
ಹೈದರಾಬಾದ್[ಏ.01]: ವೈ.ಎಸ್.ಆರ್ ಕಾಂಗ್ರೆಸ್ ಸಂಸ್ಥಾಪಕ ವೈ. ಎಸ್. ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ಶರ್ಮಿಳಾ ಅವರ ಕೈ ಬೆರಳಿನಲ್ಲಿದ್ದ ಚಿನ್ನದ ಉಂಗುರವನ್ನು ಅಭಿಮಾನಿಯೊಬ್ಬ ಲಪಟಾಯಿಸಿದ ಘಟನೆ ನಡೆದಿದೆ.
ಇಲ್ಲಿನ ರ‌್ಯಾಲಿಯೊಂದರಲ್ಲಿ ತಾವಿದ್ದ ವಾಹನದಿಂದಲೇ ಅಭಿಮಾನಿಗಳತ್ತ ಕೈಬೀಸುತ್ತಿದ್ದ ಶರ್ಮಿಳಾ ಅವರಿಗೆ ಹಸ್ತಲಾಘವ ನೀಡಲು ಅಭಿಮಾನಿಗಳು ಮುಗಿ ಬಿದ್ದಿದ್ದರು. ಈ ವೇಳೆ ಶರ್ಮಿಳಾ ಅವರತ್ತ ಕೈಚಾಚಿದ ಅಭಿ ಮಾನಿಯೊಬ್ಬ, ಕ್ಷಣಾರ್ಧದಲ್ಲಿ ಉಂಗುರು ತೆಗೆದುಕೊಂಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇತ್ತೀಚೆಗಷ್ಟೇ ಪ್ರಜಾಶಾಂತಿ ಪಕ್ಷದ ಅಧ್ಯಕ್ಷ ಕೆ.ಎ.ಪೌಲ್ ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ವ್ಯಕ್ತಿಯೊಬ್ಬ ಕಿತ್ತು ಪರಾರಿಯಾಗಿದ್ದ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...