ಅಮಿತ್ ಶಾ ಟಿಕೆಟ್ ಫೈನಲ್ ಮಾಡ್ತಾರೆ, ಮೋದಿ ಸುಮ್ನೆ ಹೂಂ ಅಂತಾರೆ

By Web DeskFirst Published Mar 27, 2019, 4:34 PM IST
Highlights

ಬಿಜೆಪಿ ಟಿಕೆಟ್ ಪಕ್ಕಾ ಮಾಡೋದು ಮೋದಿಯಲ್ಲ, ಅಮಿತ್ ಶಾ | ಅಮಿತ್ ಶಾ ಗ್ರೌಂಡ್ ರಿಪೋರ್ಟ್, ಅಭಿಪ್ರಾಯ ಸಂಗ್ರಹಿಸಿ ಫೈನಲ್ ಮಾಡ್ತಾರೆ | 

ಬೆಂಗಳೂರು (ಮಾ. 27): ಮಧ್ಯರಾತ್ರಿ 1 ಗಂಟೆಗೆ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ, ಕರ್ನಾಟಕ ವಿಷಯವನ್ನು ಚರ್ಚೆಗೆ ತೆಗೆದುಕೊಂಡಾಗ ಮೋದಿ ಸಾಹೇಬರು ಮೊದಲ ಹತ್ತು ನಿಮಿಷ ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ನಾಯಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ತೇಜಸ್ವಿನಿ ಹರಕೆ ಕುರಿ ಆದದ್ದು ಹೀಗೆ...

‘ನೀವು ಈ ತಿಂಗಳು, ಮುಂದಿನ ತಿಂಗಳು ಕುಮಾರಸ್ವಾಮಿ ಸರ್ಕಾರ ಬೀಳುತ್ತೆ ಎಂದು ಹೇಳುತ್ತಾ ಬಂದಿರಿ, ಏನು ಆಗಲಿಲ್ಲ. ಸುಮ್ಮನೆ ದೇಶದ ತುಂಬೆಲ್ಲಾ ‘ಕರ್ನಾಟಕದ ನಾಟಕ’ ಎಂದು ಚರ್ಚೆ ಆಗುತ್ತದೆ. ಅದರಲ್ಲೇ ಬ್ಯುಸಿ ಆಗಿ ನೀವು ಚುನಾವಣೆ ತಯಾರಿ ಸರಿಯಾಗಿ ಮಾಡಿಲ್ಲ. ಏನು ಮಾಡುತ್ತಿರೋ ಗೊತ್ತಿಲ್ಲ, 22 ಸೀಟ್ ಗೆಲ್ಲಬೇಕು’ ಎಂದು ಹೇಳಿದರಂತೆ.

ಬಿಜೆಪಿ ತೊರೆದು ಚೌಕಿದಾರನಿಗೆ ರಾಜೀನಾಮೆ ಪತ್ರ ಕೊಟ್ಟ ಸಂಸದ!

ಮುಂದೆ ಟಿಕೆಟ್ ಬಗ್ಗೆ ಅಮಿತ್ ಶಾನೇ ಸಭೆಯಲ್ಲಿ ಜಾಸ್ತಿ ಮಾತನಾಡಿದರಾದರೂ ಕೂಡ ಮಂಡ್ಯದ ವಿಷಯ ಚರ್ಚೆಗೆ ಬಂದಾಗ ಮಾತ್ರ, ಮೋದಿ ಅಲ್ಲಿನ ಗ್ರೌಂಡ್ ಸ್ಥಿತಿ ಏನಿದೆ ಎಂದು ಕೇಳಿ ತಿಳಿದುಕೊಂಡರಂತೆ. ಸಭೆಯಲ್ಲಿದ್ದವರು ಹೇಳುವ ಪ್ರಕಾರ, ಮೋದಿ ಎದುರು ಕ್ಷೇತ್ರದ ಬಗ್ಗೆ ಡೀಟೈಲ್ ಚರ್ಚೆ ಆಗೋಲ್ಲ, ಅದಕ್ಕಿಂತ ಮೊದಲೇ ಅಮಿತ್ ಶಾ ರಾಜ್ಯ ನಾಯಕರ ಜೊತೆ ಕುಳಿತುಕೊಂಡು ಸಿಂಗಲ್ ನೇಮ್ ಮಾಡಿ ಮೋದಿ ಎದುರು ಒಯ್ಯುತ್ತಾರೆ. ಮೋದಿ ಎದುರು ಚರ್ಚೆ ಕಡಿಮೆ, ಸರ್ವಸಮ್ಮತ ಅಭ್ಯರ್ಥಿಗಳನ್ನು ಜೆ.ಪಿ ನಡ್ಡಾ ಓದುತ್ತಾ ಹೋದರೆ ಪೆಂಡಿಂಗ್  ಇಟ್ಟಿದ್ದನ್ನು ಅಮಿತ್ ಶಾ ನಿರ್ಧರಿಸಿ ಪಟ್ಟಿ ಪ್ರಕಟಿಸುತ್ತಾರೆ. 

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ  ಕ್ಲಿಕ್ ಮಾಡಿ 

click me!