ಸಿನಿಮಾ ನಟರೇನೋ ಜೋರಾಗಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಅವರಿಗೆಲ್ಲ ಆತಂಕ ತರುವಂತಹ ದೂರೊಂದು ಇದೀಗ ದಾಖಲಾಗಿದೆ.
ಬಾಗಲಕೋಟೆ[ಮಾ. 20] ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಚಿತ್ರನಟರ ಚಿತ್ರಪ್ರದರ್ಶನ ಸ್ಥಗಿತಗೊಳಿಸುವಂತೆ ಚುನಾವಣಾಧಿಕಾರಿಗೆ ದೂರು ಸಲ್ಲಿಕೆಯಾಗಿದೆ. ಚುನಾವಣೆಗೆ ಸ್ಪರ್ಧಿಸಿದ ಸುಮಲತಾರ ಪತಿ ರೆಬಲ್ ಸ್ಟಾರ್ ಅಂಬರೀಶ್, ನಟ ನಿಖಿಲ್ ಕುಮಾರಸ್ವಾಮಿ, ರಾಧಿಕಾ ಕುಮಾರಸ್ವಾಮಿ ಚಿತ್ರ ಪ್ರಸಾರ ಸ್ಥಗಿತಗೊಳಿಸಬೇಕು ಎಂದು ಬಾಗಲಕೋಟೆಯ ಯಲ್ಲಪ್ಪ ಹೆಗ್ಡೆ ಎಂಬುವರು ದೂರು ಸಲ್ಲಿಸಲಿದ್ದಾರೆ.
ಯುವ ಶಕ್ತಿ ಹೋರಾಟ ಸಮಿತಿ ರಾಜ್ಯ ಸಂಚಾಲಕರಾಗಿರುವ ಯಲ್ಲಪ್ಪ ಹೆಗ್ಡೆ ನಟರಾದ ಯಶ್,ದರ್ಶನ,ದೊಡ್ಡಣ್ಣ, ರಮ್ಯಾ, ಉಮಾಶ್ರೀ,ಜಗ್ಗೇಶ್ , ಪ್ರಕಾಶ್ ರೈ ಸಿನಿಮಾ,ಹಾಡು ಪ್ರಸಾರ ಮಾಡದಂತೆಯೂ ಕೋರಿದ್ದಾರೆ.
ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾದವರ ಸಿನಿಮಾ, ಹಾಡು ಟಿವಿಯಲ್ಲಿ ಪ್ರಸಾರವಾಗುತ್ತಿವೆ. ಮತದಾರರ ಮೇಲೆ ಸಿನಿಮಾ ಹಾಡು ಪ್ರಭಾವ ಬೀರುತ್ತವೆ. ಮುಕ್ತ, ನ್ಯಾಯ ಸಮ್ಮತ ಚುನಾವಣೆ ನಡೆಯಲು ಆಯೋಗ ಕ್ರಮಕೈಗೊಳ್ಳಬೇಕೆಂದು ವಿನಂತಿ ಮಾಡಿರುವ ಹೆಗ್ಡೆ ಅಂಚೆ ಮೂಲಕ ಬೆಂಗಳೂರಿನ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.