂಎನ್‌ಎಸ್ ಮುಖ್ಯಸ್ಥ|

ಮುಂಬೈ(ಏ.07): 2014ರ ಲೋಕಸಭೆ ಚುನಾವಣೆ ವೇಳೆ ನರೇಂದ್ರ ಮೋದಿ ಪ್ರಧಾನಿ ಹುದ್ದೆಗೆ ಸೂಕ್ತ ವ್ಯಕ್ತಿ ಎಂದು ಹೇಳಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ, 2019ರಲ್ಲಿ ಸಂಪೂರ್ಣವಾಗಿ ಉಲ್ಟಾ ಹೊಡೆದಿದ್ದಾರೆ.

ಪ್ರಧಾನಿ ಮೋದಿ-ಅಮಿತ್ ಶಾ ಜೋಡಿ ವಿರುದ್ಧ ತೊಡೆ ತಟ್ಟಿರುವ ರಾಜ್ ಠಾಕ್ರೆ, ದೇಶದ ಒಳಿತಿಗಾಗಿ ಈ ಜೋಡಿಯನ್ನು ಮನೆಗೆ ಕಳುಹಿಸುವುದು ಸೂಕ್ತ ಎಂದು ಹೇಳಿದ್ದಾರೆ.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎಂಎನ್‌ಎಸ್ ಸ್ಪರ್ಧೆ ಮಾಡುತ್ತಿಲ್ಲವಾದರೂ, ಮೋದಿ-ಶಾ ಜೋಡಿ ವಿರುದ್ಧ ಮಹಾರಾಷ್ಟ್ರದಲ್ಲಿ ಪ್ರಚಾರ ಮಾಡುವುದಗಿ ರಾಜ್ ಠಾಕ್ರೆ ಘೋಷಿಸಿದ್ದಾರೆ.

ತಾವು ಮಹಾರಾಷ್ಟ್ರದಲ್ಲಿ ಬಿಜೆಪಿ ವಿರುದ್ಧ ಪ್ರಚಾರ ಮಡಲಿದ್ದು, ಇದರಿಂದ ಕಾಂಗ್ರೆಸ್-ಎನ್‌ಸಿಪಿ ಮೈತ್ರಿಗೆ ಅನುಕೂಲವಾದರೆ ಆಗಲಿ ಎಂದು ರಾಜ್ ಠಾಕ್ರೆ ಮಾರ್ಮಿಕವಾಗಿ ನುಡಿದಿದ್ದಾರೆ.

ಪುಲ್ವಾಮಾ ದಾಳಿಯ ಕುರಿತು ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ರಾಜ್ ಠಾಕ್ರೆ, 50 ಯೋಧರನ್ನು ಬಲಿಪಡೆದ ದಾಳಿಯ ಕುರಿತು ಮಾಹಿತಿ ಕಲೆ ಹಾಕುವಲ್ಲಿ ಗುಪ್ತಚರ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹರಿಹಾಯ್ದರು.

click me!